ಮನೋರಂಜನೆ

ನೀನಾಸಂ ಸತೀಶ್‌ಗೆ ರೂಮರ್‌ಗಳ ಬಗ್ಗೆ ಯೋಚಿಸಲೂ ಬಿಡುವಿಲ್ಲ!

ನೀನಾಸಂ ಸತೀಶ್‌ಗೆ ರೂಮರ್‌ಗಳ ಬಗ್ಗೆ ಯೋಚಿಸಲೂ ಬಿಡುವಿಲ್ಲ..!

 

 

ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡು ಮುಂದಿನ ವರ್ಷದ ಆದಿಯಿಂದ ಅಂತ್ಯದವರೆಗೂ ಪಕ್ಕಾ ಬ್ಯುಸಿಯಾಗಿರುವವರು ನೀನಾಸಂ ಸತೀಶ್. ಆದರೆ ಅದೇಕೋ ಅವರು ಒಪ್ಪಿಕೊಂಡು ಸದ್ದು ಮಾಡಿದ್ದ ಚಿತ್ರಗಳು ‘ನಿಂತು ಹೋಗಿದೆಯಂತೆ ಎಂಬ ರೂಮರ್‌ಗೆ ತುತ್ತಾಗುತ್ತಿವೆ. ಈ ಬಗ್ಗೆ ಅಸಲೀ ವಿಚಾರ ಕೆದಕಿದರೆ ವಾಸ್ತವಾಂಶ ಬೇರೆಯದ್ದೇ ಇದೆ!

 

 

ಇತ್ತೀಚೆಗಷ್ಟೇ ಟಾಕ್ ಕ್ರಿಯೇಟ್ ಮಾಡಿದ್ದ ನೀನಾಸಂ ಸತೀಶ್ ನಿರ್ಮಿಸಿ, ಅಭಿನಯಿಸಬೇಕಿದ್ದ ‘ರಾಮನು ಕಾಡಿಗೆ ಹೋದನು ಚಿತ್ರವೂ ನಿಂತು ಹೋಯ್ತೆಂಬ ರೂಮರ್‌ಗೆ ಸಿಲುಕಿಕೊಂಡಿದೆ. ಆದರೆ ಸತೀಶ್ ಒಪ್ಪಿಕೊಂಡಿರೋ ಅಷ್ಟೂ ಚಿತ್ರಗಳನ್ನು ಸಂಭಾಳಿಸಲಾರದೆ ಈ ಚಿತ್ರವನ್ನು ಕೊಂಚ ತಡವಾಗಿ ಶುರು ಮಾಡೋ ಯೋಜನೆ ಹಾಕಿಕೊಂಡಿದ್ದಾರೆ!

 

 

ನಿಂತೇ ಹೋಯ್ತೆಂಬಂತೆ ಗುಲ್ಲಿಗೆ ಕಾರಣವಾಗಿದ್ದ ಅಯೋಗ್ಯ ಚಿತ್ರವೂ ಆರಂಭವಾಗಿದೆ. ನೀನಾಸಂ ಸತೀಶ್ ಅಭಿನಯದಲ್ಲೇ ಮೂಡಿ ಬರುತ್ತಿರೋ ಚಂಬಲ್ ಚಿತ್ರ ಪೂರ್ಣಗೊಂಡಿದೆ. ಗೋಧ್ರಾ ಚಿತ್ರದ ಹಾಡುಗಳು ಮಾತ್ರ ಬಾಕಿ ಉಳಿದುಕೊಂಡಿವೆ. ಇದರ ಜೊತೆಜೊತೆಗೇ ತಮಿಳಿನದ್ದೊಂದು ಪ್ರಾಜೆಕ್ಟ್ ಮತ್ತು ಗಣೇಶ ಮೆಡಿಕಲ್ಸ್ ಚಿತ್ರಗಳೂ ಚಾಲ್ತಿಯಲ್ಲಿವೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಮುಂದಿನ ವರ್ಷವಿಡೀ ನೀನಾಸಂ ಸತೀಶ್ ಫುಲ್ ಬ್ಯುಸಿಯಾಗಿರಲಿದ್ದಾರೆ. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರೋ ಸತೀಶ್ ಈ ಒತ್ತಡದಿಂದ ಕೊಂಚ ರಿಲೀಫಾಗೋ ಉದ್ದೇಶದಿಂದ ರಾಮನು ಕಾಡಿಗೆ ಹೋದನು ಚಿತ್ರವನ್ನು ಸ್ವಲ್ಪ ಮುಂದೂಡಿದ್ದಾರಷ್ಟೆ. ಹೀಗಿರೋವಾಗ ರೂಮರುಗಳ ಬಗ್ಗೆ ತಲೆ ಕೆಡಿಸಿಕೊಳ್ಳಲೂ ಅವರಿಗೆ ಬಿಡುವು ಸಿಗೋದು ಡೌಟು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top