ಮನೋರಂಜನೆ

ತಮಿಳು ಸ್ಟಾರ್ ವಿಜಯ್’ಗೆ ಹೀರೋಯಿನ್ ಆಗಿ ಶ್ರದ್ಧಾ ಶ್ರೀನಾಥ್..?

ತಮಿಳು ಸ್ಟಾರ್ ವಿಜಯ್’ಗೆ ಹೀರೋಯಿನ್ ಆಗಿ ಶ್ರದ್ಧಾ ಶ್ರೀನಾಥ್..?

 

 

ಯು ಟರ್ನ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಕನ್ನಡದ ಹುಡುಗಿ ಶ್ರದ್ಧಾ ಶ್ರೀನಾಥ್‌ ಮಣಿರತ್ನಂ ನಿರ್ದೇಶನದ ‘ಕಾಟ್ರು ವಿಳೆಯಾಡೈ’ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ನಟಿಸಿ, ಮಾಧವನ್ ಎದುರು ‘ವಿಕ್ರಮ್ ವೇದ’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈಗ ಮತ್ತೊಬ್ಬ ತಮಿಳು ಸ್ಟಾರ್ ಜೊತೆ ನಟಿಸಲು ರೆಡಿಯಾಗಿದ್ದಾರೆ ಶ್ರದ್ಧಾ.

 

 

ಹೌದು, ಇಳಯದಳಪತಿ ವಿಜಯ್’ ಅಭಿನಯದ 62ನೇ ಚಿತ್ರಕ್ಕೆ ಶ್ರದ್ದಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ತಮಿಳಿನಲ್ಲಿ ಇದು ಅವರ ಐದನೇ ಚಿತ್ರ. ಕನ್ನಡ ಉಳಿದವರು ಕಂಡಂತೆ ಚಿತ್ರದ ತಮಿಳು ರಿಮೇಕ್ ಆಗಿರುವ ‘ರಿಚ್ಚಿ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾದ್ಯಮದವರು ಇಳಯದಳಪತಿ ವಿಜಯ್’ ಅವರ 62ನೇ ಚಿತ್ರಕ್ಕೆ ನೀವೇ ಹೀರೋಯಿನ್ ಅಂತ ಎಲ್ಲಕಡೆ ನ್ಯೂಸ್ ಹಬ್ಬಿದೆ ಎಂದು ಪ್ರಶ್ನಿಸಿದಾಗ “ನಾನೇ ಹೀರೋಯಿನ್ ಅಂತ ಅಫೀಶಿಯಲ್ ಆಗಿ ಅನೌನ್ಸ್ ಆದರೆ ಖಂಡಿತ ಖುಷಿ ಆಗುತ್ತೆ” ಎಂದು ನಗುತ್ತಲೇ ಶ್ರದ್ದಾ ಉತ್ತರಿಸಿದ್ದಾರೆ.

 

 

ಅಂದಹಾಗೆ ಸದ್ಯ ಶ್ರದ್ಧಾ ತುಂಬಾ ಬ್ಯುಸಿಯಾಗಿದ್ದು ಕನ್ನಡದ ‘ಗೋದ್ರಾ’ ಎಂಬ ಚಿತ್ರದಲ್ಲಿ ನೀನಾಸಂ ಸತೀಶ್ ಅವರಿಗೇ ನಾಯಕಿಯಾಗಿ ಹಾಗು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿರುವ ‘ಶಾದಿಭಾಗ್ಯ’ ಚಿತ್ರದಲೂ ಕೂಡ ನಟಿಸುತ್ತಿದ್ದಾರೆ. ಶ್ರಾದ್ಧ ಅಭಿನಯದ ‘ರಿಚ್ಚಿ’ ತಮಿಳು ಚಿತ್ರ ಡಿಸೆಂಬರ್ 08 ರಂದು ರಿಲೀಸ್ ಆಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top