ಆರೋಗ್ಯ

ಪುರುಷತ್ವ ಸಮಸ್ಯೆ ನಿವಾರಣೆಗೆ ವೀರ್ಯಾಣುಗಳ ಸಂಖ್ಯೆ ಹಾಗು ಗುಣಮಟ್ಟ ತಿಳ್ಕೊಬೇಕಾದ್ರೆ ಸ್ಮಾರ್ಟ್ ಫೋನ್ ಇದ್ರೆ ಸಾಕು ಅಂತ ಕೇಳಿದ್ರೆ ಆಶ್ಚರ್ಯ ಆಗ್ದೇ ಇರಲ್ಲ !

ಬೇರೆ ಬೇರೆ ಕಾರಣಗಳಿಂದ ಪುರುಷರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ , ಆಧುನಿಕ ಜೀವ ಶೈಲಿ , ಒತ್ತಡ , ವೀರ್ಯಾಣುಗಳ ಗುಣಮಟ್ಟ ಹೀಗೆ ಪಟ್ಟಿ ಮುಂದುವರಿಯುತ್ತಾ ಹೋಗುತ್ತದೆ .

ಲೈಂಗಿಕ ಆಸಕ್ತಿ ಆಸಕ್ತಿ ಕಡಿಮೆಯಾಗಲು 5 ಪ್ರಮುಖ ಕಾರಣಗಳು ಇಲ್ಲಿವೆ ..

 

ಮಾನಸಿಕ ಒತ್ತಡ :

 

 

ಕೆಲಸದ ಟೆನ್ಶನ್ ಒಂದು ಕಡೆಯಾದರೆ ಮನೆಯ ಟೆನ್ಶನ್ ಇನ್ನೊಂದು ಕಡೆ ,ಇನ್ನೊಂದು ವರ್ಗವಿದೆ ಅದು ಯಾವಾಗಲೂ ದುಡ್ಡಿನ ಹಿಂದೆಯೇ ಓಡುತ್ತಾ ಇರುತ್ತಾರೆ . ಇನ್ನು ರಾತ್ರಿ ಪಾಳಿಯದಲ್ಲಿ ಕೆಲಸ ಮಾಡುವವರ ಸ್ಥಿತಿ ದೇವರಿಗೆ ಪ್ರೀತಿ .

ಹಾರ್ಮೋನುಗಳ ಕೊರತೆ :

 

 

ಸರಿಯಾದ ಆಹಾರ ಕ್ರಮ ಹಾಗು ಜೀವನ ಶೈಲಿ ಇಲ್ಲದೆ ಹಾರ್ಮೋನುಗಳು ಉತ್ಪತ್ತಿ ಯಾಗುವುದಿಲ್ಲ , ಈ ಹಾರ್ಮೋನುಗಳಲ್ಲಿ ಟೆಸ್ಟೋಸ್ಟೀರಾನ್ ಕೂಡ ಒಂದು ವೀರ್ಯಾಣುಗಳ ಗುಣಮಟ್ಟ ಮತ್ತು ಸಂಖ್ಯೆ ವೃದ್ಧಿಸಲು ಮತ್ತು ಕಾಮಾಸಕ್ತಿಯನ್ನು ಹೆಚ್ಚಿಸಲು ಅವಶ್ಯಕವಾಗಿ ಈ ಹಾರ್ಮೋನ್ ಬೇಕು .

 

ಔಷಧಿಗಳು :

 

 

ನಾವು ನಿದ್ದೆ ಬರುತ್ತಿಲ್ಲ ಎಂದು ತೆಗೆದುಕೊಳ್ಳುವ ಮಾತ್ರೆಗಳು , ನೋವು ನಿರೋಧಕ ಮಾತ್ರೆಮದ್ದುಗಳು ಟೆಸ್ಟೋಸ್ಟೀರಾನ್ ಮಟ್ಟವನ್ನು ತಗ್ಗಿಸುತ್ತದೆ .

 

ರಕ್ತದೊತ್ತಡ ಮತ್ತು ಖಿನ್ನತೆ :

 

 

ಮೊದಲೇ ತಿಳಿಸಿರುವ ಹಾಗೆ ಲೈಂಗಿಕ ಕ್ರಿಯೆ ಮಾಡುವಾಗ ಶಿಶ್ನಗಳಿಗೆ ರಕ್ತದ ಹರಿವು ಹೆಚ್ಚುತ್ತದೆ ಒಂದು ವೇಳೆ ಕಡಿಮೆ ರಕ್ತದ ಒತ್ತಡ ಇದ್ದಾರೆ ಬಹಳ ಬೇಗ ಸುಸ್ತಾಗುತ್ತದೆ ಮತ್ತು ಆಂಟಿ ಡಿಪ್ರೆಸಂಟ್ ಅಂದರೆ ಖಿನ್ನತೆ ನಿವಾರಣೆಗೆ ಬಳಸುವ ಮದ್ದುಗಳು ಸಹ ಹಾರ್ಮೋನುಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ .

 

ಖಾಯಿಲೆಗಳು :

 

ಬಹಳ ದಿನಗಳಿಂದ ಕಾಡುತ್ತಿರುವ ಖಾಯಿಲೆಗಳು ಅಥವಾ ಲೈಂಗಿಕ ರೋಗಗಳು ಸಹ ಲೈಗಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ .

ವೀರ್ಯಾಣು ಸಂಖ್ಯೆ ಹಾಗು ಗುಣಮಟ್ಟ ಹೆಚ್ಚಿಸಲು ವಿಧವಾದ ಪರೀಕ್ಷೆಗಳನ್ನು ಮಾಡಿಸಲು ಕೆಲವರಿಗೆ ಭಯವಾದರೆ ಇನ್ನು ಕೆಲವರಿಗೆ ಮುಜುಗರವಾಗುತ್ತದೆ , ಆದರೆ ಈಗ ಕೇವಲ ಸ್ಮಾರ್ಟ್ ಫೋನ್ ನಿಮ್ಮ ಬಳಿ ಇದ್ದರೆ , ವೀರ್ಯಾಣು ಸಂಖ್ಯೆ ಹಾಗು ಗುಣಮಟ್ಟ ತಿಳಿದುಕೊಳ್ಳಬಹುದು ಅಷ್ಟೇ ಅಲ್ಲದೆ ಸ್ಮಾರ್ಟ್ ಫೋನ್ ಸಹಾಯದಿಂದ ನಿಮ್ಮ ವೀರ್ಯಾಣುಗಳನ್ನು ನೀವೇ ನೋಡಬಹುದು .

ಅಮೆರಿಕದ ಟೆಕ್ನಾಲಜಿ ಸಂಸ್ಥೆ ‘ಮೆಡಿಕಲ್ ಎಲೆಕ್ಟ್ರಾನಿಕ್ ಸಿಸ್ಟಮ್ಸ್’ ಯೋ ಸ್ಪೆಮ್ ಟೆಸ್ಟ್ ಅಭಿವೃದ್ಧಿಪಡಿಸಿದೆ. ಕೇವಲ 50 ಡಾಲರ್ ಖರ್ಚು ಮಾಡಿದರೆ ಸಾಕು ನಿಮ್ಮ ಮನೆಯಲ್ಲಿಯೇ ಬಳಸಿಕೊಳ್ಳಬಹುದು , ಆಹಾರ ಮತ್ತು ಡ್ರಗ್ ಅಡ್ಮಿನಿಸ್ಟ್ರೇಷನ್ ಈ ಕಿಟ್ ಅನ್ನು ಅಂಗೀಕಾರಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top