ಸಮಾಚಾರ

ಮದುವೆಯಾದ ಮೊದಲ ರಾತ್ರಿಯೇ ವರನಿಗೆ ಚಳ್ಳೆಹಣ್ಣು ತಿನಿಸಿದ ವಧು !

ಹೌದು ಮದುವೆಯಾದ ಮೊದಲ ರಾತ್ರಿಯೇ ವರನಿಗೆ ಚಳ್ಳೆಹಣ್ಣು ತಿನಿಸಿ ವಧು ಪರಾರಿಯಾಗಿದ್ದಾಳೆ , ನವೆಂಬರ್‌ 29 ರಂದು ಬಿಕ್ರಮ್‌ಪುರ್‌ ನ ಸಂಜಯ್‌ ಎಂಬುವನ ಮದುವೆ ಸುನೀತಾ ಎಂಬ ವಧುವಿನ ಜೊತೆ ನಡೆದಿತ್ತು , ಮದುವೆ ದಿನದ ವರೆಗೂ ಯಾವುದೇ ತೊಂದರೆ ಇರಲಿಲ್ಲ , ಡಿಸೆಂಬರ್‌ ೧ ತಾರೀಖು ಪ್ರಸ್ತದ ದಿನ ಮೊದಲ ರಾತ್ರಿಯ ಎಲ್ಲ ತಯಾರಿ ಮಾಡಿದ್ದ ವರನ ಕಡೆಯವರಿಗೆ ಶಾಕ್ ಕಾದಿತ್ತು .

 

 

ಮೊದಲ ರಾತ್ರಿ ತೆಗೆದುಕೊಂಡು ಹೋದ ಹಾಲಿನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕುಡಿಸಿ ಸಂಜಯ್‌ ನಿದ್ದೆಗೆ ಜಾರಿದ ಮೇಲೆ ಮನೆಯ ಸುತ್ತಲೂ ಕಣ್ಣಾಯಿಸಿ ಎಲ್ಲರು ನಿದ್ದೆ ಮಾಡಿದ್ದಾರೆಂದು ಖಾತ್ರಿಯಾದ ಮೇಲೆ ಮನೆಯ ಬೀರುವಿನಲ್ಲಿದ್ದ ಒಡವೆ , ಹಣ ,ಬೆಲೆ ಬಾಳುವ ಪಾತ್ರೆ ಪಗಡೆ ಎಲ್ಲವನ್ನು ತುಂಬಿಕೊಂಡು ಕಾಲ್ಕಿತ್ತಿದ್ದಾಳೆ .

ಬೆಳಗ್ಗೆ ನೋಡಿದಾಗ ಯಾರೋ ಕಳ್ಳ ಬಂದಿರಬಹುದು ಎಂದು ಕೊಂಡಿದ್ದಾರೆ ಆದರೆ ಸುನೀತಾ ಕಾಣದಿರುವುದು ನೋಡಿ ಆಕೆಯ ಮೇಲೆ ದೂರು ದಾಖಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top