ಕಿರುತೆರೆ

ದುರಹಂಕಾರಿ ಜಗನ್’ನ ಸೊಲ್ಲಡಗಿಸಿದ ರ‍್ಯಾಪ್‌ ಸ್ಟಾರ್ ಚಂದನ್!!!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ದುರಹಂಕಾರಿ ಜಗನ್’ನ ಸೊಲ್ಲಡಗಿಸಿದ ರ‍್ಯಾಪ್‌ ಸ್ಟಾರ್ ಚಂದನ್!!!

 

 

 

ಈ ಬಾರಿಯ ಬಿಗ್ ಬಾಸ್ ಮನೆಯ ಅಹಂಕಾರದ ಪಟ್ಟವನ್ನು ಗಾಂಧಾರಿ ಅಂತೊಂದು ತೋಪು ಸೀರಿಯಲ್ಲಿನ ನಾಯಕನಾಗಿದ್ದ ನಟ ಜಗನ್ ಸಾರಾಸಗಟಾಗಿ ಕಬಳಿಸಿಕೊಂಡಿದ್ದಾನೆ. ಮನೆ ಮಂದಿಯ ಜೊತೆ ತಾನೊಬ್ಬ ದೊಡ್ಡ ಸ್ಟಾರ್ ಅಂತೇ ವರ್ತಿಸುವ ಜಗನ್ ತನಗೆ ಸಿಟ್ಟು ಬಂದರೆ ಬಿಗ್‌ಬಾಸ್ ಮನೆಗೆ ಬೆಂಕಿ ಬೀಳುತ್ತದೆ ಎಂಬ ರೇಂಜಿಗೆ ಪೋಸು ಕೊಡುತ್ತಾನೇ. ಪದೇಪದೆ ಪುಟಗೋಸಿ ಕಳಚಿ ಬೀಳುವಂತೆ ಅಬ್ಬರಿಸುವ ಜಗನ್ ಮೊದ ಮೊದಲು ನಿಷ್ಠುರವಾದಿ ಎಂಬಂತೆ ಬಿಂಬಿಸಿಕೊಂಡು ಬಂದಿದ್ದರು ಈತನಿಗೀಗ ಅಹಂಕಾರ ಎಂಬುದೊಂದು ಕಾಯಿಲೆ ಎಂಬುದು ಎಲ್ಲರಿಗೂ ಅರ್ಥವಾಗಿದೆ!.

 

 

ಸಿಹಿಕಹಿ ಚಂದ್ರು, ಜಯಶ್ರೀನಿವಾಸನ್, ಸಮೀರ್ ಆಚಾರ್ಯ, ರಿಯಾಜ್ ಸೇರಿದಂತೆ ಎಲ್ಲರನ್ನೂ ಆವಾಜು ಹಾಕಿ ಕೆಣಕೋ ಈತನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಭುಗಿಲೆದ್ದಿದೆ. ವೀಕ್ಷಕರು ಜಗನ್ ಗೆ ಉಗಿದು ಉಪ್ಪಾಕುತ್ತಿದ್ದಾರೆ. ಇದೆಲ್ಲರ ನಡುವೆ ಮನೆಯ ಸದಸ್ಯರ ದಯೆಯಿಂದ ಕ್ಯಾಪ್ಟನ್ ಆಗಿರುವ ದೌಲತ್ತಿನ ದೊರೆಯ ಸೊಕ್ಕನ್ನು ಚಂದನ್ ಶೆಟ್ಟಿ ಮುರಿದಿದ್ದಾರೆ.

 

 

ಪ್ರಾಣಿಗಳು ಹಾಗೂ ಮನುಷ್ಯರ ನಡುವೆ ಇರುವ ಸಾಮರಸ್ಯವನ್ನು ಸ್ಪರ್ಧಿಗಳಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಗಂಧದ ಗುಡಿ ಎನ್ನುವ ಟಾಸ್ಕ್‌ಅನ್ನು ಬಿಗ್ ಬಾಸ್ ನೀಡಿದ್ದರು. ಇದರ ಅನ್ವಯ ಮನೆಯ ಸದಸ್ಯರನ್ನು ಕಾಡು ಪ್ರಾಣಿಗಳು ಹಾಗೂ ಕಾಡು ಜನರ ಎರಡು ಗುಂಪುಗಳನ್ನು ಮಾಡಿದ್ದರು. ಈ ಕಾಡಿಗೆ ಪಟ್ಟಣದಿಂದ ಅಕುಲ್ ಅವರು ರಿಂಗ್ ಮಾಸ್ಟರ್ ಆಗಿ ಬಂದಿದ್ದರು. ಅಕುಲ್ ಅವರು ಕಾಡು ಜನರ ಸಹಾಯದಿಂದ ಪ್ರಾಣಿಗಳನ್ನು ಸೆರೆ ಹಿಡಿಯಬೇಕಾಗಿತ್ತು ಅದರಂತೆ ಸೆರೆ ಹಿಡಿಯಲು ಅಕುಲ್ ಮತ್ತು ಚಂದನ್ ಬರುತ್ತಾರೆ.

 

 

ಅನುಪಮಾ(ಕೋತಿ) ಅವರನ್ನು ರಿಯಾಜ್-ಚಂದನ್ ಬಲೆ ಹಾಕಿ ಹಿಡಿದಾಗ, ದಿವಾಕರ್ ತಮ್ಮ ಬಿಗಿಮುಷ್ಟಿಯಲ್ಲಿ ಹಿಡಿಯಲು ಹೋದಾಗ ಆಯತಪ್ಪಿ ಎಲ್ಲರೂ ಕೆಳಗೆ ಬೀಳ್ತಾರೆ.. ಆಗ ಅಕುಲ್ ಕೈನಿಂದ ಬಿಡಿಸಿಕೊಂಡ ಜಗನ್ ಬಟ್ಟೆ ನೋಡಿ ಸರಿಯಾಗಿ ಆಡಿ ಎಂದು ಕಿರುಚಾಡ್ತಾನೆ. ಆಗ ಸಿಟ್ಟಿಗೆದ್ದ ಚಂದನ್ “ನಿನಗೊಬ್ಬನಿಗೆ ಅಲ್ಲ ಕಿರುಚಾಡೋಕೆ ಬರೋದು ನಂಗೂ ನಿಂಗಿಂತ ಜಾಸ್ತಿ ಬರ್ತದೆ” ಅಂತೆಲ್ಲಾ ಜಗನ್ ಗಿಂತ ಜೋರಾಗಿಯೇ ಅವಾಜ್ ಹಾಕಿ. ಜಗನ್ ಬಾಯಿಯನ್ನು ಮುಚ್ಚಿಸಿದರು. ಇಲ್ಲಿ ಯಾರ ತಪ್ಪೆಂದು ವೀಕ್ಷಕರಿಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top