ಕಿರುತೆರೆ

ಅತಿಥಿಯಾಗಿ ಬಂದಿರುವ ಅಕುಲ್ ಬಾಲಾಜಿ ಜೊತೆ ಕೂಡ ಜಗಳ ಮಾಡಿಕೊಂಡ ದುರಹಂಕಾರಿ ಜಗನ್.

ಅತಿಥಿಯಾಗಿ ಬಂದಿರುವ ಅಕುಲ್ ಬಾಲಾಜಿ ಜೊತೆ ಕೂಡ ಜಗಳ ಮಾಡಿಕೊಂಡ ದುರಹಂಕಾರಿ ಜಗನ್.

 

 

ಈ ಬಾರಿಯ ಬಿಗ್ ಬಾಸ್ ಮನೆಯ ಅಹಂಕಾರದ ಪಟ್ಟವನ್ನು ಗಾಂಧಾರಿ ಅಂತೊಂದು ತೋಪು ಸೀರಿಯಲ್ಲಿನ ನಾಯಕನಾಗಿದ್ದ ನಟ ಜಗನ್ ಸಾರಾಸಗಟಾಗಿ ಕಬಳಿಸಿಕೊಂಡಿದ್ದಾನೆ. ಮನೆ ಮಂದಿಯ ಜೊತೆ ತಾನೊಬ್ಬ ದೊಡ್ಡ ಸ್ಟಾರ್ ಅಂತೇ ವರ್ತಿಸುವ ಜಗನ್ ತನಗೆ ಸಿಟ್ಟು ಬಂದರೆ ಬಿಗ್‌ಬಾಸ್ ಮನೆಗೆ ಬೆಂಕಿ ಬೀಳುತ್ತದೆ ಎಂಬ ರೇಂಜಿಗೆ ಪೋಸು ಕೊಡುತ್ತಾನೇ. ಪದೇಪದೆ ಪುಟಗೋಸಿ ಕಳಚಿ ಬೀಳುವಂತೆ ಅಬ್ಬರಿಸುವ ಜಗನ್ ಮೊದ ಮೊದಲು ನಿಷ್ಠುರವಾದಿ ಎಂಬಂತೆ ಬಿಂಬಿಸಿಕೊಂಡು ಬಂದಿದ್ದರು ಈತನಿಗೀಗ ಅಹಂಕಾರ ಎಂಬುದೊಂದು ಕಾಯಿಲೆ ಎಂಬುದು ಎಲ್ಲರಿಗೂ ಅರ್ಥವಾಗಿದೆ!

 

 

ಸಿಹಿಕಹಿ ಚಂದ್ರು, ಜಯಶ್ರೀನಿವಾಸನ್, ಸಮೀರ್ ಆಚಾರ್ಯ, ರಿಯಾಜ್ ಸೇರಿದಂತೆ ಎಲ್ಲರನ್ನೂ ಆವಾಜು ಹಾಕಿ ಕೆಣಕೋ ಈತನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಭುಗಿಲೆದ್ದಿದೆ. ವೀಕ್ಷಕರು ಜಗನ್ ಗೆ ಉಗಿದು ಉಪ್ಪಾಕುತ್ತಿದ್ದಾರೆ. ಇದೆಲ್ಲರ ನಡುವೆ ಮನೆಯ ಸದಸ್ಯರ ದಯೆಯಿಂದ ಕ್ಯಾಪ್ಟನ್ ಆಗಿರುವ ದೌಲತ್ತಿನ ದೊರೆ ಅಥಿತಿಯಾಗಿ ಮನೆಗೆ ಬಂದಿರುವ ಅಕುಲ್ ಬಾಲಾಜಿಯ ಜೊತೆ ಕೂಡ ಜಗಳವಾಡಿದ್ದಾನೆ.

 

 

ಪ್ರಾಣಿಗಳು ಹಾಗೂ ಮನುಷ್ಯರ ನಡುವೆ ಇರುವ ಸಾಮರಸ್ಯವನ್ನು ಸ್ಪರ್ಧಿಗಳಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಗಂಧದ ಗುಡಿ ಎನ್ನುವ ಟಾಸ್ಕ್‌ಅನ್ನು ಬಿಗ್ ಬಾಸ್ ನೀಡಿದ್ದರು. ಇದರ ಅನ್ವಯ ಮನೆಯ ಸದಸ್ಯರನ್ನು ಕಾಡು ಪ್ರಾಣಿಗಳು ಹಾಗೂ ಕಾಡು ಜನರ ಎರಡು ಗುಂಪುಗಳನ್ನು ಮಾಡಿದ್ದರು. ಈ ಕಾಡಿಗೆ ಪಟ್ಟಣದಿಂದ ಅಕುಲ್ ಅವರು ರಿಂಗ್ ಮಾಸ್ಟರ್ ಆಗಿ ಬಂದಿದ್ದರು. ಅಕುಲ್ ಅವರು ಕಾಡು ಜನರ ಸಹಾಯದಿಂದ ಪ್ರಾಣಿಗಳನ್ನು ಸೆರೆ ಹಿಡಿಯಬೇಕಾಗಿತ್ತು ಅದರಂತೆ ಸೆರೆ ಹಿಡಿಯಲು ಬಂದ ಅಕುಲ್ ಜತೆ ಜಗನ್ ಜಗಳ ಮಾಡಿಕೊಂಡ್ರು, ಮೈ ಕೈ ಮುಟ್ಟಿದ್ರೆ ಚನ್ನಾಗಿರೊಲ್ಲ ಎಂದು ಅಕುಲ್ ಜೊತೆ ವಾಗ್ವಾದಕ್ಕಿಳಿದ್ರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top