ಮನೋರಂಜನೆ

ಕನ್ನಡ ಚಿತ್ರಗಳಿಗಾಗಿ ದೊಡ್ಡ ದೊಡ್ಡ ಚಿತ್ರಗಳನ್ನ ಪಕ್ಕದಲ್ಲಿಟ್ಟ ಕಿಚ್ಚ: ಕನ್ನಡಕ್ಕೆ ಮೊದಲ ಆದ್ಯತೆ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕನ್ನಡ ಚಿತ್ರಗಳಿಗಾಗಿ ದೊಡ್ಡ ದೊಡ್ಡ ಚಿತ್ರಗಳನ್ನ ಪಕ್ಕದಲ್ಲಿಟ್ಟ ಕಿಚ್ಚ: ಕನ್ನಡಕ್ಕೆ ಮೊದಲ ಆದ್ಯತೆ.

 

 

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಕರ್ನಾಟಕದ ಗಡಿಯಾಚೆ ಸಕತ್ ಡಿಮಾಂಡ್ ಕ್ರಿಯೇಟ್ ಆಗಿದೆ. ಒಂದರ ಮೇಲೊಂದು ದೊಡ್ಡ ದೊಡ್ಡ ಚಿತ್ರಗಳಿಂದ ಆಫರ್ ಗಳು ಕಿಚ್ಚ ಮನೆ ಬಾಗಿಲಿಗೆ ಹುಡುಕಿಕೊಂಡು ಬರುತ್ತಿವೆ. ಆದರೆ ಅವರ ಬ್ಯುಸಿ ಶೆಡ್ಯೂಲ್ ನಡುವೆ ಬೇರೆ ಬಾಷೆಯ ದೊಡ್ಡ ಚಿತ್ರಗಳನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಕನ್ನಡದ ಮೂರು ಚಿತ್ರಗಳು, ಬಿಗ್ ಬಾಸ್ ಕಾರ್ಯಕ್ರಮ,ಸಿಸಿಎಲ್ ಅಲ್ಲದೆ ಹಾಲಿವುಡ್ ಸಿನಿಮಾದಲ್ಲೂ ನಟಿಸುತ್ತಿರುವುದರಿಂದ ಕಿಚ್ಚನ ಡೇಟ್ಸ್ ಸಿಗುವುದು ಸದ್ಯಕ್ಕಂತೂ ದೂರದ ಮಾತು.

 

 

ಸದ್ಯ ಮೆಗಾ ಸ್ಟಾರ್ ಚಿರಂಜೀವಿ ಅವರ 151ನೇ ಚಿತ್ರ ‘ಸೈರಾ ನರಸಿಂಹ ರೆಡ್ಡಿ’ ಅನ್ನೋ ಚಿತ್ರಕ್ಕೆ ಸುದೀಪ್ ಬೇಕೇ ಬೇಕು ಎಂದು ಚಿತ್ರದ ನಿರ್ದೇಶಕ ಪಟ್ಟು ಹಿಡಿದಿರುವುದು ಎಲ್ಲರಿಗೂ ಗೊತ್ತಿರೋ ವಿಷಯ. ಈ ಚಿತ್ರದಲ್ಲಿ ನಟಿಸಲು ಸುದೀಪ್ ಒಪ್ಪಿಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಚಿರಂಜೀವಿ,ಸುದೀಪ್ ಸೇರಿದಂತೆ ಎಲ್ಲಾ ಚಿತ್ರರಂಗಗಳ ಪ್ರಮುಖ ನಟರುಗಳು ಅಭಿನಯಿಸುತ್ತಿದ್ದಾರೆ.

 

 

ಅತ್ತ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಮಹಾಭಾರತವನ್ನಾಧರಿಸಿ ಚಿತ್ರವೊಂದನ್ನ ಮಾಡುತ್ತಿದ್ದು ಆ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ರಣವೀರ್ ಸಿಂಗ್,ವಿಕ್ರಮ್ ಸೇರಿದಂತೆ ಪ್ರಮುಖರು ನಟಿಸಲಿದ್ದಾರೆ. ಈ ಚಿತ್ರದಲ್ಲೂ ಕೂಡ ನಟಿಸುವುವಂತೆ ಸುದೀಪ್ ಅವರಿಗೆ ನಿರ್ದೇಶಕರು ಕೇಳಿಕೊಂಡಿದ್ದು ಈಗಾಗಗಳೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ, ಆದರೆ ಕಿಚ್ಚನ ಕಡೆಯಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ರೋಹಿತ್ ಶೆಟ್ಟಿಯಂತಹ ದೊಡ್ಡ ನಿರ್ದೇಶಕನ ಚಿತ್ರವನ್ನೇ waitingನಲ್ಲಿಡಲು ಮುಖ್ಯ ಕಾರಣ “ಮುಂದಿನ ಪ್ರಾಜೆಕ್ಟ್ ಗಳನ್ನು ಒಪ್ಪಿಕೊಳ್ಳುವ ಮುನ್ನ ಸುದೀಪ್ ಅವ್ರು ಈಗಾಗಲೇ ಒಪ್ಪಿಕೊಂಡಿರುವ ಕನ್ನಡ ಚಿತ್ರಗಳನ್ನು ಮುಗಿಸಿಕೊಡಬೇಕೆಂದು. ಜೊತೆಗೆ ಹಾಲಿವುಡ್’ನ ರೈಸನ್ ಚಿತ್ರದ ಕೆಲಸವೂ ಮುಗಿಸಬೇಕಾಗಿದೆ.”

 

 

ಸುದೀಪ್ ಅವರು ಸದ್ಯ ಪ್ರೇಮ್ ನಿರ್ದೇಶನ ‘ವಿಲನ್’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು ಇದರ ನಂತರ ಕೃಷ್ಣ ಅವರ ‘ಪೈಲ್ವಾನ್’ ಮತ್ತು ಸೂರಪ್ಪ ಬಾಬುರವರ ‘ಕೋಟಿಗೊಬ್ಬ 3’ ಹಾಗೂ ಎಡಿನ್ ಆರ್ಯ ನಿರ್ದೇಶನ ‘ರೈಸನ್’ ಇಂಗ್ಲಿಷ್ ಚಿತ್ರದಲ್ಲಿ ನಟಿಸಲಿದ್ದಾರೆ. ಇವುಗಳ ಮಧ್ಯೆ ಸ್ವತಃ ತಾವೇ ನಿರ್ಮಿಸುತ್ತಿರುವ ಅಂಬರೀಷ್ ಮುಖ್ಯ ಭೂಮಿಕೆಯ ‘ಅಂಬಿ ನಿಂಗೆ ವಯಸ್ಸಾಯ್ತೊ’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ಕನ್ನಡ ಚಿತ್ರಗಳ ಕೆಲಸಗಳನ್ನು ಉಳಿಸಿಕೊಂಡು ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದಿಲ್ಲ. ಕನ್ನಡ ಚಿತ್ರಗಳಿಗೆ ನನ್ನ ಮೊದಲ ಆದ್ಯತೆ ” ಎಂದು ಸುದೀಪ್ ಹೇಳಿದ್ದಾರೆ.

 

 

ಅಲ್ಲದೆ ಇದೆ ತಿಂಗಳಿನಿಂದ ಸಿಸಿಎಲ್ ಪ್ರಾರಂಭವಾಗುತ್ತಿದೆ ಜೊತೆ ಬಿಗ್ ಬಾಸ್ ಟಿವಿ ಷೋವನ್ನೂ ಕೂಡ ಸುದೀಪ್ ನಡೆಸಿಕೊಡಬೇಕಾಗಿದೆ. ಹಾಗಾಗಿ ಎಷ್ಟೇ ದೊಡ್ಡ ಚಿತ್ರಗಳ ನಿರ್ದೇಶಕನಿಗೆ ಕಿಚ್ಚನ ಡೇಟ್ಸ್ ಸಿಗುವುದು ಸುಲಭವಾಗಿಲ್ಲ. ಈ ಎಲ್ಲಾ ಕಮಿಟ್ ಮೆಂಟ್ ಗಳು ಮುಗಿದ ಮೇಲಷ್ಟೇ ಸುದೀಪ್ ಅವರ ಡೇಟ್ಸ್ ಪಡೆಯಬಹುದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top