ಧರ್ಮ

ಪುರಾಣಗಳ ಪ್ರಕಾರ ನಮಗೆ ಗೊತ್ತಿಲ್ಲದೇ ಈ 7 ಕೆಲಸಗಳನ್ನು ಮಾಡಿದ್ರೆ ದುರಾದೃಷ್ಟಕ್ಕೆ ಕಾರಣವಾಗುತ್ತವೆ , ನಕಾರಾತ್ಮಕ ಶಕ್ತಿಗಳಿಗೆ ಕಾರಣವಾಗುತ್ತೆ

ಕೆಲವು ಪುರಾಣಗಳ ಪ್ರಕಾರ ನಮಗೆ ಅರಿಯದೆ ನಾವು ಕೆಲವು ವಸ್ತುಗಳನ್ನು ಮುಟ್ಟಿದರೆ ಅವು ನಮ್ಮ ದುರಾದೃಷ್ಟಕ್ಕೆ ಕಾರಣವಾಗುತ್ತವೆ ಎಂದು ಹೇಳಲಾಗಿದೆ.

 

ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತಾನು ತುಂಬಾ ಎತ್ತರಕ್ಕೆ ಬೆಳೆಯಬೇಕು. ಎಲ್ಲರಿಗಿಂತ ಚೆನ್ನಾಗಿ ಬದುಕಬೇಕು. ತಾವು ಸಹ ಶ್ರೀಮಂತರಾಗಬೇಕು  ಎಂಬ ಆಸೆಯಿಂದ ಎಲ್ಲರೂ ಕಷ್ಟಪಟ್ಟು ದುಡಿಯುತ್ತಾರೆ. ಆದರೆ ತಾವು ಎಷ್ಟೇ ಕಷ್ಟ ಪಟ್ಟು ದುಡಿದರೂ ಕೆಲವರಿಗೆ ಮುಂದೆ ಬರಲು ಸಾಧ್ಯವಾಗುವುದಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ .

 

 

ಆದರೆ ಹಿರಿಯರ ಪ್ರಕಾರ ಜೀವನದಲ್ಲಿ ಮುಂದೆ ಬರಲು ಕಷ್ಟ ಪಡವುದೊಂದೇ ಮುಖ್ಯವಲ್ಲ . ಅದರ ಜೊತೆಗೆ ಅದೃಷ್ಟವೂ ಸಹ ಬೇಕಾಗುತ್ತದೆ. ಅದೃಷ್ಟ  ನಮ್ಮ ಜೊತೆಗೆ ಇದ್ದರೆ ಮಾತ್ರ  ನಮ್ಮ ಕಷ್ಟಕ್ಕೆ ಸರಿಯಾದ ಪ್ರತಿಫಲ ಕೂಡ ಸಿಗುತ್ತದೆ.

ಆದರೆ ಕೆಲವೊಂದು ಬಾರಿ ಎಲ್ಲವೂ ನಮ್ಮ ಪರವಾಗಿದ್ದರೂ, ಜೊತೆಗಿದ್ದರೂ ಸಹ ನಾವು ಮಾಡುವ ಕೆಲವೊಂದು ತಪ್ಪುಗಳು ನಮ್ಮ ಯಶಸ್ಸಿಗೆ ಅಡ್ಡಿಯನ್ನು ಉಂಟುಮಾಡುತ್ತವೆ. ಇವುಗಳು ನಮ್ಮ ಜೀವನದ ಅದೃಷ್ಟದ  ದಾರಿಗೆ ಅಡ್ಡಗಾಲು  ಆಗುತ್ತವೆ.

 

 ಈ ಏಳು ವಸ್ತುಗಳನ್ನು ಅಪ್ಪಿ ತಪ್ಪಿಯೂ ಸಹ ನಾವೇನಾದರೂ ಮುಟ್ಟಿದರೆ ದುರಾದೃಷ್ಟ ನಮ್ಮ ಹಿಂದೆ ಬೀಳುತ್ತದೆಯಂತೆ. ಆ ವಸ್ತುಗಳು ಯಾವುವು ?  ಎಂದು ತಿಳಿದುಕೊಳ್ಳೋಣ ಬನ್ನಿ …..

 

ಅಂತ್ಯ ಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಹೋದಾಗ ನಾವು ಅಲ್ಲಿರುವ ಕೆಲವು ಅಶುಭ ವಸ್ತುಗಳನ್ನು ಸ್ಪರ್ಷಿಸುತ್ತೇವೆ. ಅಲ್ಲಿ ನಾವು ಮೃತ ವ್ಯಕ್ತಿಗೆ ಸಂಬಂಧಪಟ್ಟ ವಸ್ತುಗಳನ್ನು ಮುಟ್ಟುತ್ತೇವೆ. ಇದರಿಂದ ನಕಾರಾತ್ಮಕ ಶಕ್ತಿಗಳಿಗೆ ನಾವು ಬಲಿಯಾಗುತ್ತೇವೆ. ಇದರಿಂದ ದುರಾದೃಷ್ಟ ಸಹ ನಮ್ಮ ಬೆನ್ನು ಹತ್ತುತ್ತದೆ.

 

 

ಊಟ ಮಾಡಬೇಕಾದರೆ ಸಾಮಾನ್ಯವಾಗಿ ತಿನ್ನುವ ಆಹಾರ ನೆಲಕ್ಕೆ ಬೀಳುತ್ತದೆ. ಹಾಗಾಗಿ  ನಾವು ತಿನ್ನುವ ಆಹಾರವನ್ನು ನಾವು  ಕಾಲಿನಿಂದ ತುಳಿದರೆ. ನಮ್ಮ  ಜೀವನದ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತದೆ.

 

 

 

ಒಳ್ಳೆಯ ಕೆಲಸಕ್ಕೆ ಹೊರಗೆ ಹೋಗುವ ಸಮಯದಲ್ಲಿ ನಾಯಿಯನ್ನು ಸ್ಪರ್ಶ ಮಾಡಿದರೆ ಅದು ಅಶುಭವೆಂದು ನಾರದ ಪುರಾಣದಲ್ಲಿ ಹೇಳಲಾಗಿದೆ.

 

 

ಮನೆಯನ್ನು ಸ್ವಚ್ಛಗೊಳಿಸುವಾಗ ಪೊರಕೆ ನಮ್ಮ ದೇಹಕ್ಕೆ ಸ್ಪರ್ಶವಾದರೆ ಅದು ಅಶುಭ ಎಂದು ಹೇಳಲಾಗಿದೆ.

ಸಮಾಧಿಯಿಂದ ಬರುವ ಹೊಗೆ ದೇಹಕ್ಕೆ ಸ್ಪರ್ಶಿಸಬಾರದು ಎಂದು ಹೇಳಿದ್ದಾರೆ. ಒಂದು ವೇಳೆ ಈ ಹೊಗೆ ನಿಮ್ಮ ದೇಹವನ್ನು ಸ್ಪರ್ಶಿಸಿದರೆ. ಇದು ಅಶುಭದ ಸಂಕೇತ ಇದು ಬಡತನ ಮತ್ತು ಅನಾರೋಗ್ಯಕ್ಕೆ ಕಾರಣವಾಗುತ್ತದೆ.

 

 

ಶವಸಂಸ್ಕಾರಕ್ಕೆ ಬಳಸುವ ಮರದ ತುಂಡು ಶವವನ್ನು ಸ್ಪರ್ಶಿಸಬಾರದು. ಒಂದು ವೇಳೆ ತಿಳಿಯದೆ ತಪ್ಪಾದಲ್ಲಿ ಗಂಗಾ ಸ್ನಾನ ಮಾಡಿ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಬೇಕು.

ಕೊಳಕಾಗಿರುವ ವ್ಯಕ್ತಿಯನ್ನು ಬರಿಗೈನಲ್ಲಿ ಮುಟ್ಟಬಾರದು. ಆತನ ಸುತ್ತಲೂ ಇರುವ  ನಕಾರಾತ್ಮಕ ಶಕ್ತಿಯು  ತಾವು ಪಡೆದಿರುವ ಸಕಾರಾತ್ಮಕ ಶಕ್ತಿಯು ನಮ್ಮನ್ನು ಬಿಟ್ಟು ಹೋಗುತ್ತದೆಂಬ ನಂಬಿಕೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top