fbpx
ಕನ್ನಡ

ಇಂದಿರಾ ಕ್ಯಾಂಟೀನ್’ನ ಕನ್ನಡ ಕೆಲಸಗಾರರನ್ನ ಏಕಾಏಕಿ ಕೈ ಬಿಟ್ಟ ಗುತ್ತಿಗೆದಾರ..!

ಇಂದಿರಾ ಕ್ಯಾಂಟೀನ್’ನ ಕನ್ನಡ ಕೆಲಸಗಾರರನ್ನ ಏಕಾಏಕಿ ಕೈ ಬಿಟ್ಟ ಗುತ್ತಿಗೆದಾರ..!

 

 

ಹಸಿವು ಮುಕ್ತ ಕರ್ನಾಟಕ ಎಂಬ ಆಶಯದಿಂದ ಕರ್ನಾಟಕ ರಾಜ್ಯಸರ್ಕಾರ ಇಂದಿರಾ ಕ್ಯಾಂಟೀನ್ ಯೋಜೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯ ಮೂಲಕ ಸಾವಿರಾರು ಮಂದಿ ಬಡವರು ತಮ್ಮ ಹಸಿವನ್ನು ನೀಗಿಸಿಕೊಂಡಿದ್ದರು ಅಲ್ಲದೆ ನೂರಾರು ಮಂದಿ ಕೂಡ ಈ ಯೋಜನೆಯಿಂದ ಉದ್ಯೋಗ ಲಭಿಸಿತ್ತು. ಆದರೆ ಯೋಜನೆಯ ಮಧ್ಯವರ್ತಿ ಗುತ್ತಿಗೆದಾರರಿಂದ ಇಷ್ಟು ದಿನ ಇಂದಿರಾ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ ಕನ್ನಡಿಗರಿಗೆ ಮೋಸವಾಗಿದೆ. ಇಂದಿರಾ ಕ್ಯಾಂಟೀನ್ ನಲ್ಲಿ ಈಗ ಪರ ದೇಸಿ ಪರಭಾಷಿಕರ ಹಾವಳಿ ಶುರುವಾಗಿದೆ.

 

 

 

 

ಇಂದಿರಾ ಕ್ಯಾಂಟೀನ್ ನಲ್ಲಿ ಕೆಲಸಮಾಡಲು ಕೆಲಸಗಾರರನ್ನು ನೇಮಕ ಮಾಡಲು ಬೆಂಗಳೂರಿನ ಎರಡು ವಿಭಾಗಗಳಲ್ಲಿ ಚೆಫ್‌ಟಾಕ್‌ ಮತ್ತು ರಿವಾರ್ಡ್‌ ಎಂಬ ಎರಡು ಏಜೆನ್ಸಿಗಳಿಗೆ ಗುತ್ತಿಗೆಯನ್ನು ನೀಡಲಾಗಿತ್ತು. ರಿವಾರ್ಡ್ ಎಂಬುದು ಹಿಂದಿ ಭಾಷಿಗ ಬಲದೇವ್ ಸಿಂಗ್ ಅಗರ್ವಾಲ್ ಎಂಬುವವರ ಏಜೆನ್ಸಿಯಾಗಿದ್ದು ಆತ ಏಕಾಏಕಿ ಹತ್ತಕ್ಕೂ ಹೆಚ್ಚ ಕನ್ನಡ ಸೂಪರ್ ವೈಸರ್ ಗಳನ್ನ ಕೆಲಸದಿಂದ ತೆಗೆದುಹಾಕಿದ್ದಾನೆ. ಉತ್ತರ ಭಾರತದಿಂದ ಕರ್ನಾಟಕಕ್ಕೆ ವಲಸೆ ಬಂದಿರುವ ಹಿಂದಿ ಭಾಷಿಗರು ಕನ್ನಡಿಗರಿಗಿಂತ ಕಡಿಮೆ ಸಂಭಳಕ್ಕೆ ಕೆಲಸ ಮಾಡುತ್ತಾರೆ ಇನ್ನುವ ಕಾರಣಕ್ಕೆ ಕನ್ನಡಿಗರನ್ನು ಕೆಲಸದಿಂದ ತೆಗೆದಿದ್ದಾರೆ.

 

 

ಬೆಂಗಳೂರಿನ ಈಸ್ಟ್ ಭಾಗದಲ್ಲಿರುವ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಕನ್ನಡ ಸೂಪರ್ ವೈಸರ್’ಗಳನ್ನೂ ಕೆಲಸದಿಂದ ತೆಗೆದಿರುವ ರಿವಾರ್ಡ್ ಏಜೆನ್ಸಿ ಮುಂದಿನ ದಿನಗಳಲ್ಲಿ ಕನ್ನಡ ಕ್ಯಾಶಿಯರ್’ಗಳನ್ನೂ ಕೆಲಸದಿಂದ ತೆಗೆಯುವುದಾಗಿ ಸೂಚನೆ ನೀಡಿದೆಯಂತೆ. ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಲ್ಲೇ ಕನ್ನಡಿಗರಿಗೆ ಮೋಸ ನಡೆಯುತ್ತಿರುವುದು ಹಾಗು ಎಲ್ಲಿ ಕನ್ನಡಿಗರಿಗೆ ಪ್ರಾಧ್ಯಾನತೆ ನೆಡಬೇಕಾಗಿತ್ತೋ ಅಲ್ಲೇ ಕನ್ನಡಿಗರಿಗೆ ಮೋಸ ನೆಡೆಯುತ್ತಿರುವುದು ನಿಜಕ್ಕೂ ನೋವಿನ ಸಂಗತಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top