fbpx
ಮಾಹಿತಿ

ಈ ದೇಶದ ಬುಡಕಟ್ಟು ಜನಾಂಗದವರು ಆ ಊರಲ್ಲಿ ಸತ್ತವರ ದೇಹವನ್ನು ಮಣ್ಣು ಮಾಡುವುದಿಲ್ಲ ಬದಲಾಗಿ ಏನು ಮಾಡ್ತಾರೆ ಅಂತ ತಿಳ್ಕೊಂಡ್ರೆ ಆಶ್ಚರ್ಯ ಆಗುತ್ತೆ ಇದು ವಿಚಿತ್ರವಾದರೂ ಸತ್ಯ

ಇಂಡೋನೇಷ್ಯಾದ  ದೇಶದಲ್ಲಿ, ದಕ್ಷಿಣ ಸುಲವೇಸಿಯಲ್ಲಿ ವಾಸಿಸುವ ಒಂದು ಸಮುದಾಯದ ಜನ. ಆ ಊರಲ್ಲಿ ಸತ್ತವರ ದೇಹವನ್ನು ಮಣ್ಣು ಮಾಡುವುದಿಲ್ಲ. ಬದಲಾಗಿ ಮನೆಯಲ್ಲೇ  ವರ್ಷಗಟ್ಟಲೆ ಇಟ್ಟುಕೊಂಡು  ಏನು ಮಾಡುತ್ತಾರೆ  ?  ಎಂದು ನಿಮಗೆ ಗೊತ್ತಾ  ?

 

 

ಆತ್ಮೀಯರನ್ನು ಕಳೆದುಕೊಂಡರೆ ಆಗುವ ನೋವು ಅಷ್ಟಿಷ್ಟಲ್ಲ. ಅವರ ಮೇಲಿನ ಪ್ರೀತಿಯ ನೆನಪಿಗೆ ದಾನ ,ಧರ್ಮಗಳನ್ನು ಮಾಡುತ್ತಿರುತ್ತಾರೆ. ಆದರೆ ಇಂಡೋನೇಷ್ಯಾದಲ್ಲಿ ದಕ್ಷಿಣ ಸುಲವೀಸಿಯಾದಲ್ಲಿ ವಾಸಿಸುವ ಒಂದು ಸಮುದಾಯದ ಜನರು ಒಂದು ವಿಚಿತ್ರ ಆಚಾರವನ್ನು  ಪಾಲಿಸುತ್ತಾ ಬಂದಿದ್ದಾರೆ.

ಆತ್ಮೀಯರು ಮರಣಿಸಿದರೆ ಅವರ ಅಂತ್ಯಕ್ರಿಯೆಯನ್ನು ನಿರ್ವಹಿಸದೆ, ವರ್ಷಗಳ ಕಾಲ ಮನೆಯಲ್ಲೇ ಇಟ್ಟುಕೊಳ್ಳುತ್ತಾರೆ. ಟೋರೋಜಾ ಸಮುದಾಯದ ಜನರು ಈ ರೀತಿ ಕೆಲವು ವರ್ಷಗಳ ಕಾಲ ಮನೆಯಲ್ಲೇ ಮೃತದೇಹಗಳನ್ನು ಇಟ್ಟುಕೊಳ್ಳುತ್ತಾರೆ. ಮರಣಿಸಿದವರು ಮೃತ ದೇಹದಿಂದ ದುರ್ವಾಸನೆ ಬರದಂತೆ ಫಾರ್ಮಾಲ್ಡಿಹೈಡ್ ದ್ರಾವಣದಿಂದ ಸ್ನಾನ ಮಾಡಿಸುತ್ತಾರೆ. ಹೂತ ಶವವನ್ನು ಪ್ರತಿ ವರ್ಷ ಬೆಳೆ ಕೈಗೆ ಬಂದ ಸಮಯದಲ್ಲಿ ಮತ್ತೆ ಹೊರ ತೆಗೆಯುತ್ತಾರೆ. ಅವರಿಗೆ ಇಷ್ಟವಾದ ವಸ್ತುಗಳಿಂದ ಅಲಂಕರಿಸುತ್ತಾರೆ.

 

 

ಸತ್ತ ವ್ಯಕ್ತಿ ಬಾಲಕಿ ಅಥವಾ ಮಹಿಳೆಯಾಗಿದ್ದರೆ ಆಕೆಯ ತಲೆ ಬಾಚಿ, ಒಳ್ಳೆಯ ಬಟ್ಟೆ ಹಾಕಿ, ಸುಂದರವಾಗಿ ಅಲಂಕರಿಸುತ್ತಾರೆ.

ಬಾಲಕ ಅಥವಾ ಪುರುಷರಾದರೆ ಅವರಿಗೆ ಇಷ್ಟವಾದ ಕನ್ನಡಕ ,ಸಿಗರೇಟ್, ಬಟ್ಟೆಯಂತಹ ವಸ್ತುಗಳಿಂದ ಅಲಂಕರಿಸುತ್ತಾರೆ. ಆ ಬಳಿಕ ಉತ್ಸವದ ರೀತಿಯಲ್ಲಿ ಊರೆಲ್ಲಾ ಮೆರವಣಿಗೆ ಮಾಡುತ್ತಾರೆ. ಉತ್ಸವದ ಬಳಿಕ ಕೋಣ ಮತ್ತು ಹಂದಿಯನ್ನು ಬಲಿ ಕೊಡುತ್ತಾರೆ. ಈ ರೀತಿ ಮಾಡುವುದರಿಂದ ಸತ್ತವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬುದು ಟೋರೋಜಾ ಜನರ ನಂಬಿಕೆಯಾಗಿದೆ.

 

 

ಮಾತನಾಡುವ ಭಾಷೆಯನ್ನು ಲಿಪಿಯಲ್ಲಿ ತೋರಿಸಿದ ಮೊದಲ ಸಮುದಾಯವೇ ಟೋರೋಜಾನ್. ಆದರೆ ಆ ಸಮುದಾಯದಲ್ಲಿ ಮರಣಿಸಿದ ವ್ಯಕ್ತಿಯನ್ನು ಮತ್ತೆ ಹೊರತೆಗೆದು ಮೆರವಣಿಗೆ ಮಾಡುವ ಸಂಪ್ರದಾಯ ಯಾವಾಗಿನಿಂದ ಆರಂಭವಾಯಿತು ಎಂದು ಯಾರಿಗೂ ತಿಳಿದಿಲ್ಲ .

 

 

ನಮ್ಮ ಆತ್ಮೀಯರನ್ನು ಈ ರೀತಿ ಮಾತನಾಡಿಸುವುದು ತುಂಬಾ ಖುಷಿಯ ಸಂಗತಿ. ಸತ್ತವರ ಬಗ್ಗೆ ನಾವು ಎಂದಿಗೂ ನೋವನ್ನು ಅನುಭವಿಸುವುದಿಲ್ಲ. ಸತ್ತ ಬಳಿಕವೂ ಅವರು ನಮ್ಮೊಂದಿಗೆ ಇರುತ್ತಾರೆ ಎಂದರೆ ದುಃಖ ಯಾಕೆ ಪಡಬೇಕು  ?  ಎಂಬ ಭಾವನೆ ಅವರ ಮನಸ್ಸಿನಲ್ಲಿ ಇದೆ.

 

 

ಬೆಳೆ ಕೈಗೆ ಬರುವುದು, ಮರಣಿಸಿದವರನ್ನು ನೆನಪಿಸಿಕೊಳ್ಳುವುದು ಎರಡೂ ಸಹ ಅತ್ಯಂತ ಸಂತೋಷದ ಸಂದರ್ಭಗಳು ಎಂದು ಟೊರೋಜಾ ಸಮುದಾಯದ ವ್ಯಕ್ತಿಗಳು ಹೇಳುತ್ತಾರೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top