ಜ್ಯೋತಿಷ್ಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯ ಸ್ತ್ರೀಯರನ್ನು ಮದುವೆಯಾದರೆ ತುಂಬಾ ಒಳ್ಳೆಯದು ಸಂಸಾರವನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯ ಸ್ತ್ರೀಯರನ್ನು ಮದುವೆಯಾದರೆ ಒಳ್ಳೆಯದು. ಸಂಸಾರವನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾರೆ.

 

 

ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ಜೀವನದ ಹಾಗೂ ಹೋಗುಗಳೆಲ್ಲವೂ  ನಮ್ಮ ಜನ್ಮ ರಾಶಿಗೆ ಕಾರಣವಾಗಿರುತ್ತದೆ ಎಂದು ಹೇಳುತ್ತದೆ. ಅದೇ ರೀತಿ ನಮ್ಮ ಮದುವೆಯ ಜೀವನ ಕೂಡ ಮದುವೆಯಾಗುವ ಹುಡುಗ ಅಥವಾ ಹುಡುಗಿಯ ರಾಶಿಯ ಸ್ವಭಾವ ಬಹಳ ಮುಖ್ಯವಾಗಿರುತ್ತದೆ ಎಂದು ತಿಳಿಸುತ್ತದೆ. ಯಾವ ರಾಶಿಯವರನ್ನು ಮದುವೆಯಾದರೆ ಶ್ರೀಮಂತಿಕೆ ಹೆಚ್ಚಾಗುವುದು ಎಂದು ತಿಳಿಸುತ್ತದೆ .

 

 

ನಾವು ನೀವೆಲ್ಲ ತಿಳಿಯಬೇಕಾದ ಬಹು ಮುಖ್ಯ ಅಂಶವೆಂದರೆ ಶ್ರೀಮಂತಿಕೆ ಎಂದರೆ ಹಣ ಒಂದೇ ಅಲ್ಲ, ಹಣದ ಜೊತೆಗೆ  ಪ್ರೀತಿ, ವಿಶ್ವಾಸ , ನಂಬಿಕೆಯ ಗುಣ, ಆಯಸ್ಸು ಮತ್ತು ಆರೋಗ್ಯವೂ ಕೂಡಿರುತ್ತದೆ. ಅದೇ ರೀತಿ ಈಗ ಯಾವ ರಾಶಿಯ ಹುಡುಗಿಯರನ್ನು ಮದುವೆಯಾದರೆ ಇವೆಲ್ಲ ಸಿಗುವುದು ಎಂದು ತಿಳಿದುಕೊಳ್ಳೋಣ…..ಹಾಗೆಂದು ಬೇರೆ ರಾಶಿಯ ಹುಡುಗಿಯರು  ಸಂಸಾರವನ್ನು ನಿಭಾಯಿಸುವುದಿಲ್ಲ ಎಂದಲ್ಲ,ಅವರು ಸಮರ್ಥರೇ  ಆದರೆ, ಈ ಮೂರು ರಾಶಿಯವರು ಮಾತ್ರ ರಾಶಿಯ ಪ್ರಕಾರ   ತಮ್ಮ ಪತಿಗೆ ಹಾಗೂ ಸಂಸಾರಕ್ಕೆ ಹೆಚ್ಚು ಒತ್ತು ಕೊಡುತ್ತಾರೆ ಎಂದರ್ಥ ಅಷ್ಟೇ……

 ಕಟಕ ರಾಶಿ.

ಈ ರಾಶಿಯ ಮಹಿಳೆಯರು ಸಾಂಪ್ರದಾಯಿಕ ಗುಣಗಳನ್ನು ಹೊಂದಿರುತ್ತಾರೆ. ಅದೇ ರೀತಿ ಇವರು ಸಾಂಪ್ರದಾಯಿಕ ವ್ಯಕ್ತಿತ್ವವನ್ನು ಹೊಂದಿರುವ ಹುಡುಗರಿಗೆ ಸರಿಯಾದ ಸಂಗಾತಿಯಾಗುತ್ತಾರೆ. ಇವರು ತುಂಬಾ ಸೂಕ್ಷ್ಮ ಮತ್ತು ಪೋಷಣೆ, ಆರಾಧನೆ, ತಿಳಿವಳಿಕೆ ಗ್ರಹಿಸುವ ಗುಣಗಳನ್ನು ತುಂಬಾ ಹೊಂದಿರುತ್ತಾರೆ .

ತನ್ನ ಪತಿಯ ಮೇಲೆ ಅವಲಂಬಿತರಾಗಿದ್ದಾರೆ ಎಂದಾಕ್ಷಣ ಅವಳು ದುರ್ಬಲಳು  ಅಲ್ಲ ಎಂದರ್ಥ. ತನ್ನ ಅಸ್ತಿತ್ವ ಮತ್ತು ಸಂಸಾರವನ್ನು ಉಳಿಸಿಕೊಳ್ಳಲು ಯಾವ ರೀತಿಯ ಹೋರಾಟ  ಬೇಕಾದರೂ ಮಾಡುತ್ತಾಳೆ. ತನ್ನ ಪತಿಗೆ ಹಾಗೂ ಕುಟುಂಬಕ್ಕೆ ಪ್ರಾಮಾಣಿಕರಾಗಿರುತ್ತಾರೆ. ತಾನು ಸಾವನ್ನಪ್ಪುವ ತನಕ ತನ್ನ ಕುಟುಂಬವನ್ನು ಬಿಟ್ಟು ಕೊಡುವುದಿಲ್ಲ. ಬದಲಿಗೆ  ಕಾಪಾಡಿಕೊಳ್ಳುತ್ತಾಳೆ.

 ಮೇಷ ರಾಶಿ .

 

 

ಈ ರಾಶಿಯ ಮಹಿಳೆಯರು ತನ್ನ ಪತಿಯ ಕನಸು ತನ್ನ ಕನಸೆಂದು ತಿಳಿದು ಅದನ್ನು ನೆರವೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾರೆ. ಈ ಮಹಿಳೆಯರು ತನ್ನ ಪತಿಯ ಕುಟುಂಬವನ್ನು ಮತ್ತು ಅವರ ಕರ್ತವ್ಯವನ್ನು ಎಂದೂ ಸಹ ನಿರ್ಲಕ್ಷಿಸುವುದಿಲ್ಲ. ತನ್ನ ಕೆಲಸವನ್ನು ಎಂದೂ ಕೈಬಿಡುವುದಿಲ್ಲ. ಬೇರೆಯವರ ಮೇಲೆ ಅಸೂಯೆ ಪಡುವುದಿಲ್ಲ. ಆದರೆ ಅನುಮಾನ ಬಂದರೆ ಅದನ್ನು ಬಗೆಹರಿಸಿಕೊಳ್ಳುವ ತನಕ ಇವರಿಗೆ ಸಮಾಧಾನವಿರುವುದಿಲ್ಲ.ಹಾಗೆ ಸುಮ್ಮನೆ ಕೂರುವುದಿಲ್ಲ. ಇವರು ಧೈರ್ಯ ಮತ್ತು ಶಕ್ತಿವಂತ ಮಹಿಳೆಯರು ಸಹ ಆಗಿರುತ್ತಾರೆ .

ತುಲಾ ರಾಶಿ.

 

 

ತುಲಾ ರಾಶಿಯ ಮಹಿಳೆಯರು ಪ್ರಾಮಾಣಿಕ ಹಾಗೂ ವಿಶ್ವಾಸಾರ್ಹರಾಗಿ ಎಲ್ಲ ಕೆಲಸಕ್ಕೂ ಸಮಯವನ್ನು ಕೊಡುತ್ತಾರೆ. ಆಕೆ ತನ್ನ ಸಂಗಾತಿಯನ್ನು ಅಗಾಧವಾಗಿ  ಪ್ರೀತಿಸುತ್ತಾಳೆ ಜೊತೆಗೆ ನಂಬುತ್ತಾಳೆ. ತನ್ನ ಪತಿಯೇ ಸರ್ವಸ್ವ ಎಂದು ಜೀವನದ ಉದ್ದಕ್ಕೂ ಬದುಕುತ್ತಾರೆ. ತನ್ನ ಕುಟುಂಬದ ಏಳಿಗೆಗಾಗಿ ಶ್ರಮಿಸುತ್ತಾರೆ. ಜೀವನದಲ್ಲಿ ಏನೇ ತೊಂದರೆ ಬಂದರೂ ಎದುರಿಸುತ್ತಾರೆ. ಇವರು ಬಾಲ್ಯದಿಂದ ಸಾಂಪ್ರದಾಯಿಕವಾಗಿ ಬೆಳೆದಿರುತ್ತಾರೆ. ಅದೇ ರೀತಿಯಲ್ಲಿ ಮುಂದೆಯೂ ಸಹ ಇರುತ್ತಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top