fbpx
ಕನ್ನಡ

ಸ್ಪರ್ಧಿಗಳಿಗೆ ಬಿಗ್ ಶಾಕ್ ಕೊಟ್ರು ಬಿಗ್ ಬಾಸ್: ಈ ವಾರ ಮನೆಯಿಂದ ಹೊರಹೋಗಲು ಬರೋಬ್ಬರಿ 6 ನಾಮಿನೇಟ್.

ಸ್ಪರ್ಧಿಗಳಿಗೆ ಬಿಗ್ ಶಾಕ್ ಕೊಟ್ರು ಬಿಗ್ ಬಾಸ್: ಈ ವಾರ ಮನೆಯಿಂದ ಹೊರಹೋಗಲು ಬರೋಬ್ಬರಿ 6 ನಾಮಿನೇಟ್.

 

 

ಈಗಾಗಲೇ ಐವತ್ತು ದಿನ ಪೂರೈಸಿಕೊಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದ 5 ನೇ ಆವೃತ್ತಿ ಮನೆಗೆ ಎಂಟ್ರಿ ಕೊಟ್ಟಿದ್ದ 17 ಜನರ ಪೈಕಿ 5 ಜನ ಮನೆಯಿಂದ ಹೊರಹೋಗಿದ್ದಾರೆ..ಸುಮಾರಾಜಕುಮಾರ್,ಮೇಘ, ದಯಾಳ್,ತೇಜಸ್ವಿನಿ, ಆಶಿತಾ ಮತ್ತು ಸಿಹಿ ಕಹಿ ಚಂದ್ರು ಎಲಿಮಿನೇಟ್ ಆಗಿದ್ದಾರೆ. ವಾರದಿಂದ ವಾರಕ್ಕೆ ನಾಮಿನೇಷನ್ ಪ್ರಕ್ರಿಯೆಯನ್ನು ವಿಭಿನ್ನವಾಗಿ ನಡೆಸುತ್ತಿರುವ ಬಿಗ್ ಬಾಸ್ ಈ ವಾರವೂ ಕೂಡ ಸ್ಟೇ ವಿಭಿನ್ನವಾಗಿ ನಾಮಿನೇಷನ್ ಪ್ರಕ್ರಿಯೆಯನ್ನು ಮುಗಿಸಿದ್ದಾರೆ.

 

 

ಕ್ಯಾಪ್ಟನ್ ಕೃಷಿ ಅವರನ್ನು ಹೊರತುಪಡಿಸಿ, ಮನೆಯ ಎಲ್ಲಾ ಸದಸ್ಯರನ್ನು ಇಬ್ಬಿಬ್ಬರ 5 ಗುಂಪುಗಳನ್ನು ಮಾಡಿದ್ದು ಅವರಿಗೆ ಬಣ್ಣ ಬಣ್ಣದ ಬಾಲ್’ಗಳನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿತ್ತು ಒಂದೇ ಬಣ್ಣದ ಬಾಲ್ ಗಳನ್ನೂ ಆಯ್ಕೆ ಮಾಡಿಕೊಂಡಿದ್ದ ಇಬ್ಬರು ಸದಸ್ಯರು ತಮ್ಮ ಕೈಗೆ ಬೇಡಿ ಹಾಕಿ ಜೊತೆಯಲ್ಲಿಯೇ ಇರಬೇಕು.. ಅದರಂತೆ ಚಂದನ್ – ನಿವೇದಿತಾ, ಸಮೀರಾಚಾರ್ಯ – ದಿವಾಕರ್, ಜಯಶ್ರೀನಿವಾಸನ್ – ರಿಯಾಜ್, ಅನುಪಮಾ – ಶ್ರುತಿ, ಜಗನ್ – ಕಾರ್ತಿಕ್ ಜೋಡಿಯಾದರು.

 

 

ಕೊನೆಯಲ್ಲಿ ಈವಾರದ ಎಲಿಮಿನೇಷನ್ ಪ್ರಕ್ರಿಯೆಯನ್ನು ಕೂಡ ಜೋಡಿಯಾಗಿ ಮಾಡಿದ ಬಿಗ್ ಬಾಸ್ ಒಂದೊಂದೇ ಜೋಡಿಗಳನ್ನು ಕನ್ಫೆಷನ್ ರೂಮ್ ಗೆ ಕರೆದು ಆ ಇಬ್ಬರಲ್ಲಿ ಒಬ್ಬರನ್ನು ನಾಮಿನೇಟ್ ಮಾಡಿಕೊಳ್ಳುವಂತೆ ತಿಳಿಸಿದರು. ಇದರ ಪ್ರಕಾರ ಚಂದನ್, ದಿವಾಕರ್,ರಿಯಾಜ್ ,ಶ್ರುತಿ,ಜಗನ್ ನಾಮಿನೇಟ್ ಆದರು ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ಕೃಷಿಯವರು ಸಮೀರ್ ಅಚಾರ್ಯ ಅವರನ್ನು ನೇರವಾಗಿ ನಾಮಿನೇಟ್ ಮಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top