fbpx
ಸಮಾಚಾರ

ಆಕಾಶ್ ಅಂಬಾನಿಯ ವಿವಾಹ: ಲಗ್ನ ಪತ್ರಿಕೆಯ ಬೆಲೆ ರೂ. 1.5ಲಕ್ಷ ! ಈ ಸುದ್ದಿಯ ಅಸಲಿ ಕಥೆ ಏನು ?

ಈಚೆಗಷ್ಟೇ ಮುಗಿದು ಹೋದ ವಿರಾಟ್ ಕೋಹ್ಲಿ ಮತ್ತು ಅನುಷ್ಕಾ ಶೆಟ್ಟಿ ಅವರ ಆಡಂಬರದ ವಿವಾಹದ ನಂತರ ಇದೀಗ ಆಕಾಶ್ ಅಂಬಾನಿ ಸದ್ದು ಮಾಡುತ್ತಿದ್ದಾನೆ. ‘ಸೋಷಿಯಲ್ ಮೀಡಿಯ’ದಲ್ಲಿ ಈತನ ವಿವಾಹ ಆಮಂತ್ರಣ ಪತ್ರಿಕೆಯದ್ದೇ ದೊಡ್ಡ ಸುದ್ದಿಯಾಗಿದೆ. ಲಗ್ನಪತ್ರಿಕೆಗೆ ಸುಮಾರು 1.5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿರುವುದೇ ನ್ಯೂಸ್ ವೈರಲ್ ಆಗಲು ಕಾರಣವಾಗಿ ಸಾಮಾಜಿಕ ಜಾಲತಾಣಕ್ಕೆ ಉತ್ತಮ ಆಹಾರವಾಗಿದೆ.

 

 

ಯಾರು ಈ ಆಕಾಶ್ ಅಂಬಾನಿ? ಅಂದರೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ‘ನೋಟ್ ಬ್ಯಾಂಕ್’ ಎಂದೇ ಕುಖ್ಯಾತನಾಗಿರುವ ಉದ್ಯಮಿ ಮುಖೇಶ್ ಅಂಬಾನಿಯ ಜೇಷ್ಠ ಪುತ್ರ.

ಆಕಾಶನ ಮದುವೆಯ ನ್ಯೂಸ್‍ಗಾಗಿ ಕಾದಿದ್ದವರಿಗೆ ಆಮಂತ್ರಣ ಪತ್ರವೇ ಭರ್ಜರಿಯಾಗಿ ಕಂಡಿದೆ. ಈತನನ್ನು ವರಿಸುತ್ತಿರುವ ಕನ್ಯಾಮಣಿ ಯಾರೆಂಬುದು ಗೊತ್ತಾಗಿಲ್ಲ. ಆದರೆ ಭಾರತದಲ್ಲಿಯೇ ಈ ಕಾರ್ಡ್ ಅತ್ಯಂತ ದುಭಾರಿ ಎನ್ನಲಾಗುತ್ತಿದೆ.

 

 

ಮಹಾಮಹಿಮರಿಗಷ್ಟೇ ಸೀಮಿತವಾಗಿರುವ ಈ ಕಾರ್ಡ್ ಜಗತ್ತಿನ ಅಪ್ರತಿಮರ ಕೈಗಳನ್ನು ಮಾತ್ರವೇ ತಲುಪಲಿದೆಯಂತೆ. ಚಿನ್ನ, ಬೆಳ್ಳಿ ಬಳಸಿ ಈ ಆಮಂತ್ರಣವನ್ನು ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ.

 

 

ಆದರೆ ಈ ಸುದ್ದಿ ಸುಳ್ಳು ಎಂದು ರಿಲಯನ್ಸ್ ಸಂಸ್ಥೆ ಸ್ಪಷ್ಟನೆ ನೀಡಿದೆ ಇಂತಹ ಸುಳ್ಳು ಸುದ್ದಿಗಳನ್ನು ವಿಡಿಯೋ ಮಾಡಿ ವೈಭವೀಕರಿಸಿದ್ದಾರೆ , ಇದು ಹೀಗೆ ಮುಂದುವರೆದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಿಲಯನ್ಸ್ ಸಂಸ್ಥೆ ಸ್ಪಷ್ಟಪಡಿಸಿದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top