fbpx
ರಾಜಕೀಯ

ರಾಜಕೀಯ ನಿವೃತ್ತಿ ಘೋಷಿಸಿದ ಸೋನಿಯಾ ಗಾಂಧಿ..!

ರಾಜಕೀಯ ನಿವೃತ್ತಿ ಘೋಷಿಸಿದ ಸೋನಿಯಾ ಗಾಂಧಿ..!

 

 

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುಂಚೆಯೇ ಮಾಧ್ಯಮ ವರದಿಗಾರರೊಂದಿಗೆ ಮಾತನಾಡುತ್ತಾ, ಅವರು ರಾಜಕೀಯದಿಂದ ನಿವೃತ್ತರಾಗುವುದಾಗಿ ಹೇಳಿದ್ದಾರೆ. ರಾಹುಲ್ ಗಾಂಧಿಯವರು ಅಧಿಕೃತವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಒಂದು ದಿನ ಮುಂಚಿತವಾಗಿಯೇ ಸೋನಿಯಾ ಗಾಂಧಿ ರಾಜಕೀಯ ನಿವೃತ್ತಿಯನ್ನು ಘೋಷಿಸುವುದಾಗಿ ಸುಳಿವು ನೀಡಿದ್ದಾರೆ.

ಕಳೆದ ಒಂದು ವರ್ಷದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನಲೆಯಲ್ಲಿ 71 ವರ್ಷ ವಯಸ್ಸಿನ ಸೋನಿಯಾ ಗಾಂಧಿ ಅವರು ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದು ಈ ಕುರಿತು ಸದ್ಯದಲ್ಲೇ ಅಧಿಕೃತ ಘೋಷಣೆ ಹೊರ ಬೀಳಲಿದೆ ಎಂದು ಮೂಲಗಳು ತಿಳಿಸಿವೆ. ಈಗ “ನಿವೃತ್ತಿ ಪಡೆಯಲು ಸೂಕ್ತ ಕಾಲ ಬಂದಿದೆ” ಎಂದು ಸೋನಿಯಾ ಮಾಧ್ಯಮದವರಿಗೆ ಹೇಳಿದ್ದಾರೆ.

 

 

ಸೋನಿಯಾ ಗಾಂಧಿ ಕಳೆದ 19 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ತಮ್ಮ ಅದ್ಯಕ್ಷತೆಯಲ್ಲಿ ಮುನ್ನಡಿಸಿಕೊಂಡು ಬಂದಿದ್ದರು. ಅನಾರೋಗ್ಯ ಕಾರಣ ಅಮೇರಿಕಾಗೆ ಹೋಗಿ ಚಿಕಿತ್ಸೆ ಪಡೆಯುತ್ತಿರುವ ಸೋನಿಯಾ ಗುಜರಾತ್ ಚುನಾವಣೆಯ ವೇಳೆಯಲ್ಲಿ ಪ್ರಚಾರಕ್ಕೂ ಆಗಮಿಸಿರಲಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top