fbpx
ಮನೋರಂಜನೆ

ಸನ್ನಿ ಲಿಯೋನ್ ವಿರುದ್ಧ ಪೊರಕೆ ಹಿಡಿದು ಬೀದಿಯಲ್ಲಿ ಪ್ರತಿಭಟನೆಗಿಳಿದ ಬೆಂಗಳೂರು ಮಹಿಳೆಯರು..!

ಸನ್ನಿ ಲಿಯೋನ್ ವಿರುದ್ಧ ಪೊರಕೆ ಹಿಡಿದು ಬೀದಿಯಲ್ಲಿ ಪ್ರತಿಭಟನೆಗಿಳಿದ ಬೆಂಗಳೂರು ಮಹಿಳೆಯರು..!

 

 

2018ಹೊಸ ವರ್ಷದ ಸಂಭ್ರಮದಲ್ಲಿ ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ‘ಸನ್ನಿ ನೈಟ್ಸ್’ ವಿರುದ್ಧ ನಗರದ ಮಹಿಳೆಯರು ಪೊರಕೆ ಹಿಡಿದು ಬಾಲಿವುಡ್​ನ ಮಾದಕ ತಾರೆ ಸನ್ನಿಲಿಯೋನ್ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಸನ್ನಿ ಸೀರೆ ಉಟ್ಟುಕೊಂಡು ಬಂದು ಕಾರ್ಯಕ್ರಮ ನಡೆಸಲಿ ಆದರೆ ಅರೆ ಬರೇ ಬೆತ್ತಲೆಯಲ್ಲಿ ಕುಣಿಯುವುದು ಬೇಡ ಎಂದು ಆಗ್ರಹಿಸಿದ್ದಾರೆ.

 

 

ಟೈಮ್ಸ್ ಕ್ರಿಯೇಷನ್ ಜಾಹಿರಾತು ಸಂಸ್ಥೆ ನಾಗಾವರದ ಮಾನ್ಯತಾ ಟೆಕ್​ ಪಾರ್ಕ್​ನಲ್ಲಿ ಹೊಸ ವರ್ಷದ ಆಚರಣೆಗೆ ಸನ್ನಿ ಲಿಯೋನ್​’ ಅನ್ನು ಆಹ್ವಾನ​ ಮಾಡಿ ಡಿಸೆಂಬರ್ 31 ರಂದು ಸನ್ನಿ ನೈಟ್ಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದು ನಮ್ಮ ನೆಲದ ಸಂಸ್ಕೃತಿ ವಿರೋಧ ಎಂದು ವಿವಿಧ ಸಂಘಟನೆಗಳು ಹೋರಾಟ ಮಾಡುತ್ತಿದ್ದವು. ಇಂದು ಸಂಘಟನೆಗಳ ಮಹಿಳೆಯರು ಸನ್ನಿ ಬೆಂಗಳೂರಿಗೆ ಆಗಮಿಸುತ್ತಿರುವುದನ್ನು ವಿರೋಧಿಸಿ ಮಾನ್ಯತಾ ಟೆಕ್​ ಪಾರ್ಕ್ ಬಳಿ ಕಪ್ಪು ಪಟ್ಟಿಯನ್ನು ಕಟ್ಟಿಕೊಫಂಡು ಪೊರಕೆ ಹಿಡಿದು ಸನ್ನಿ ಲಿಯೋನ್’ಳ ಭಾವಚಿತ್ರಗಳನ್ನು ಬೆಂಕಿಗಾಹುತಿ ಮಾಡಿ ಪ್ರತಿಭಟನೆ ಮಾಡಿದರು.

 

 

ಸನ್ನಿ ನೈಟ್ ಕಾರ್ಯಕ್ರಮಕ್ಕೆ ರಾಜ್ಯದಲ್ಲೆಡೆ ವಿರೋಧ ಬರುತ್ತಿದ್ದಂತೆ ಸನ್ನಿ ಲಿಯೋನ್ ನೈಟ್ ಕಾರ್ಯಕ್ರಮ ರದ್ದುಪಡಿಸಲು ಗೃಹ ಸಚಿವರ ಆದೇಶ ಹೊರಡಿಸಿದ್ದು ” ಸನ್ನಿ ಕಾರ್ಯಕ್ರಮಕ್ಕೆ ಪರ್ಮಿಶನ್ ಕೊಡಬಾರದೆಂದು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ. ಒಂದು ವೇಳೆ ಈಗಾಗಲೇ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟಿದ್ದಾರೆ ಅದನ್ನು ರದ್ದು ಮಾಡಲು ತಿಳಿಸುವೆ. ಸನ್ನಿ ಲಿಯೋನ್​ ಕಾರ್ಯಕ್ರಮ ನಮ್ಮ ನಾಡಿನ ಸಂಸ್ಕೃತಿಗೆ ಪೂರಕವಾದುದಲ್ಲ. ಹೀಗಾಗಿ, ಈ ಕಾರ್ಯಕ್ರಮ ಬೇಡ ಎಂದಿದ್ದೇವೆ” ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top