fbpx
ಸಮಾಚಾರ

ತಮ್ಮ ಎರಡನೇ ಮದುವೆಯ ಬಗ್ಗೆ ಬಹಿರಂಗವಾಗಿಯೇ ಉತ್ತರ ಕೊಟ್ಟ ಕುಮಾರಸ್ವಾಮಿ..!

ತಮ್ಮ ಎರಡನೇ ಮದುವೆಯ ಬಗ್ಗೆ ಬಹಿರಂಗವಾಗಿಯೇ ಉತ್ತರ ಕೊಟ್ಟ ಕುಮಾರಸ್ವಾಮಿ..!

 

 

ಮಾಜಿ ಮುಖ್ಯಮಂತ್ರಿ ಹಾಗು ಜೆಡಿಎಸ್ ರಾಜ್ಯಾಧ್ಯಕ್ಷ ಅವರ ಎರಡನೇ ಮದುವೆಯ ವಿಚಾರ ಯಾವಾಗಲೂ ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿಯಲ್ಲಿರುತ್ತಿತ್ತು. ಅವರ ಮತ್ತು ನಟಿ ರಾಧಿಕಾ ನಡುವಿನ ಸಂಭಂದ ಈಗ ಹಳಸಿದೆ, ರಾಧಿಕಾ ಮತ್ತೊಂದು ಮದುವೆಯಾಗಿದ್ದಾರೆ ಅಂತೆಲ್ಲಾ ಸೋಷಿಯಲ್ ಮೀಡಿಗಳಲ್ಲಿ ವದಂತಿಗಳು ಹರಡುತ್ತಿತ್ತು. ಈಗ ಸ್ವತಃ ಕುಮಾರಸ್ವಾಮಿಯವರೇ ತಮ್ಮ ಎರಡನೇ ಮದುವೆಯ ಕುರಿತು ಮೌನ ಮುರಿದಿದ್ದಾರೆ.

 

 

ಮೊನ್ನೆ ಕನ್ನಡದ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ನಿರೂಪಕ ಅವರ ಎರಡನೇ ಮದುವೆಯ ಬಗ್ಗೆ ಪ್ರಶ್ನಿಸಿದಾಗ ಅವರ ಎರಡನೇ ವಿವಾಹದ ಬಗ್ಗೆ ಮಾತನಾಡಿದ ಅವರು ಆ ಘಟನೆಯ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದಾರೆ, “ನನ್ನದು ತಾಯಿಯ ಮನಸ್ಸು, ಮೃದು ಸ್ವಭಾವ ಈ ವೆಕ್ ನೆಸ್ ನಿಂದಲೇ ಎರಡನೇ ಮದುವೆಯಾಗಿ ಜೀವನದಲ್ಲಿ ಹೊಡೆತ ತಿಂದಿದ್ದೇನೆ, ನಾನು ಎರಡನೇ ಮಾಡುವೆ ಮಾಡಿಕೊಂಡಿರುವುದು ನನ್ನ ಜೀವನದಲ್ಲಿ ಮಾಡಿಕೊಂಡ ತಪ್ಪು, ಯಾವುದೊ ಒಂದು ಭಾವನಾತ್ಮಕ ನಿರ್ಧಾರದಿಂದ ಎರಡನೇ ಮದುವೆ ಮಾಡಿಕೊಂಡೆ ”

 

 

ನಾನು ಎರಡನೇ ಮದುವೆಯಾಗಿರುವುದು ದೊಡ್ಡ ಪ್ರಮಾದ, ನಾನು ಯಾವತ್ತೂ ಕೂಡ ಯಾರಿಗೂ ಮೋಸ ಮಾಡಿಲ್ಲ. ಎರಡನೇ ಮದುವೆ ಮಾಡಿಕೊಂಡಿರುವ ವಿಷಯದಲ್ಲಿ ನನಗೆ ಇವತ್ತು ಕೂಡ ಪಾಪಪ್ರಜ್ಞೆ ಕಾಡುತ್ತಿದೆ, ಯಾರೂಕೂಡ ಮದುವೆ ವಿಚಾರದಲ್ಲಿ ನನ್ನ ರೀತಿಯ ದುಡುಕಿ ತೀರ್ಮಾನಗಳನ್ನು ಮಾಡಬಾರದೆಂದು ಮತ್ತು ಈ ಬಗ್ಗೆ ಬಹಳ ಎಚ್ಚರಿಕೆಯಿಂದ ನಿರ್ಧಾರ ಮಾಡಬೇಕು” ಕುಮಾರಸ್ವಾಮಿ ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top