fbpx
ಸಮಾಚಾರ

ಗಂಡನೇ ತಲೆಹಿಡುಕ-ಪತ್ನಿಯೇ ವೇಶ್ಯೆ – ಇಲ್ಲಿ ಇದು ‘ಕಾಮ’ನ್ ವೃತ್ತಿ!

ಗಂಡನೇ ತಲೆಹಿಡುಕ-ಪತ್ನಿಯೇ ವೇಶ್ಯೆ – ಇಲ್ಲಿ ಇದು ‘ಕಾಮ’ನ್ ವೃತ್ತಿ!

ತಾಳಿ ಕಟ್ಟಿದ ಗಂಡನೆ ಪಿಂಪ್! ಅಲಿಯಾಸ್ ತಲೆ ಹಿಡುಕ ಮತ್ತೊಮ್ಮೆ ಅಲಿಯಾಸ್ ಮಾಮ! ಪತ್ನಿಯೇ ಇಲ್ಲಿ ವೇಶ್ಯೆ. ಸಂಜೆ 7ರ ನಂತರ ಇಲ್ಲಿ ಕೆಲಸ ಆರಂಭವಾಗುತ್ತದೆ ಬೆಳಗಿನವರೆಗೂ ಡ್ಯೂಟಿ.ಇದು ಇಲ್ಲಿ ‘ಕಾಮ’ನ್.

ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ, ಕಾಡುತ್ತಿರುವ ಚಿಕಿತ್ಸೆಗೆ ಮದ್ದು ಎಲ್ಲಕ್ಕೂ ಹಣ ಒದಗಿ ಬರುವುದು ಹೆಣ್ಣಿನಿಂದಲೇ ಕಟ್ಟಿಕೊಂಡ ಗಂಡ ಗಿರಾಕಿಗಳನ್ನು ಹುಡುಕಿ ತರುವುದರಲ್ಲೇ ಬ್ಯುಸಿ! ಅಥವಾ ಅದೇ ಅವನ ಪವಿತ್ರ ಕಾರ್ಯ.

ಬಿಹಾರದಲ್ಲೋ ಅಥವಾ ಜಾರ್ಖಂಡ್ ಅಥವಾ ಛತ್ತೀಸ್‍ಗರ್‍ನ ದೂರದ ಹಳ್ಳಿಗಳಲ್ಲಿನ ಧಾರುಣ ಬದುಕಲ್ಲ. ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿಯೇ ಇಂಥಾದ್ದೊಂದು ಅಡ್ಡ ಇದೆ ಎಂದು ‘ಅಪನೇ ಆಪ್’ ಎಂಬ ಸ್ವಯಂಸೇವಾ ಸಂಸ್ಥೆ ವರದಿ ಮಾಡಿದೆ.

 

 

ದೆಹಲಿಯಲ್ಲಿ ಒಂದು ರೇಪ್ ಜರುಗಿ ಹೋದರೆ… ಭಾರತವೇ ಬೆಚ್ಚಿ ಬೀಳುತ್ತದೆ. ಆದರೆ ಇಲ್ಲಿ ನಿತ್ಯ ಮಡದಿಯರ ರೇಪ್ ನಡೆಯುತ್ತಿರುತ್ತದೆ. ಗಂಡ ಮೂಕ ಪ್ರೇಕ್ಷಕ. ಮಕ್ಕಳಿಗೆ ಅರ್ಥವಾಗದು. ಅರ್ಥವಾದವರು ಅಸಹಾಯಕರು!

ಬೇಕಿದ್ದರೆ ರಾಣಿಯನ್ನೇ ಕೇಳಿ…! ದಶಕಗಳ ಹಿಂದೆ ಎಳೇ ಪ್ರಾಯದಲ್ಲಿ ಮದುವೆಯಾಗಿ ಬಂದ ಇವಳು 6 ಮಕ್ಕಳ ತಾಯಿ. ರೂ. 200ಕ್ಕೆ 8-10 ಗಿರಾಕಿಗಳನ್ನು ತೃಪ್ತಿ ಪಡಿಸಬೇಕು. ಎಷ್ಟೋ ವೇಳೆ ದುಡಿದ ಕಾಸು ಕೂಡ ಇವರ ಕೈಗೆ ಎಟುಕುವುದಿಲ್ಲ. ಮಧ್ಯವರ್ತಿ ದೋಚರಿ ಪರಾರಿಯಾಗುತ್ತಾನೆ. ಆತ ಹಾಗೆ ಸುಮ್ಮನೆ ಹೋಗುವುದಿಲ್ಲ. ಮನ ಬಂದಂತೆ ಅನುಭವಿಸಿ ಹೋಗುತ್ತಾನೆ! ಒಂದು ರೀತಿಯಲ್ಲಿ ರೇಪ್!

ಆದರೂ ರಾಣಿಯತರಹದವರು ಯಾರಿಗೂ ದೂರುವುದಿಲ್ಲ. ನೋವೆಂದು ಅಬ್ಬರಿಸವುದಿಲ್ಲ. ಕೆಲವೊಮ್ಮೆ ಸಂಜೆ 7ರಿಂದ ಮರುದಿನ ಬೆಳಗಿನ 7ಗಂಟೆಯವರೆಗೆ ಇವಳ ಕಾಯಕವಿರಲಿದೆ! ನಂತರ ಗಂಡ, ತನ್ನ ಆರು ಮಕ್ಕಳ ಆಹಾರ ಸಿದ್ದಪಡಿಸಿ ಅವರನ್ನು ಶಾಲೆಗೆ ಕಳುಹಿಸಬೇಕು. ಕೆಲವೇ ತಾಸುಗಳ ನಿದ್ದೆ ಮಾತ್ರ ಇವಳದ್ದು. ಉಳಿದಂತೆ ರೆಟ್ಟೆ ಮುರಿಯುವ ಕೆಲಸ. ಕಾಡುವ ವಿಟಪುರುಷರನ್ನು ಸಂಭಾಳಿಸುವುದರಲ್ಲೇ ಈಕೆಯ ಜೀವನ ಸವೆದು ಹೋಗುತ್ತಿದೆ.

 

 

‘ಇದು ಇಲ್ಲಿನ ಹೆಣ್ಣಿನ ಕರ್ತವ್ಯ’ ಎನ್ನುತ್ತಾಳೆ ಹೊರಬಿ ಎಂಬ ಮತ್ತೊಬ್ಬ ವೇಶ್ಯೆ! ಈಕೆಗೆ ಈ ವೃತ್ತಿ ಇಷ್ಟವಿಲ್ಲ. ತನ್ನ ಮಕ್ಕಳಿಗೆ ಈ ದುರ್ಗತಿ ಬಾರದಿರಲೆಂದೇ ಇಲ್ಲಿನ ವೇಶ್ಯೆಯರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಕೆಲವರು ಎಳೇ ವಯಸ್ಸಿಗೆ ತಮ್ಮ ಮಕ್ಕಳನ್ನು ಮದುವೆ ಮಾಡಿಕೊಟ್ಟು ಈ ಕೂಪದಿಂದ ಹೊರಗೆ ಹಾಕುತ್ತಿದ್ದಾರೆ… ಆದರೂ ಕೆಲವೊಮ್ಮೆ ಕಾಡುವ ಕಾಮುಕರು 9ರ ಬಾಲೆಯಿಂದ ಹಿಡಿದು ಹಲವರನ್ನು ತಮ್ಮ ದಾಹ ನೀಗಿಸಿಕೊಳ್ಳಲು ಬರುತ್ತಾರಂತೆ!

ಇಲ್ಲಿ ಗಂಡು ಮಕ್ಕಳಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ನೀಡುತ್ತಾರಂತೆ. ಏಕೆಂದರೆ ಕಾಮುಕರ ಕಾಟವಿರದು. ಹೆಣ್ಣುಮಕ್ಕಳು ಅಪೌಷ್ಟಿಕವಾಗಿಯೇ ಇರುವಂತೆ ನೋಡಿಕೊಳ್ಳುತ್ತಾರಂತೆ. ಬೇಗ ಸತ್ತು ಸ್ವರ್ಗ ಸೇರಲಿ. ಎಂಬ ನೋವಿನಲ್ಲಿ ಹೀಗೆ ಮಾಡುತ್ತಾರೆಯೇ ವಿನಃ ಗಂಡುಮಗುವೆಂಬ ಮಮಕಾರವಲ್ಲ! ಹೆಣ್ಣು ಇಲ್ಲಿ ನೆಮ್ಮದಿಯಾಗಿರಬೇಕೆಂದರೆ ಆಕೆ ಸತ್ತು ಹೆಣವಾದಾಗ ಮಾತ್ರ ಸಾಧ್ಯವೆನ್ನುತ್ತಾರೆ ಇಲ್ಲಿನ ಮಹಿಳೆಯರು.

ಮಹಿಳಾ ಸ್ವಾವಲಂಬನೆ, ಮಹಿಳಾದಿನಾಚರಣೆ… ಮಹಿಳಾ ಮೀಸಲಾತಿ ಎಂಬ ದೊಡ್ಡ ದೊಡ್ಡ ಪದಗಳು ಕೇಳಿ ಬರುವ ದೆಹಲಿಯಲ್ಲಿಯೆ ‘ಮಸಣದ ಹೂ’ಗಳು ಕೂಡ ಇರುವುದು ವಿಪರ್ಯಾಸವೇ ಸರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top