fbpx
ಸಮಾಚಾರ

ಮೋದಿಯನ್ನು ಪ್ರಧಾನ ಮಂತ್ರಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಸಾ.ರಾ. ಗೋವಿಂದು ಆಕ್ರೋಶ.

ಮೋದಿಯನ್ನು ಪ್ರಧಾನ ಮಂತ್ರಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಸಾ.ರಾ. ಗೋವಿಂದು ಆಕ್ರೋಶ.

 

 

ಕರ್ನಾಟಕದ ಕಾವೇರಿ, ಮಹದಾಯಿ, ಕಳಸಾ-ಬಂಡೂರಿ ಯೋಜನೆ ಸಮಸ್ಯೆಗಳನ್ನ ಬಗೆಹರಿಸಲಾಗದ ನರೇಂದ್ರ ಮೋದಿಯನ್ನು ಭಾರತ ದೇಶದ ಪ್ರಧಾನಿ ಎಂದು ಒಪ್ಪಿಕೊಳ್ಳಲು ಸಾಧ್ಯವಾಗೋದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು ಮೋದಿ ವಿರುದ್ಧ ಗುಡುಗಿದ್ದಾರೆ..

 

 

ಹುಬ್ಬಳ್ಳಿಯಲ್ಲಿ ನಡೆದ ‘ಅವ್ವ’ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಸಾ.ರಾ ಗೋವಿಂದು ಮಹದಾಯಿ ಯೋಜನೆಗಾಗಿ ಉತ್ತರ ಕರ್ನಾಟಕದಲ್ಲಿ ನಿರಂತರ ಪ್ರತಿಭಟನೆ, ಧರಣಿ ನಡೆಸುವ ಮೂಲಕ ಯೋಜನೆ ಅನುಷ್ಠಾನ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಆದರೆ ಜನರ ನೋವಿನ ದನಿಗೆ ಬೆಲೆಯೇ ಇಲ್ಲದಂತಾಗಿದೆ. ಕರ್ನಾಟಕದ ವಿಷಯದಲ್ಲಿ ಕೇಂದ್ರ ಮಲತಾಯಿ ದೋರಣೆ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಕೇಂದ್ರ ಸರ್ಕಾರ ಮನಸ್ಸು ಮಾಡುದ್ರೆ ಒಂದೇ ದಿನದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಬಹುದು ಆದರೆ ಕರ್ನಾಟದಲ್ಲಿ ಅವರ ಪಕ್ಷ ಆಡಳಿತದಲ್ಲಿ ಇಲ್ಲ ಎಂದು ಕ್ಯಾರೇ ಎನ್ನುತ್ತಿಲ್ಲ. ನದಿಯ ನೀರು ಅನಾವಶ್ಯಕವಾಗಿ 90 ಟಿಎಂಸಿ ನೀರು ಸಮುದ್ರವನ್ನು ಸೇರುತ್ತಿದ್ದು ಅದರಲ್ಲಿ ಕೇವಲ 7 ಟಿಎಂಸಿ ನೀರು ಕುಡಿಯಲು ಬಿಡಿ ಎಂದರೆ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ, ಜನರ ಕುಡಿಯೋ ನೀರಿಗೆ ಒಂದು ಪರಿಹಾರವನ್ನು ಸೂಚಿಸಲಾಗದ ನರೇಂದ್ರ ಮೋದಿಯನ್ನ ಈ ದೇಶದ ಪ್ರಧಾನ ಮಂತ್ರಿಯೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ”

 

 

“ನಾನು ಇಲ್ಲಿ ಯಾವುದೆ ಪಕ್ಷದ ಪರವಾಗಿಯೋ ಅಥವಾ ವಿರೋಧಿಯಾಗಿಯೋ ಮಾತನಾಡುತ್ತಿಲ್ಲ ನಾನೊಬ್ಬ ಹೋರಾಟಗಾರನಾಗಿ ಮಾತನಾಡುತ್ತಿದ್ದೇನೆ, ಕರ್ನಾಟಕದ ಜನ ಮೂರ್ಖರಲ್ಲ, ಎಲ್ಲವನ್ನೂ ಗಮನಿಸುತ್ತಿರುತ್ತಾರೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸದೆ ಇದ್ದಾರೆ ಸರಿಯಾದ ಬುದ್ದಿಯನ್ನು ಜನರೇ ಕಲಿಸುತ್ತಾರೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಯನ್ನ ನಡೆಸಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top