fbpx
ಮನೋರಂಜನೆ

ರಣಧೀರ ಚಿತ್ರದಲ್ಲಿ ಅಪ್ಪನಿಗೆ ಒಳ್ಳೆ ಪಾತ್ರ ನೀಡಿದಕ್ಕೆ ಈ ರೀತಿ ರವಿಚಂದ್ರನ್ ರವರ ಋಣ ತೀರಿಸಲು ಖುಷಿಯಿದೆ -ನಂದಕಿಶೋರ್

ಬೃಹಸ್ಪತಿ ಮಾತುಗಳು ಕೇಳಿ

 

ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ, ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್‍ರವಿಚಂದ್ರನ್ ಎರಡನೆ ಚಿತ್ರ ‘ಬೃಹಸ್ಪತಿ’ ಚಿತ್ರದ ಧ್ವನಿಸಾಂದ್ರಿಕೆಯು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಸರಳವಾಗಿ ಅನಾವರಣಗೊಂಡಿತು. ಪ್ರಾರಂಭದಲ್ಲಿ ಖಳನಾಯಕ ತಾರಕ್‍ಅಪ್ಪಯ್ಯ ಮತ್ತು ನಾಯಕ ಇಬ್ಬರು ಲೈವ್ ಆಗಿ ಕಂಗಣ್ಣಿನಿಂದ ಮಾತನಾಡುವುದನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು. ಇದರಲ್ಲಿ ವಿಶೇಷತೆ ಇದೆ. ಸುಮಾರು ಮೂರು ಪುಟಗಳ ಸಂಭಾಷಣೆಯನ್ನು ನಿಲ್ಲಿಸದೆ ಸುಲಲಿತವಾಗಿ ನಾಯಕ ಹೇಳಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.

 

 

ಶಾಸಕ ಮುನಿರತ್ನ ಮಾತನಾಡಿ ಅವರ ಪ್ರತಿಭೆಯನ್ನು ಇಂದೇ ನೋಡಿದ್ದು. ಅಪ್ಪನನ್ನು ಮೀರಿಸಿದ್ದೀರಾ. ಒಳ್ಳೆ ಭವಿಷ್ಯ ಇದೆ. ಚಿತ್ರರಂಗಕ್ಕೆ ಮಾಸ್ ಹೀರೋ ಸಿಕ್ಕಿದ್ದಾರೆ. ರವಿಚಂದ್ರನ್ ನೇರವಾಗಿ ಮಾತನಾಡಿ ತೊಂದರೆ ಕೊಟ್ಟಿದ್ದಾರೆ. ಚಿತ್ರರಂಗ ಬೆಳೆಯಬೇಕು ಎಂಬುದು ನಮ್ಮಲ್ಲರ ಅಭಿಮತವಾಗಿದೆ ಎಂದರು. ಶೀರ್ಷಿಕೆಯನ್ನು ಯೋಗರಾಜಭಟ್, ಶ್ರೀಕಾಂತ್ ನೀಡಿದ್ದಕ್ಕೆ ಥ್ಯಾಂಕ್ಸ್. ಸೆಟ್‍ನಲ್ಲಿ ಅವರು ಹೇಳಿದ ಡೈಲಾಗ್ ನೋಡಿ ಎಲ್ಲರು ಚಪ್ಪಾಳೆ ತಟ್ಟಿದ್ದರು. ಮುಂದಿನ ವರ್ಷ ಬಿಡುಗಡೆ ಮಾಡುವ ಯೋಜನೆ ಇದೆ ಎಂಬುದು ನಿರ್ಮಾಪಕರ ಮಾತಾಗಿತ್ತು.

 

 

ಹೆಚ್ಚು ಸಮಯ ತೆಗೆದುಕೊಳ್ಳುತ್ತೇನೆಂದು ಅನುಮತಿ ಪಡೆದುಕೊಂಡ ಜಗ್ಗೇಶ್ ಮೊದಲು ಹೇಳಿದ್ದು ಮನೋರಂಜನ್ ಸೂಪರ್ ಮಗ. ಮುಂದೆ ಸರ್ಕಸ್ ಕಂಪೆನಿಯ ಕತೆಯನ್ನು ಹೇಳಿ, ರವಿಚಂದ್ರನ್‍ರವರು ಬೇಟೆಯಾಡುವ ಮಗನಂತೆ ಬೆಳೆಸಿದ್ದಾರೆ. ಯಾರು ಸ್ವತ: ಶ್ರಮ ಪಡುತ್ತಾರೋ ಅವರೇ ನಿಜವಾದ ಕಲಾವಿದರಾಗುತ್ತಾರೆಂದು ರಣಧೀರ ಚಿತ್ರೀಕರಣದ ಘಟನೆಗಳನ್ನು ನೆನಪಿಸಿಕೊಂಂಡು ಎಲ್ಲರನ್ನು ನಗಿಸಿದರು.

 

 

ಆಗಿನ ಕಾಲಕ್ಕೆ ಒಂದು ಕೋಟಿ ಅಂದರೆ ಸಾಮಾನ್ಯದ ಮಾತಲ್ಲ. ಚಿತ್ರರಂಗದ ಶೋಮ್ಯಾನ್ ಅಂತ ಛಾಪು ಮೂಡಿಸಿದ್ದರು. ಇಂದು ಇಲ್ಲಿಗೆ ಬಂದಿರುವುದು ಬಾಡಿ ಚಾರ್ಜ್ ಆಗಿದೆ. ರವಿರವರು ಹಲವು ಸುಂದರ ನಾಯಕಿಯರನ್ನು ದೇಣಿಗೆ ನೀಡಿದ್ದಾರೆ. ಮಾದ್ಯಮದವರು ಸೇರಿ ಇಂತಹ ನಟರನ್ನು ಮೇಲಕ್ಕೆ ಎತ್ತಬೇಕು. ನಮ್ಮ ಕನ್ನಡ, ಚಿತ್ರರಂಗ, ಮನೆ ಉಳಿಯಬೇಕೆಂಬ ಸ್ವಾರ್ಥ ನನ್ನಲ್ಲಿದೆ. ನಂತರ ಬೇರೆ ಭಾಷೆ ಅಂತ ದೀರ್ಘ ಕಾಲದ ಮಾತಿಗೆ ವಿರಾಮ ಹಾಕಿದರು.

ಮನೋರಂಜನ್ ಹೈಬ್ರೀಡ್ ಬೀಜ ಆಗಿದ್ದಾರೆ. ಫಲವತ್ತಾದ ಮಣ್ಣು ಅಂದರೆ ರಾಕ್‍ಲೈನ್‍ವೆಂಕಟೇಶ್, ಬಿತ್ತಿರೋದು ನಂದಕಿಶೋರ್, ಕಲರ್ ಆಗಿ ಮಾಡಿದ್ದು ಹರಿಕೃಷ್ಣ, ಬೆಳಕು ನೀಡಿರುವುದು ಸತ್ಯಹೆಗಡೆ, ನಾನೊಂದು ಸಣ್ಣ ಹುಳುವಾಗಿ ನಟಿಸಿದ್ದೇನೆ. ಇದು ಮರವಾಗಿ ಬೆಳೆಯಲು ಎಲ್ಲರ ಸಹಕಾರಬೇಕು ಅಂತಾರೆ ಸಾಧುಕೋಕಿಲ. ನಿರ್ಮಾಪಕರು ಇಂತಹ ಪಾತ್ರ ಮಾಡಬೇಕೆಂದು ಕರೆಸಿದಾಗ ಭಯವಿತ್ತು. ತಮಿಳಿನಲ್ಲಿ ಧನುಷ್‍ರವರ 25ನೇ ಸಿನಿಮಾವಾಗಿದೆ.

 

 

ಸಾಧು ಸರ್ ಪ್ರೋತ್ಸಾಹ ಮಾಡಿದ್ದರಿಂದ ಉದ್ದದ ಡೈಲಾಗ್ ಹೇಳಲು ಸಹಕಾರಿ ಆಯ್ತು ಅಂತ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿದ್ದು ಮನೋರಂಜನ್ ರವಿಚಂದ್ರನ್. ರಾಕ್‍ಲೈನ್ ಸರ್ ನನಗೆ ಗಾಡ್‍ಫಾದರ್ ಇದ್ದಂತೆ. ಅಭಿನಯ ಹೇಗೆ ಮಾಡಬೇಕೆಂದು ನಂದಕಿಶೋರ್ ಅವರಿಂದ ಕಲಿತಿದ್ದೇನೆ ಎಂದು ಅವರಿಗೆ ಗೌರವ ಸಲ್ಲಿಸಿದರು ಸೋದರ ವಿಕ್ರಂರವಿಚಂದ್ರನ್. ರಣಧೀರ ಚಿತ್ರದಲ್ಲಿ ಒಳ್ಳೆ ಪಾತ್ರ ನೀಡಿದ್ದಾರೆಂದು ಅಪ್ಪ ಹೇಳಿದ್ದು ನೆನಪು ಇದೆ. ಅವರ ಋಣ ತೀರಿಸಲು ರವಿ ಸರ್ ಮಗನ ಚಿತ್ರಕ್ಕೆ ಪ್ರೀತಿಯಿಂದ ಆಕ್ಷನ್ ಕಟ್ ಹೇಳಿದ್ದು ಖುಷಿ ತಂದಿದೆ ಎಂದರು ನಿರ್ದೇಶಕ ನಂದಕಿಶಶೋರ್. ರವಿಚಂದ್ರನ್ ಪತ್ನಿ, ಪುತ್ರಿ, ಸಿನಿಪಂಡಿತರು ಸುಂದರ ಸಮಾರಂಭದಲ್ಲಿ ಉಪಸ್ತಿತರಿದ್ದರು. ನಾಯಕಿ ಕನ್ನಿಕಾ ಪೋಸ್ಟರ್ ಹಾಗೂ ವೇದಿಕೆಯಲ್ಲಿ ಕಾಣಿಸಲಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top