fbpx
ಸಮಾಚಾರ

ಗುಜರಾತ್: ಯಾರಿಗೆ ಗಂಟಲು ನೋವು?

ಮಾತು ಮಾತು ಮಾತು… ಇನ್ನೊಬ್ಬರ ದೋಸೆಯಲ್ಲಿ ಹುಡುಕಿದರು ತೂತು… ತಮ್ಮನೆ ದೋಸೆಯನ್ನೇ ನೋಡಿಕೊಳ್ಳಲಿಲ್ಲ!

ಬಿಜೆಪಿಮತ್ತು ಕಾಂಗ್ರೆಸ್ ಪಕ್ಷಗಳಿಗೆ ಭಾರಿ ಪ್ರತಿಷ್ಠೆಯ ಈ ಚುನಾವಣೆ ಪ್ರಚಾರದಲ್ಲಿ ಸ್ಪಷ್ಟವಾದ, ನಿರ್ದಿಷ್ಟವಾದ ವಿಷಯ, ಅಜೆಂಡಾಗಳು ಹಿಂದಕ್ಕೆ ತಳ್ಳಲ್ಪಟ್ಟು ಬರೀ ಒಣ ವಾಗ್ವಾದಗಳೇ ಮಿಂಚಿದವು.

ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಸ್ಪರ್ಧೆಗೆ ಬಿದ್ದವರಂತೆ ನಿತ್ಯವೂ ದೇವಸ್ಥಾನಗಳಿಗೆ ಅಲೆದರು. ಅಯ್ಯರ್ ಟೀಕಿಸಿದ್ದನ್ನೇ ಮತ್ತೆಮತ್ತೆ ಪ್ರಸ್ತಾಪಿಸಿದ ಮೋದಿ, ತಾನು ಹಿಂದುಳಿದ ಜಾತಿಯವನಾಗಿದ್ದಕ್ಕೇ ಅಯ್ಯರ್ ತಮ್ಮನ್ನು ‘ನೀಚ್’ ಎಂದಿದ್ದಾರೆ, ಇದು ಎಲ್ಲ ಹಿಂದುಳಿದ ಜಾತಿಗಳಿಗೂ, ಎಲ್ಲ ಗುಜರಾತಿಗಳಿಗೂ ಕಾಂಗ್ರೆಸ್ ಮಾಡಿದ ಅವಮಾನೆನ್ನುತ್ತ ಅನುಕಂಪ ಗಿಟ್ಟಿಸಲು ಯತ್ನಿಸಿದರು. ಕೊನೆಗೆ ಪಾಕಿಸ್ತಾನವೂ ಚುನಾವಣಾ ವಿಷಯವಾಯಿತು.

 

 

ಅದೆಲ್ಲ ಇರಲಿ, ಸರದಿ ಸಭೆಗಳನ್ನು ನಡೆಸಿ ಸಾಕಷ್ಟು ಮಾತನಾಡಿದರು ರಾಹುಲ್ ಮತ್ತು ಮೋದಿ. ಈಗ ಯಾರಿಗೆ ಗಂಟಲು ನೋವು ಬಂದಿರಬಹುದು? ಯಾರು ಹೆಚ್ಚು ಸುಸ್ತಾಗಿರಬಹುದು?

ಮೋದಿ? ರಾಹುಲ್? ಇಬ್ಬರ ಗಂಟಲೂ ನೋಯುತ್ತಿವೆ, ಇಬ್ಬರೂ ಸುಸ್ತಾಗಿದ್ದಾರೆ. ಆದರೆ ಇವರಿಬ್ಬರಿಗಿಂತ ಹೆಚ್ಚು ದಣಿದಿರುವ ವ್ಯಕ್ತಿಯೊಬ್ಬರಿದ್ದಾರೆ! ಅವರು ಹಗಲೆಲ್ಲ ಚುನಾವಣೆಗಾಗಿ ಹೊಸ ಹೊಸ ವಿಷಯ ಹೆಕ್ಕಿ ತೆಗೆದರು!

 

 

ರಾತ್ರಿ ತಾಸುಗಟ್ಟಲೇ ಗಂಟಲು ಹರಿಯುವಂತೆ ಚೀರಾಡಿ, ಹಾರಾಡಿ ದಣಿದರು. ಈ ಮಹಾಶಯರು ಯಾರು ಗೊತ್ತೆ? ರಿಪಬ್ಲಿಕ್ ಟಿವಿಯ ಗಂಟಲು, ಬಾಯಿ, ಮೆದುಳು ಎಲ್ಲವೂ ಆಗಿರುವ ಅರ್ನಾಬ್ ಗೋಸ್ವಾಮಿ! ಗೋಸ್ವಾಮಿಯ ಎಲ್ಲ ಚೀರಾಟಗಳ ಹಿಂದೆ ಬಿಜೆಪಿಗೆ ಅನುಕೂಲ ಮಾಡಿಕೊಡುವ ಅಜೆಂಡಾ ಇದ್ದದ್ದು ಢಾಳಾಗಿ ಕಾಣುತ್ತಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top