fbpx
ಮನೋರಂಜನೆ

ವಿರಾಟ್-ಅನುಷ್ಕಾ ಮದುವೆ ರಹಸ್ಯವಾಗಿಟ್ಟಿದ್ದೇಕೆ ಎನ್ನುವ ರಹಸ್ಯವನ್ನು ಬಹಿರಂಗಪಡಿಸಿದ ಸಾನಿಯಾ.

ವಿರಾಟ್-ಅನುಷ್ಕಾ ಮದುವೆ ರಹಸ್ಯವಾಗಿಟ್ಟಿದ್ದೇಕೆ ಎನ್ನುವ ರಹಸ್ಯವನ್ನು ಬಹಿರಂಗಪಡಿಸಿದ ಸಾನಿಯಾ.

 

 

ಡಿಸೆಂಬರ್ 11ರಂದು ಇಟಲಿಯ ಮಿಲನ್ ನಗರದಲ್ಲಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಸಿನಿಮಾರಂಗ, ರಾಜಕೀಯ ರಂಗ ಸೇರಿ ಅನೇಕಾ ಕ್ರೀಡಾ ಪಟುಗಳು ಅನುಷ್ಕಾ ವಿರಾಟ್ ಜೋಡಿಗೆ ತಮ್ಮದೇ ಶೈಲಿಯಲ್ಲಿ ಶುಭಕೋರಿದ್ದಾರೆ.

 

 

ಅಂತೆಯೇ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಕೂಡ ವಿರಾಟ್ ಅನುಷ್ಕಾ ಅವರಿಗೆ ಮದುವೆಯ ವಿಷಸ್ ತಿಳಿಸಿದ್ದು ವಿರಾಟ್-ಅನುಷ್ಕಾ ಮದುವೆ ರಹಸ್ಯವಾಗಿಟ್ಟಿದ್ದೇಕೆ? ಎನ್ನುವ ರಹಸ್ಯವನ್ನು ಸಾನಿಯಾ ಬಹಿರಂಗಪಡಿಸಿದ್ದಾರೆ. ವೈಯಕ್ತಿಕವಾಗಿ ನನಗೆ ವಿರಾಟ್ ಅನುಷ್ಕಾ ಹತ್ತಿರಾವಾಗಿ ಗೊತ್ತು, ಅವರಿಗೆ ಮದುವೆಯ ವಿಷಸ್ ತಿಳಿಸಲು ಬಯಸುತ್ತೇನೆ ಎಂದು ಸಾನಿಯಾ ವಿಶ್ ಮಾಡಿದ್ದಾರೆ.

ಇಲ್ಲಿ ಎಷ್ಟೊಂದು ಮೀಡಿಯಾ ಹೈಪ್ ಸೃಷ್ಟಿಯಾಗಲಿದೆ ಎಂಬುದನ್ನು ಅರಿತುಕೊಂಡು ಅವರು ಇಟಲಿಗೆ ಪ್ರಯಾಣಿಸಿರಬಹುದು ಎಂದು ವಿರಾಟ್ ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದಾರೆ ಎಂದು ಸಾನಿಯಾ ಹೇಳಿದ್ದಾರೆ. ದೂರದ ಇಟೆಲಿಯಲ್ಲಿ ಮದುವೆಯಾದರೂ ಮಾಧ್ಯಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಮೀಡಿಯಾಗಳು ಈ ರೀತಿ ಹೈಪ್ ಕ್ರಿಯೇಟ್ ಮಾಡೋದು ಸ್ವತಃ ನನಗೂ ಇಷ್ಟವಾಗೋದಿಲ್ಲ, ನಾನು ಮೀಡಿಯಾ ಹೈಪ್ ಪ್ರೋತ್ಸಾಹಿಸಲಾರೆ ಎಂದು ಸಾನಿಯಾ ಹೇಳಿದ್ದಾರೆ. ಸಾನಿಯಾ ಅವರು ಮದುವೆಯಾದಾಗ ಮೀಡಿಯಾಗಳು ಸಿಕ್ಕಾ ಪತ್ತೆ ಹೈಪ್ ಕ್ರಿಯೇಟ್ ಮಾಡಿದ್ದವು ಹಾಗಾಗಿ ಸಾನಿಯಾ ಈ ರೀತಿ ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top