fbpx
ಮನೋರಂಜನೆ

ಒಂದೇ ಚಿತ್ರದಲ್ಲಿ ಶಿವಣ್ಣ ಮತ್ತು ಪುನೀತ್ ನಟನೆ: ವಿಶೇಷ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್.

ಒಂದೇ ಚಿತ್ರದಲ್ಲಿ ಶಿವಣ್ಣ ಮತ್ತು ಪುನೀತ್ ನಟನೆ: ವಿಶೇಷ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್.

 

 

ವರನಟ ರಾಜಕುಮಾರ್ ಅವರ ಪುತ್ರರಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆಯಾಗಿ ನಟಿಸಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿದೆ ಅದಕ್ಕೆ ಪೂರಕವಾಗಿ ಈ ವರ್ಷದ ಆರಂಭದಲ್ಲಿ ಶಿವಣ್ಣ ಮತ್ತು ಅಪ್ಪು ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು ಈಗ ಈ ಇಬ್ಬರು ತಾರೆಗಳು ಒಂದೇ ಚಿತ್ರದಲ್ಲಿ ನಟಿಸೋದು ಪಕ್ಕಾ ಆಗಿದೆ.

 

 

ಶನಿವಾರ ಫೇಸ್ ಬುಕ್ ನಲ್ಲಿ ಒಟ್ಟಿಗೆ ಲೈವ್ ಗೆ ಬಂದಿದ್ದ ಶಿವಣ್ಣ ಮತ್ತು ಅಪ್ಪು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದೆ ವೇಳೆ ತಾವಿಬ್ಬರು ಒಟ್ಟಿಗೆ ನಟಿಸುತ್ತಿದ್ದೇವೆ ಎಂದು ಶಿವಣ್ಣ ಹೇಳಿದರು “ಆ ಚಿತ್ರದ ಕಥೆಯನ್ನು ಶಿವಣ್ಣ ಅವರು ಒಪ್ಪಿಕೊಂಡಿದ್ದು, ಪುನೀತ್ ಅವರ ಒಪ್ಪಿಗೆಗಾಗಿ ಕಾಯುತ್ತಿದ್ದಾರಂತೆ. ಈ ಚಿತ್ರದ ವಿಶೇಷ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರೂ ಕೂಡ ಕಾಣಿಸಿಕೊಳ್ಳಲಿದ್ದಾರೇ ಎಂದು ಪುನೀತ್ ಇದೇ ವೇಳೆ ಹೇಳಿದರು. ಇನ್ನು ಚಿತ್ರವನ್ನು ಅವರ ಹೋಮ್ ಬ್ಯಾನರ್ ನಲ್ಲಿಯೇ ನಿರ್ಮಾಣ ಮಾಡುತ್ತಾರಂತೆ.

 

 

ಈ ಹಿಂದೆ ಸಾಹಸ ನಿರ್ದೇಶಕ ರವಿವರ್ಮ ಅವರ ನಿರ್ದೇಶನದಲ್ಲಿ ಶಿವಣ್ಣ ಮತ್ತು ಪುನೀತ್ ಅವರು ನಟಿಸುತ್ತಾರೆ ಮತ್ತು ಆ ಚಿತ್ರಕ್ಕೆ ಜಯಣ್ಣ ಭೋಗೇಂದ್ರ ಬಂಡವಾಳ ಹೂಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಶಿವಣ್ಣ ಆಗಲಿ ಅಪ್ಪು ಆಗಲಿ ಯಾವುದೇ ಹೇಳಿಕೆಯನ್ನ ನೀಡಿಲ್ಲ. ಅಣ್ಣಾವ್ರ ಮಕ್ಕಳು ಒಂದೇ ಚಿತ್ರದಲ್ಲಿ ಅಭಿನಯಿಸಬೇಕು ಎಂದು ಅಭಿಮಾನಿಗಳು ಹೇಳುತ್ತಲೇ ಬಂದಿದ್ದರು ಆ ಆದರೆ ಪ್ರಯತ್ನವಂತೂ ಆಗಲಿಲ್ಲ. ಇದೀಗ ರಾಜ್ ಅವರ ಮೂವರೂ ಪುತ್ರರು ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top