ರಾಜಕೀಯ

ಪುತ್ರ ವ್ಯಾಮೋಹ ಬಿಡಲಾಗದೇ? ಸಿದ್ದರಾಮಯ್ಯರು ಇಂತಹ ನಿರ್ಧಾರ ಯಾಕೆ ತೆಗೆದುಕೊಂಡರು?

ಪುತ್ರ ವ್ಯಾಮೋಹ ಬಿಡಲಾಗದೇ?

ಸಿದ್ದರಾಮಯ್ಯರು ಇಂತಹ ನಿರ್ಧಾರ ಯಾಕೆ ತೆಗೆದುಕೊಂಡರು?

ಈ ಸಲ ವರುಣಾದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರ ಪುತ್ರ ಡಾ. ಯತೀಂದ್ರರು ಸ್ಪರ್ಧಿಸುವುದು ಖಚಿತವಾಗಿದೆ. ಮಗನಿಗೋಸ್ಕರ ವರುಣಾ ತೊರೆದು ಚಾಮುಂಡೇಶ್ವರಿ ಕೇತ್ರಕ್ಕೆ ಮರಳಿ ಹೊರಟಿದ್ದಾರೆ ಸಿದ್ದು.

 

 

ಸಿದ್ದುರ ಈ ಪುತ್ರ ವ್ಯಾಮೋಹದ ಕುರಿತು ಟೀಕಿಸಲು ಬಿಜೆಪಿ, ಜೆಡಿಎಸ್‍ಗೆ ಮುಖವೇ ಇಲ್ಲ! ರಾಜ್ಯ ಬಿಜೆಪಿಯ ಹಲವಾರು ನಾಯಕರ ಕುಡಿಗಳು ರಾಜಕೀಯದಲ್ಲಿವೆ. ಜೆಡಿಎಸ್‍ನಲ್ಲಿ ಒಂದೇ ಕುಟುಂಬದಲ್ಲಿ ಐವರು ಆಕಾಂಕ್ಷಿಗಳಿದ್ದಾರೆ!

ಆದರೆ ಸಮಾಜವಾದಿ ಹೋರಾಟದಿಂದ ಬಂದ ಸಿದ್ದರಾಮಯ್ಯರು ಈ ಪುತ್ರವ್ಯಾಮೋಹ ತೊರೆದು ಮೇಲ್ಪಂಕ್ತಿ ಹಾಕಬಹುದಿತ್ತು. ಇತ್ತೀಚೆಗಷ್ಟೇ ಕಾಂಗ್ರೆಸ್ ಸದಸ್ಯರಾಗಿರುವ ಯತೀಂದ್ರರಿಗೆ ಅವಕಾಶ ನೀಡುವುದು ಪಕ್ಷಪಾತ ಅಲ್ಲವೇ? ಈಗಾಗಲೇ ಹಲವು ಕಾಂಗ್ರೆಸ್ ಮುಖಂಡರ ಮಕ್ಕಳು ರಾಜಕೀಯ ಮಾಡುತ್ತಿದ್ದಾರೆ. ಅಧಿಕಾರವನ್ನು ಪಡೆದಿದ್ದಾರೆ. ಯತೀಂದ್ರ ಆ ಲಿಸ್ಟಿಗೆ ಸೇರುತ್ತಿದ್ದಾರೆ ಅಷ್ಟೇ ಎನ್ನೋಣವೇ?

 

 

ಜೆ.ಎಚ್.ಪಟೇಲರು ತಾವಿರುವವರೆಗೂ ತಮ್ಮ ಮಕಳಿಗೆ ಚುನಾವಣಾ ರಾಜಕಾರಣಕ್ಕೆ ಬರಲು ಅವಕಾಶ ನೀಡಿರಲಿಲ್ಲ. ಸಿದ್ದರಾಮಯ್ಯರು ಇಂತಹ ನಿರ್ಧಾರ ತೆಗೆದುಕೊಳ್ಳಬಹುದಿತ್ತಲ್ಲವೇ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top