ಹೆಚ್ಚಿನ

ಇದು ಬೆತ್ತಲೆ ಹೋಟೆಲ್.. ಇಲ್ಲಿ ಎಲ್ಲವು ಖುಲಂ ಖುಲ್ಲಾ

ಇದು ಬೆತ್ತಲೆ ಹೋಟೆಲ್.. ಇಲ್ಲಿ ಎಲ್ಲವು ಖುಲಂ ಖುಲ್ಲಾ

 

ಕಾಮವನ್ನು ಕಂಟ್ರೋಲ್ ಮಾಡಲು ಇಂತಹ ಹೋಟೆಲ್‍ಗಳು ಸಹಕಾರಿಯಂತೆ!

 

 

ಅಕ್ಷರಶಃ ಇದು ಬೆತ್ತಲೇ ಹೋಟೆಲ್. ಇಲ್ಲಿ ಬೆತ್ತಲೆಯಲ್ಲಿ ಕೂತು ಉಣ್ಣಬಹುದು. ಕುಡಿಯಬಹುದು. ಸ್ವಾಭಾವಿಕವಾಗಿರಲು ಇಂತಹ ಹೋಟೆಲ್ ಆರಂಭಿಸಲಾಗಿದೆಯಂತೆ. ನ್ಯಾಚುರಲ್ ಆಗಿರಬೇಕೆಂದು ಹೀಗೆ ಬೆತ್ತಲೆಯಾಗಿದ್ದರೆ ಹೇಗೆ? ಕತ್ತಲೆ ಮಾಡಬಹುದಲ್ವಾ?ಇಲ್ಲ ಹಾಗೆ ಮಾಡಿದರೆ ಬೆತ್ತಲೆ ಇರೋದು ಗೊತ್ತೇ ಆಗೋದಿಲ್ಲ! ಹುಟ್ಟು ಬೆತ್ತಲೆ, ಸಾವು ಬೆತ್ತಲೆ ಅಂತಿರುವಾಗ ಉಣ್ಣುವಾಗ ಏಕೆ ಬಟ್ಟೆ? ಎಂಬ ಪಾರಮಾರ್ಥಿಕ ಚಿಂತನೆ ಹೋಟೆಲ್ ಮಾಲೀಕನದ್ದಾಗಿರಬೇಕು.

 

ಪೂರ್ಣ ಬೆಳಕಿನಲ್ಲಿ ಬರಿಮೈಯ್ಯಲ್ಲಿ, ತಣ್ಣನೆಯ ವಾತಾವರಣದಲ್ಲಿ ಕೂತು ಉಂಡರೆ ಅದೇ ಚೆನ್ನಾ ಅನ್ನುತ್ತಾರೆ! 2016ರಲ್ಲಿ ಲಂಡನ್‍ನಲ್ಲಿ ಆರಂಭಗೊಂಡ ಸುದ್ದಿ ಕೇಳಿದ ಫ್ರಾನ್ಸಿಗರು ಇದೀಗ ಆ ದೇಶದಲ್ಲೂ ಇಂಥಾದ್ದೇ ಬೆತ್ತಲೆ ಹೋಟೆಲ್ ತೆಗೆದು ಗಿರಾಕಿಗಳಿಗೆ ಎದುರು ನೋಡುತ್ತಿದ್ದಾರೆ.

 

ಅಲ್ಲಾ ರೀ ಹೀಗೆಲ್ಲಾ ಮಾಡಿದರೆ…. ಕಾಮಕ್ಕೆ ಉತ್ತೇಜನ ದೊರೆಯುತ್ತದಲ್ಲವೇ? ಇಲ್ಲ… ಬೆತ್ತಲೆ ಇದ್ದ ಮಾತ್ರಕ್ಕೆ ಅದು ಕಾಮವಲ್ಲ.  ಕಾಮವನ್ನು ಕಂಟ್ರೋಲ್ ಮಾಡಲು ಇಂತಹ ಹೋಟೆಲ್‍ಗಳು ಸಹಕಾರಿಯಂತೆ. ಸುಂದರಿಯೊಬ್ಬಳು ಬೆತ್ತಲೆ ಉಣ್ಣುತ್ತಿದ್ದರೆ… ಆಕೆಯ ಎದುರಿಗೆ ಕುಳಿತ ಪುರುಷನ ಕಾಮಪ್ರಮಾಣ ತಕ್ಷಣವೇ ತಿಳಿದೀತು! ಕಾಮಣ್ಣರು ಇಂತಹ ಹೋಟೆಲ್‍ಗಳಲ್ಲಿ ಜೋಪಾನವಾಗಿರಬೇಕು. ಇನ್ನು ತಾನು ಸುಂದರಿ ಎಂದುಕೊಂಡ ಹೆಣ್ಣೆದುರು ‘ಏನೂ ಆಗಿಲ್ಲದವರಂತೆ’ ಯುವಕರು ಕೂತಿದ್ದರೆ ಆಕೆಯ ಸೌಂದರ್ಯಕ್ಕೆ ಶೂನ್ಯ ಅಂಕ ಬಂದೀತು!

 

ಮಹಿಳೆಯರಿಗೆ ಇಲ್ಲಿ ಡಿಸ್ಕೌಂಟ್  ಇಲ್ಲ ಎನ್ನುತ್ತಾರೆ ಮಾಲೀಕರು. ಮಾಣಿಗಳು, ಮ್ಯಾನೇಜರ್‍ಗಳಿಗೆ ವಸ್ತ್ರ ಸಂಹಿತೆ ಇಲ್ಲ.

 

 

ಬಟ್ಟೆಯೇ ಇಲ್ಲದ ಹೋಟೆಲ್‍ಗೆ ಬರುವ ಗಿರಾಕಿಗಳು ತಿಂದು-ಕುಡಿದು ಬಿಲ್ ತುಂಬದೇ ರೈಟ್ ಹೇಳಿದರೇ…ಮಾಲೀಕನ ಗತಿ ಏನು?

 

ಆತ ಬೀದಿಗೆ ಬಿದ್ದು ಬೆತ್ತಲಾಗುತ್ತಾನೆ ಬಿಡಿ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top