fbpx
ಸಮಾಚಾರ

ಸ್ವಾಮಿ ಮೋದಿಯವರೇ ನೀವು ನಿಜವಾಗಿಯೂ ಸಂತೋಷವಾಗಿದ್ದೀರಾ -ಪ್ರಕಾಶ್ ರೈ

ಪ್ರೀತಿಯ ಪ್ರಧಾನ ಮಂತ್ರಿಗಳೇ ನಿಮ್ಮ ಗೆಲುವಿಗೆ ಅಭಿನಂದನೆಗಳು ಆದರೆ ನೀವು ನಿಜವಾಗಿಯೂ ಸಂತೋಷವಾಗಿದ್ದೀರಾ ಹೀಗೆಂದು #JustAsking ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಪ್ರಕಾಶ್ ರೈ ಟ್ವೀಟ್ ಒಂದನ್ನು ಮಾಡಿದ್ದಾರೆ !

 

 

ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದಿದ್ದು ಮೋದಿ ಹಾಗು ಅವರ ಪಕ್ಷವನ್ನು ಯಾವಾಗಲೂ ತರಾಟೆಗೆ ತೆಗೆದುಕೊಳ್ಳುವ ರೈ ಮತ್ತೊಮ್ಮೆ ಅಂತಹದ್ದೇ ಬಿಸಿ ಚಾಟಿ ಬಿಸಿದ್ದಾರೆ .

 

 

ಟ್ವೀಟ್ ನ ಸಂದೇಶ ಈ ರೀತಿ ಇತ್ತು ..

150 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಅಭಿಲಾಷೆ ನಿಮ್ಮದಾಗಿತ್ತು ಆದರೆ ನಿಮ್ಮ ವಿಕಾಸ ಮಂತ್ರದಿಂದ ಬಹುಮತ ಗೆಲ್ಲುವ ವಿಶ್ವಾಸ ನಿಮ್ಮದಾಗಿತ್ತು ಆದರೆ ಏನಾಯಿತು ಆ ಭರವಸೆ ಒಮ್ಮೆ ಯೋಚನೆ ಮಾಡಿದ್ದೀರಾ ?

 

 

ಒಡೆದು ಮಾಡುವ ರಾಜಕಾರಣ ಎಂದು ಫಲಿಸುವುದಿಲ್ಲ
ದೇಶದಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳಿವೆ ಬರಿ ಪಾಕಿಸ್ತಾನ, ಧರ್ಮ, ಜಾತಿ, ದಬ್ಬಾಳಿಕೆ ನಡೆಸುವ ಗುಂಪುಗಳನ್ನು ಬೆಂಬಲಿಸುವುದು, ವೈಯಕ್ತಿಕ ಲಾಭ ಇದನ್ನು ಹೊರತು ಪಡಿಸಿ .
ಗ್ರಾಮೀಣ ಭಾರತದ ಸಮಸ್ಯೆಗಳ ಬಗ್ಗೆ ಎಂದಾದರೂ ಆಲೋಚನೆ ಮಾಡಿದ್ದೀರಾ ?

ರೈತರ ಸಮಸ್ಯೆಗಳಿಗೆ ಕೊನೆಯೇ ಇಲ್ಲವೇ ಮತ್ತೆ ಮತ್ತೆ ಕೇಳುವೆ ಏರು ಧನಿಯಲ್ಲಿ ಕೇಳುವೆ ನಿಮಗೆ ಕೇಳಿಸುತ್ತಿದೆಯೇ ? #JustAsking

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top