ಇತರೆ

ನಾಯಿ ಎತ್ತರಕ್ಕೆ ಕುಸಿದ ದನಗಳು ಇನ್ನು ಈ ಕಣ್ಣಲ್ಲಿ ಏನೇನು ನೋಡ್ಬೇಕೋ

ನಾಯಿ ಎತ್ತರಕ್ಕೆ ಕುಸಿದ ದನಗಳು.. ಇನ್ನು ಈ ಕಣ್ಣಲ್ಲಿ ಏನೇನು ನೋಡ್ಬೇಕೋ!!

 

ನೀವು ನಂಬಲೇಬೇಕಾದ ಸತ್ಯ!

 

‘ಶ್ವಾನದಂತೆ ಬದಲಾಯಿತೋ… ನಮ್ಮ ದನವು…ನಾಯಿಯಂತೆ ಗಿಡ್ಡದಾಯಿತೋ…’ ಎಂದು ಹಾಡಬೇಕಾದ ಸಮಯವಿದು. ಹಾಗೆಂದು ಇದು ದನಗಳಿಗೆ ದೊರೆತ ಸೌಭಾಗ್ಯವಲ್ಲ. ದೌರ್ಭಾಗ್ಯವೇ ಸರಿ.

 

 

ಮನುಷ್ಯ ತನ್ನ ತೆವಲಿಗಾಗಿ ಕುಂಡಗಳಲ್ಲೇ ಬೆಳೆಯಬಹುದಾದ ಮಾವು, ತೆಂಗಿನ ಮರಗಳನ್ನು ಸೃಷ್ಟಿಸತೊಡಗಿದ. ಫಲ ಬಂದರೂ ಇವು ಪ್ರಯೋಜನವಿಲ್ಲ. ಮರಕ್ಕೂ ಮನುಜರಿಗೂ ಉಪಯೋಗವಿಲ್ಲ. ಆದರೆ, ತನ್ನ ಶೋಕಿಗೆ ಇವು ಬೇಕು. ಇದೀಗ ಪ್ರಾಣಿಗಳ ಮೇಲೂ ವಿಶ್ವಾದ್ಯಂತ ಪ್ರಯೋಗಗಳು ಜರುಗಿವೆ.

 

 

 

ಹಾಲು ನೀಡುವ ಆಳೆತ್ತರದ ಗೋವುಗಳು ಈಗ ಶ್ವಾನಗಳ ಎತ್ತರಕ್ಕೆ ಕುಸಿದಿವೆ.  ಅಸಹಜ ಆಕಾರ ಮಾತ್ರವಲ್ಲದೆ ಅಲ್ಪ ಹಾಲಿನ ಇಳುವರಿ! ಇಂತಹ ಅನಗತ್ಯ ಪ್ರಯೋಗಗಳು ಬೇಕಿಲ್ಲ. ಆದರೆ ಮನುಷ್ಯನ ಮನೋ ವಿಕಾರಗಳು ಹೆಚ್ಚಿದಂತೆ ಇಂತಹ ಶ್ವಾನದ ಅಳತೆಯ ದನಗಳಿಗೂ ಮೌಲ್ಯ ಬಂದಿವೆ. ಇದಕ್ಕಾಗಿ ಈಗ ಜಾನುವಾರು ತಳಿಗಳನ್ನು ಸೃಷ್ಟಿಸಲಾಗುತ್ತಿದೆ.

 

 

ಅಮೆರಿಕದ ಟೆಕ್ಸಾಸ್ ಸಮೀಪ ಕುಬ್ಜ ದನಗಳಿಗೆ ವಿಶೇಷ ಕೊಟ್ಟಿಗೆಗಳು ಇವೆ. ಅಲ್ಲಿ ಇವುಗಳ ಸೃಷ್ಟಿ, ಪ್ರತಿ ಸೃಷ್ಟಿಗಳು ನಡಯುತ್ತಿವೆ. 36 ಇಂಚು ಎತ್ತರದ ಕೇವಲ 227 ಕೆ.ಜಿ. ತೂಗಬಲ್ಲ ದನಗಳು ಮಾತ್ರವೇ ಇಲ್ಲಿ ಲಭ್ಯ.  ಹೆಚ್ಚು ಕಮ್ಮಿ ಬೆಳೆದು ನಿಂತ ನಾಯಿ ಎತ್ತರದ ಈ ಹಸುಗಳನ್ನು ಕೊಳ್ಳಲು ಜನ ಮುಗಿಬಿದ್ದು ಬರುತ್ತಿದ್ದಾರಂತೆ.

 

 

ಕೊಳ್ಳುವರಿದ್ದಾರೆಂದು ಇಂತಹ ಅನೈಸರ್ಗಿಕ ದನಗಳ ಉತ್ಪಾದನೆ ನಡೆಯುತ್ತಿದೆ. ಮಾರುವವರು ಇರುವ ಕಾರಣ ಕೊಳ್ಳುಗರೂ ಇದ್ದಾರೆ. ಪ್ರಕೃತಿಗೆ ವಿರುದ್ಧದ ಬೊವೈನ್ ದಿನಗಳು ಅನಗತ್ಯ ಎಲ್ಲಿದೆ?

 

ವಿಪರ್ಯಾಸ: ಮನುಷ್ಯ ತಾನು ಎತ್ತರಕ್ಕೆ ಬೆಳೆಯಲು ಹಂಬಲಿಸುತ್ತಾನೆ. ಅದಕ್ಕಾಗಿ ಇಲ್ಲದ ಟಾನಿಕ್, ಕಸರತ್ತು ನಡೆಸುತ್ತಾನೆ. ಆದರೆ ಬೆಳೆದು ನಿಂತ ಪ್ರಾಣಿಗಳನ ಎತ್ತರವನ್ನು ಗಿಡ್ಡವಾಗಿಸಲು ಇಲ್ಲದ ಸಂಶೋಧನೆ ನಡೆಸುತ್ತಾನೆ. ಇದಕ್ಕಿಂತಲೂ ವಿಪರ್ಯಾಸ ಮತ್ತೊಂದಿಲ್ಲ!

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top