fbpx
ಮನೋರಂಜನೆ

ಮಿಲನದ ‘ ಪಾರ್ವತಿ ಮೆನನ್’ ಗೆ ಅವನು ಸರ್ಕಸ್ ಕೋತಿ ಅಂದಿದ್ಯಾಕೆ ?

ಪಾರ್ವತಿ ಸ್ತ್ರೀ ವಿರುದ್ಧದ ನಿಲುವನ್ನು ಸಿನೆಮಾ ಮತ್ತು ಕೆಲವು ದೊಡ್ಡ ದಕ್ಷಿಣ ಭಾರತದ ನಟರು ತಮ್ಮ ಚಿತ್ರಗಳಲ್ಲಿ ತೋರಿಸುವುದರ ವಿರುದ್ಧ ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವ್ಯಕ್ತಪಡಿಸಿದ್ದರು , ಪ್ರಖ್ಯಾತ ನಟರು ತಮ್ಮ ಚಿತ್ರಗಳಲ್ಲಿ ಪ್ರಚೋದಿಸುವ ಸ್ತ್ರೀ ದ್ವೇಷಿ ಸಂಭಾಷಣೆಗಳ ಮೂಲಕ ವೈಭವೀಕರಿಸುತ್ತಿರುವುದು ಕೆಟ್ಟ ಬೆಳವಣಿಗೆ ಎಂದು ಹೇಳಿದ್ದರು ಇಂತಹ ನಟರ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು .

 

 

ಪಾರ್ವತಿ ಮಾತಾಡಿದ್ದು ಮಲಯಾಳಂ ಸೂಪರ್ ಸ್ಟಾರ್ ಬಗ್ಗೆ !

 

 

ಮಲಯಾಳಂ ಸೂಪರ್ಸ್ಟಾರ್ ಮಮ್ಮುಟ್ಟಿ ಯವರ ಮಲಯಾಳಂ ಚಿತ್ರ ಕಸಬಾ ಕುರಿತು ತಮ್ಮ ಅಭಿಪ್ರಾಯ ಹೊರ ಹಾಕಿದ್ದ ಪಾರ್ವತಿ
“ದುರದೃಷ್ಟಕ್ಕೆ ಇತ್ತೀಚೆಗೆ ನಾನು ಚಿತ್ರವನ್ನು ನೋಡಿದೆ ಸಂಪೂರ್ಣವಾಗಿ ಸ್ತ್ರೀದ್ವೇಷದ ಸಂಭಾಷಣೆಗಳನ್ನು ಹೊಂದಿರುವ ಈ ಚಿತ್ರವನ್ನು ದೊಡ್ಡ ನಟರು ಸಮಾಜಕ್ಕೆ ಕೊಡುಗೆಯಾಗಿ ನೀಡಿರುವುದು ನಿಜಕ್ಕೂ ದುರಂತ , ಸಿನಿಮಾವು ಜೀವನ ಮತ್ತು ಸಮಾಜವನ್ನು ಪ್ರತಿಬಿಂಬಿಸುತ್ತದೆ ಎಂದು ಬಹಳಷ್ಟು ಮಂದಿ ಭಾವಿಸುತ್ತಾರೆ , ಆದ್ದರಿಂದ ಒಬ್ಬ ಸೂಪರ್ ಸ್ಟಾರ್ ಆಗಿರುವವರು ಬಾಯಿಗೆ ಬಂದ ಹಾಗೆ ಹೊಡೆಯುವ ಮಾದಕತೆ ಹಾಗು ಪ್ರಚೋದನಕಾರಿ ಡೈಲಾಗ್ ಗಳು ಅಭಿಮಾನಿಗಳಿಗೆ ಸರಿ ಎನಿಸಿದರೂ ಸಮಾಜಕ್ಕೆ ಸರಿಯಲ್ಲ” ಎಂದರು .

 

 

ಮಮ್ಮುಟ್ಟಿ ಫ್ಯಾನ್ಸ್ ಹಿಗ್ಗಾ ಮುಗ್ಗಾ ಟ್ರೊಲ್ ಮಾಡಿದ್ರು !

 

 

ಮಲಯಾಳಂ ಸೂಪರ್ಸ್ಟಾರ್ ಮಮ್ಮುಟ್ಟಿ ಯವರ ನೆನ್ನೆ ಮೊನ್ನೆ ಬಂದ ಒಬ್ಬ ಹೀರೋಯಿನ್ ಮಾತಡ್ತಾಳೆ ಅನ್ನೋ ವಿಷಯ ಇಟ್ಕೊಂಡು ಹಿಗ್ಗಾ ಮುಗ್ಗಾ ಆಕೆಗೆ ಫೇಸ್ ಬುಕ್ ಟ್ವಿಟ್ಟರ್ ಎಲ್ಲ ಕಡೆಯಿಂದ ಟ್ರೊಲ್ ಮಾಡೋಕೆ ಶುರು ಹಚ್ಕೊಂಡ್ರು .

ಆದರೆ ಸುಮಾರು ಜನ ಹೆಂಗಸರು ಪಾರ್ವತಿ ಪರ ನಿಂತ್ಕೊಂಡ್ರು

 

ಕಸಬಾ ಡೈರೆಕ್ಟರ್ ಜೂಡ್ ಪಾರ್ವತೀ ಅವ್ರಿಗೆ ಕೋತಿ ಅಂದಿದ್ದು ಹೀಗೆ ..

 

 

“ಒಂದು ಕೋತಿ ಕಾಡಿಂದ ಬಂದು ಸರ್ಕಸ್ ಗೆ ಸೇರಿ ರಿಂಗ್ ಮಾಸ್ಟರ್ ಹೇಳಿದ ಹಾಗೆಲ್ಲ ಕೇಳಿತು , ಕೋತಿ ಓಡಿತು , ಜಿಗಿಯಿತು , ರಿಂಗ್ ಮಾಸ್ಟರ್ ಹೇಳಿದ ಹಾಗೆಲ್ಲ ಮಾಡಿತು ಸಡನ್ ಆಗಿ ಕೋತಿ ಫೇಮಸ್ ಆಗಿದ್ದೆ ತಡ ರಿಂಗ್ ಮಾಸ್ಟರ್ ವಿರುದ್ಧನೇ ಮಾತಾಡಲು ಶುರು ಮಾಡಿತು , ರಿಂಗ್ ಮಾಸ್ಟರ್ ಅನ್ಯಾಯ ಮಾಡಿದರು ಎಂದು ಬೊಬ್ಬೆ ಹೊಡೆಯಿತು , ಕೋತಿ ಸರ್ಕಸ್ ಅನ್ನು ಬಿಟ್ಟು ಮತ್ತೆ ಕಾಡಿಗೆ ಮರಳಬಹುದು ಆದರೆ ಮತ್ತೆ ಕೋತಿಯನ್ನು ಯಾರು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ .”

 

 

ಇದಕ್ಕೆ ಪಾರ್ವತಿ ಪ್ರತಿಕ್ರಿಯೆ ಹೀಗಿತ್ತು !

 

 

ಆಕೆಯ ವಿರುದ್ಧ ಕೆಟ್ಟ ಕೆಟ್ಟ ಭಾಷೆಯಲ್ಲಿ ಪದ ಪ್ರಯೋಗ ಮಾಡುತ್ತಿರುವವರ ಬಗ್ಗೆ ತಲೆ ಕೆಡಿಸಿಕೊಳ್ಳದ ಪಾರ್ವತಿ ” ಎಲ್ಲ ಸರ್ಕಸ್ ಮಾಸ್ಟರ್ ಗಳೇ ತೊಲಗಿ ಹೋಗಿ ” ಎಂದು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top