fbpx
ಕಿರುತೆರೆ

ಸ್ಯಾಂಡಲ್’ವುಡ್ ಸ್ಟಾರ್’ಗಳ ರೆಕಾರ್ಡ್’ಗಳನ್ನೆಲ್ಲಾ ಪೀಸ್ ಪೀಸ್ ಮಾಡಿದ ಚಂದನ್ ಶೆಟ್ಟಿಯ ‘ಟಕಿಲ.’

ಸ್ಯಾಂಡಲ್’ವುಡ್ ಸ್ಟಾರ್’ಗಳ ರೆಕಾರ್ಡ್’ಗಳನ್ನೆಲ್ಲಾ ಪೀಸ್ ಪೀಸ್ ಮಾಡಿದ ಚಂದನ್ ಶೆಟ್ಟಿಯ ‘ಟಕಿಲ.’

 

 

 

 

ಇಂಟರ್’ನೆಟ್ಟಿನ ಪ್ರತಿ ಗಲ್ಲಿಯ ಮೂಲೆ ಮೂಲೆಗಳಲ್ಲಿ ಸದ್ಯ ಕೇಳುತ್ತಿರುವ ಹಾಡೆಂದರೆ ಅದು, ‘ಎಲ್ಲಾರು ಸೇರಿ ಇಂದು ಎಣ್ಣೆ ಹಾಕುವ’ ಅಂತಾ ಸ್ಟಾರ್ಟ್ ಆಗೋ ಟಕಿಲಾ ಸಾಂಗ್. ಇದರ ಸೃಷ್ಟಿಕರ್ತ ಕನ್ನಡ ರ‍್ಯಾಪ್ ಕಿಂಗ್ ಚಂದನ್ ಶೆಟ್ಟಿ.. ಪಬ್ಬು,ಪಾರ್ಟಿಗಳಲ್ಲಿ ಹಿಂದಿ,ಇಂಗ್ಲಿಷ್ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಿದ್ದ ಕಾಲದಲ್ಲಿ ‘ಮೂರೇ ಮೂರು ಪೆಗ್ಗಿಗೆ ತಲೆ ಗಿರಗಿರ ಅಂತಿದೆ’ ಎಂಬ ಕನ್ನಡ ಸಾಂಗ್ ಅನ್ನು ಟ್ರೆಂಡ್ ಮಾಡಿಸಿದ್ದ ಚಂದನ್ ಈಗ ‘ಟಕೀಲ’ ಹಾಡಿನ ಮೂಲಕ ಮತ್ತೆ ಕಿಕ್ ಕೊಟ್ಟಿದ್ದಾರೆ.

 

 

 

‘ಟಕಿಲ’ ಹಾಡು ಈಗ ಯೂಟ್ಯೂಬ್ ನಲ್ಲಿ ನಿರೀಕ್ಷೆಗೂ ಮೀರಿ ದೊಡ್ಡ ಮಟ್ಟದಲ್ಲಿ ರೆಸ್ಪಾನ್ಸ್ ಪಡೆದಿದೆ. ಬಿಗ್ ಬಾಸ್ ವೇದಿಕೆಯ ಮೇಲೆ ಕಿಚ್ಚ ಸುದೀಪ್ ಅವರ ಕೈಯಿಂದ ಲಾಂಚ್ ಆದ ಈ ಹಾಡು ರಿಲೀಸ್ ಆದ 17 ಗಂಟೆಯ ಒಳಗೆ ಒಂದು ಮಿಲಿಯನ್’ಗೂ ಹೆಚ್ಚು ಜನರು ವೀಕ್ಷಿಸಿದ್ದರು. ಈಗ ಸಾಂಗ್ ಬಿಡುಗಡೆಯಾದ 40 ಗಂಟೆಯ ಒಳಗೆ 21 ಲಕ್ಷಕ್ಕೂ ಅಧಿಕ ಮಂದಿ ಈ ಹಾಡನ್ನು ವೀಕ್ಷಿಸಿದ್ದು ಅತಿವೇಗವಾಗಿ ಒಂದು ಮತ್ತು ಎರಡು ಮಿಲಿಯನ್ ವೀವ್ಸ್ ಪಡೆದ ಕನ್ನಡದ ಸಾಂಗ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

 

 

ಕನ್ನಡ ಯಾವ ಸ್ಟಾರ್ ನಂತರ ಹಾಡುಗಳು ಬಿಡುಗಡೆಯಾದಾಗಲೂ ಇಷ್ಟು ವೇಗವಾಗಿ ವೀವ್ಸ್ ಬಂದಿರಲಿಲ್ಲ..ಬಿಡುಗಡೆಗೊಂಡ 24 ಗಂಟೆಯಲ್ಲಿ 14 ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಣೆಗೊಳ್ಳುವ ಮೂಲಕ ಯಾವ ಸ್ಯಾಂಡಲ್ ವುಡ್ ಸ್ಟಾರ್ ನಟನ ಹಾಡುಗಳು ಮಾಡದ ಸಾಧನೆಯನ್ನು ಮಾಡಿದ ಕನ್ನಡದ ಮೊದಲ ಹಾಡು ಎಂಬ ಕೀರ್ತಿಗೆ ಪಾತ್ರವಾಗಿದೆ. ರಿಲೀಸ್ ಆದ 2 ದಿನದಲ್ಲಿ 2 ಮಿಲಿಯನ್ ವೀವ್ಸ್ ಪಡೆದುಕೊಳ್ಳಲು ಸ್ಟಾರ್ ನಟರ ಹಾಡುಗಳೇ ವಿಫಲಗುತ್ತಿರುವ ಈ ಸಮಯದಲ್ಲಿ ಟಕಿಲಾ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ ಎಂದರೆ ತಪ್ಪಾಗುವುದಿಲ್ಲ.

 

 

 

ಕನ್ನಡದ ಮಟ್ಟಿಗೆ ಇದೊಂದು ಹೊಸ ದಾಖಲೆ..ಹೊಸ ವರ್ಷಕ್ಕೆಂದೇ ರಿಲೀಸ್ ಮಾಡಿರುವ ಈ ಎಣ್ಣೆ ಸಾಂಗ್ ಈ ವರ್ಷ ಎಲ್ಲಾ ಪಾರ್ಟಿಗಳಿಗೆ ಹೇಳಿಮಾಡಿಸಿದಂತಿದೆ. ಈ ಹಿಂದೆ ಚಂದನ್ ಅವರ “ಹಾಳಾಗೊದೇ” “3 ಪೆಗ್”, ಹಾಗೂ “ಚಾಕ್ಲೇಟ್ ಗರ್ಲ್” ಸಾಂಗ್ ಗಳು ಹಿಟ್ ಆಗಿ ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದವು. ಅದರಂತೆ ಟಕೀಲ ಸಾಂಗ್ ಕೂಡ ರಿಚ್ ಆಗಿ ಮೂಡಿಬಂದಿದ್ದು, ಕೇಳಲು ಸಕತ್ ಕ್ಯಾಚಿಯಾಗಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ಚಂದನ್ ಅಲ್ಲಿಯೂ ಕೂಡ ಟ್ರೋಫಿಯನ್ನು ಗೆಲ್ಲುವ ಎಲ್ಲರ ನೆಚ್ಚಿನ ಸ್ಪರ್ಧಿಯಾಗಿದ್ದಾರೆ.

 

ಇನ್ನೂ ‘ಟಕಿಲ’ ಹಾಡನ್ನು ನೋಡಿಲ್ಲ ಅಂದ್ರೆ ಇಲ್ಲಿ ನೋಡಿ.👇👇👇

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top