ಮಾಹಿತಿ

ಸೂರ್ಯಪುತ್ರ- ಪುತ್ರಿಯರಿಗೆ ಕಾಫಿಲಾರಂ!

ಸೂರ್ಯಪುತ್ರ- ಪುತ್ರಿಯರಿಗೆ ಕಾಫಿಲಾರಂ!

 

 

ಈ ಚಳಿಗಾಲದಲ್ಲಿ ಬೆಡ್ ಕಾಫಿಯಿಂದಲೇ ಬೆಳಕು ಕಾಣುವ ಮಂದಿಗೆ ಕೊರತೆಯಿಲ್ಲ. ದಿನ ನಿತ್ಯ ಹಾಸಿಗೆ ಮೇಲೆ ಬಿದ್ದುಕೊಂಡೇ ಕಾಫಿ ಕೇಳಿದರೆ ಎಂಥಾ ಪತಿವ್ರತೆಯಾದರೂ ಕೊಡುವುದಿಲ್ಲ. ತ್ರಿಪುರ ಸುಂದರಿಯೇ ಆಗಿದ್ದರೂ ಪತಿಯಾದವನು ನಿತ್ಯವೂ ಕಾಫಿ ಕೊಟ್ಟು ಸೇವೆ ಮಾಡುವುದೂ ಇಲ್ಲ! ಅದು ಸಾಧ್ಯವೂ ಅಲ್ಲ.

 

 

ಕಾಫಿ ಕುಡಿದು ಮೇಲೇಳುವ ಜನರಿಗೆಂದೇ ಕಾಫಿ ಅಲಾರಂ ಬಂದಿದೆ. ನಿಶ್ಚಿತ ಸಮಯಕ್ಕೆ ಕಾಫಿ ಮಾಡಿ, ಅಲಾರಂ ಸದ್ದು ಮಾಡಲಿದೆ. ಘಮ ಕಾಫಿ ಹೀರಿ ನಿದ್ದೆಗೆ ಗುಡ್ ಬೈ ಹೇಳಬಹುದು. ಅಥವಾ ಕಾಫಿ ಹೀರಿ ಮತ್ತೊಮ್ಮೆ ಹಾಸಿಗೆಯಲ್ಲಿಯೇ ಬಿದ್ದು ಹೊರಳಾಡಬಹುದು.

 

 

 

 

ಬರಿಸ್ಯುಯರ್ ಅಲಾರಂ ಕ್ಲಾಕ್ ಹೆಸರಿನ ಈ ಉಪಕರಣದಲ್ಲಿ ಕಾಫಿ ಪುಡಿ, ಸಕ್ಕರೆ, ನೀರು, ಪುಟ್ಟ ಲೋಟದಲ್ಲಿ ಹಾಲು ಇವೆಲ್ಲ ರಾತ್ರಿ ಮಲಗುವ ಮುನ್ನವೇ ಇರಿಸಿ, ಅಲಾರಂ ಫಿಕ್ಸ್ ಮಾಡಿದರೆ ಸಾಕು. ಉಳಿದಿದ್ದು ಈ ಎಲೆಕ್ಟ್ರಾನಿಕ್ ಉಪಕರಣವೇ ಮಾಡಿಕೊಡಲಿದೆ.

ಚಹಾ ಪ್ರಿಯರು ಇದನ್ನು ಬಳಸಲು ಅಡ್ಡಿಯಿಲ್ಲ. ಕಾಫಿ ಬೀಜದ ಬದಲು ಚಹಾಪುಡಿ ಇರಿಸಿದರೆ ಸಾಕು. ಸದ್ಯಕ್ಕೆ ಲಂಡನ್‍ನಲ್ಲಿ ಲಭ್ಯ. ಬೆಲೆ 250 ಪೌಂಡ್‍ಗಳು. ಕಾಫಿ ಕೊಟ್ಟು ಮೇಲೆಬ್ಬಿಸುವ ಈ ಅಲಾರಂನ್ನು ಕಾಫಿಲಾರಂ ಎಂದರೆ ತಪ್ಪಾಗದು.

 

 

 

 

ಕೋಳಿ ಕೂಗಿದ್ರೆ ಅಥವಾ ಕಾಫಿ ಕುಡಿದ್ರೆ ಮಾತ್ರ ಬೆಳಕಾಗೋಲ್ಲ. ಆದರೆ ಕೆಲವರಿಗೆ ಇವಿದ್ದರೆ ಮಾತ್ರನೇ ಬೆಳಕು ಹರಿದಿದ್ದು ತಿಳಿದೀತು! ಹೀಗಾಗಿ `ಕಾಫಿಲಾರಂ’ಗಳು ಇರಲೇ ಬೇಕು ಅಲ್ವಾ?!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top