fbpx
ಕನ್ನಡ

ಕನ್ನಡಿಗರಿಗೆ ಅವಾಚ್ಯ ಶಬ್ದಗಳಿಂದ ಬೈದ TV5..!

ಕನ್ನಡಿಗರಿಗೆ ಅವಾಚ್ಯ ಶಬ್ದಗಳಿಂದ ಬೈದ TV5..!

 

 

ಕರ್ನಾಟಕದಲ್ಲಿ ಕನ್ನಡಕ್ಕೆ ಕನ್ನಡಿಗರಿಗೆ ಬೆಲೆಯೇ ಇಲ್ವಾ? ಈ ಪ್ರಶ್ನೆ ಉದ್ಭವಿಸಲು ಇತ್ತೀಚಿಗೆ ಕನ್ನಡಿಗರ ಮೇಲೆ ಆಗುತ್ತಿರುವ ಅವಮಾನ ಮತ್ತು ಕನ್ನಡದ ಎಂದರೆ ನಿರ್ಲಕ್ಷ ತೋರುವ ಪರದೇಸಿ ಪರಬಾಷಿಕರೇ ಕಾರಣ..ಇಂತಹುದೇ ಮತ್ತೊಂದು ಘಟನೆ ಮೂನ್ ನಡೆದಿದೆ. ಆಂಧ್ರ ಮೂಲದ TV5 ಎಂಬ ಕನ್ನಡ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುವಂತಹ ಒಬ್ಬ ವ್ಯಕ್ತಿ ಆ ಚಾನೆಲ್’ಗೆ ಕರೆಮಾಡಿದ ರಘು ಎಂಬ ಕನ್ನಡಿಗನಿಗೆ ಅವಾಚ್ಯ ಶಬ್ದ ಬಳಕೆ ಮಾಡಿ ನಿಂದಿಸಿದ್ದಾನೆ.

 

 

TV5 ಕನ್ನಡ ಚಾನೆಲ್’ನಲ್ಲಿ ಸತತ ಗಂಟೆಗಳ ಕಾಲ ಯಾವುದೋ ತೆಲುಗು ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮವನ್ನ ಪ್ರಸಾರ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಿ “ನೀವು ಕರ್ನಾಟಕದಲ್ಲಿದ್ದುಕೊಂಡು ತೆಲುಗು ಚಿತ್ರದ ಪ್ರೊಮೋಷನ್ ಮಾಡ್ತೀರಾ ಕನ್ನಡ ಸಿನಿಮಾ ಪ್ರಚಾರ ಮಾಡಕ್ಕಾಗಲ್ವಾ” ಎಂದು ಕರೆಮಾಡಿ ಕೇಳಿದ್ದಕ್ಕೆ ಕರೆ ಮಾಡಿದ ಕನ್ನಡಿಗನಿಗೆ “ನಾವು ಆ ಚಿತ್ರದ ಆಡಿಯೋವನ್ನು 80 ಲಕ್ಷ ಕೊಟ್ಟು ಖರೀದಿ ಮಾಡಿದ್ದೇವೆ, ನೀವು ಎಲ್ಲಾ ಕನ್ನಡಿಗರು ಸೇರಿ ಆ ದುಡ್ಡನ್ನ ಕೊಟ್ಬಿಡಿ ಪ್ರಸಾರ ಮಾಡೋಲ್ಲ” ಎಂದು ಹೇಳಿದ್ದಲ್ಲದೇ ತೀರಾ ಕೆಲ ಮಟ್ಟದ ಪದಗಳ ಬಳಕೆ ಮಾಡಿ ನಿಂದಿಸಿದ್ದಾನೆ.

 

 

ಇದರಿಂದ ನಮ್ಮ ಸ್ವಾಭಿಮಾನಕ್ಕೆ ದಕ್ಕೆ ಬರುತ್ತದೆ ಎಂದು TV5 ಚಾನೆಲ್ ವಿರುದ್ಧ ಕೆಲ ಕನ್ನಡಿಗರು ಪ್ರತಿಭಟನೆ ಮಾಡಿದ್ದರು. ನಂತರ ಈ ಪ್ರಕರಣ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದು TV5 ಚಾನೆಲ್ ಕನ್ನಡಿಗರಲ್ಲಿ ಕ್ಷಮೆಯಾಚಿಸಿ ಇನ್ನು ಮುಂದೆ ಬೇರೆ ಭಾಷೆಗಳ ಸಿನಿಮಾ ಪ್ರೊಮೋಷನ್ ಮಾಡೋದಿಲ್ಲ ಎಂದು ಹೇಳಿತ್ತು. ಪೋಲೀಸರ ಮುಂದೆ ಕನ್ನಡ ಬೇರೆ ಭಾಷೆಗಳ ಪ್ರಚಾರ ಮಾಡೋಲ್ಲ ಎಂದು ಹೇಳಿಕೆಯನ್ನು ಕೊಟ್ಟು ಈಗ ನಾಚಿಕೆಯಿಲ್ಲದೆ ಮತ್ತೆ ಪರಭಾಷಾ ಚಿತ್ರಗಳ ಪ್ರೊಮೋಷನ್ ಮಾಡುತ್ತಿರುವ ಪರಭಾಷಾ ವ್ಯಾಮೋಹಿ ಚಾನೆಲ್ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

TV5 ಅಧಿಕಾರಿಯು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ಆಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗಿದೆ. ನೀವು ಒಮ್ಮೆ ಕೇಳಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top