fbpx
ಕಿರುತೆರೆ

“ಚಂದನ್ ಕೀಳು ಮಟ್ಟದಲ್ಲೇ ಇರ್ತಾನೆ, ಅವ್ನು ಯಾವತ್ತೂ ಉದ್ದಾರ ಆಗಲ್ಲ” ಎಂದು ನಾಲಿಗೆ ಹರಿದು ಬಿಟ್ಟ ಮಹಾ ಡವ್’ರಾಣಿ ಅನುಪಮಾ.

“ಚಂದನ್ ಕೀಳು ಮಟ್ಟದಲ್ಲೇ ಇರ್ತಾನೆ, ಅವ್ನು ಯಾವತ್ತೂ ಉದ್ದಾರ ಆಗಲ್ಲ” ಎಂದು ನಾಲಿಗೆ ಹರಿದು ಬಿಟ್ಟ ಮಹಾ ಡವ್’ರಾಣಿ ಅನುಪಮಾ.

 

 

ಬಿಗ್ ಬಾಸ್ ಮನೆಯ ಡವ್ ರಾಣಿ, ಕಿರಿಕಿರಿ, ಕುತಂತ್ರಿ, ಡ್ರಾಮಾ ಕ್ವೀನ್ ಎಂದು ಕುಖ್ಯಾತಿ ಪಡೆದಿರುವ ಅನುಪಮಾ ಗೌಡ ಸಹ ಸ್ಪರ್ಧಿ ಚಂದನ್ ಶೆಟ್ಟಿಯ ಮೇಲೆ ತನ್ನ ಎಲುಬಿಲ್ಲದ ನಾಲಿಗೆಯನ್ನು ಹರಿದುಬಿಟ್ಟಿದ್ದಾಳೆ. ಮೊನ್ನೆ ಟಾಸ್ಕ್ ವಿಚಾರವಾಗಿ ಚಂದನ್ ಜೊತೆ ಕಿತ್ತಾಡಿಕೊಂಡ ಅನುಪಮಾ ಬಿಗ್ ಬಾಸ್ ಪ್ರಾರಂಭವಾದಾಗಿನಿಂದಲೂ ಚಂದನ್ ರನ್ನೇ ಟಾರ್ಗೆಟ್ ಮಾಡುತ್ತಿದ್ದಾಳೆ,ಅದು ಎಲ್ಲಾ ವೀಕ್ಷಕರಿಗೂ ಅನಿಸುತ್ತಿದೆ ತನ್ನನ್ನು ತಾನು ಸ್ಟ್ರಾಂಗ್ ಕಂಟೆಸ್ಟೆಂಟ್ ಎಂದು ತಿಳಿದುಕೊಂಡಿರುವ ಈಕೆಯ ಬಳಿ ಒಬ್ಬರಿಗೊಂದು ನ್ಯಾಯ ಮತ್ತೊಬ್ಬರಿಗೆ ಮತ್ತೊಂದು ನ್ಯಾಯ.. ಅವಳು ಏನೇ ಮಾಡಿದರೂ ಸರಿ ಅಂತೇ ಅದೇ ಕೆಲಸವನ್ನ ಮಾಡಿದರೆ ಚಂದನ್ ಮಾಡಿದರೆ ತಪ್ಪಂತೆ.

 

 

ಕುಡಿಯುವ ಹಾಲನ್ನು ಕದ್ದು ಬಚ್ಚಿಡುವಾಗ, ಕದ್ದು ಚಾಕಲೇಟ್ ತಿನ್ನುವಾಗ ಸರಿಯೋ ತಪ್ಪೋ ಅಂತ ಯೋಚನೆ ಮಾಡದೇ ಬಚ್ಚಿಟ್ಟು ಅದನ್ನು ಸಮರ್ಥಿಸಿಕೊಂಡ ಅನುಪಮಾ ಈಗ ಚಂದನ್ ವಿಚಾರಕ್ಕೆ ವಿಚಾರಕ್ಕೆ ಉರ್ಕೊಳ್ತಿದ್ದಾರೆ.. ಚಂದನ್ ವಿರುದ್ಧ ಇತರ ಸ್ಪರ್ಧಿಗಳಲ್ಲಿ ಪಿತೂರಿ ನಡೆಸುತ್ತಿದ್ದಾಳೆ. ಚಂದನ್ ಹಾಗೆ, ಚಂದನ್ ಹೀಗೆ, ಅವನು ಸ್ಟೇಟರ್ಜಿ ಮಾಡ್ಕೊಂಡು ಆಡ್ತಿದ್ದಾನೆ, ನಾಟಕ ಮಾಡ್ತಿದ್ದಾನೆ ಎಂದು ಇತರ ಸ್ಪರ್ಧಿಗಳನ್ನು ಎತ್ತಿಕಟ್ಟುವ ನಿಜವಾದ ಕುತಂತ್ರಿ ಅನುಪಮಾ ತನ್ನನ್ನು ತಾನು ಮನೆಯ ಯಜಮಾನಿ ಎಂದು ತಿಳಿದುಕೊಂಡಿದ್ದಾರೆ.

 

 

ಮೊನ್ನೆಯೂ ಕೂಡ ಟಾಸ್ಕ್ ಮಾಡುವಾಗ ಟೊಮೋಟೊ ಹಣ್ಣನ್ನು ಬೇಕು ಎಂತಲೇ ಹೊಡಿತಿದ್ದೀಯಾ ಎಂದು ಗಂಟಲು ಹರಿದು ಹೋಗುವ ಹಾಗೆ ಕಿರುಚಾಡಿದ್ದ ಅನುಪಮಾ ನೆನ್ನೆ ಕಿಚನ್’ನಲ್ಲಿ ಕೃಷಿಯವರ ಜೊತೆ ಮಾತನಾಡುತ್ತಿದ್ದಾಗ “ಸೊ ಕಾಲ್ಡ್ ಚಂದನ್ ಶೆಟ್ಟಿ ಕೆಟ್ಟ ಮನಸ್ಥಿತಿಯವನು ಅವನು ಕೀಳು ಮಟ್ಟದಲ್ಲೇ ಇರುತ್ತಾನೆ ಅವನು ಯಾವತ್ತೂ ಬೆಳಿಯಲ್ಲ, ಮುಂದೆ ಬರೋದಿಲ್ಲ, ಅವನು ಯಾವತ್ತೂ ಉದ್ದಾರ ಆಗೋಲ್ಲ. ನಾನು ಮನಸ್ಸು ಮಾಡುದ್ರೆ ಅವನು ಯೋಚನೆಯೇ ಮಾಡದ ರೀತಿಯಲ್ಲಿ ಕೊಡ್ತೀನಿ” ಅಂತ ತನ್ನ ನಾಲಿಗೆಯನ್ನ ಹರಿದು ಬಿಟ್ಟಿದ್ದಾಳೆ.

 

 

ಚಂದನ್ ಮಾಡಿರೋ ಸಾಧನೆಯಲ್ಲಿ ಕಾಲು ಭಾಗದಷ್ಟು ಸಾಧನೆಯನ್ನು ಮಾಡದಿರುವ ಸೋ ಕಾಲ್ಡ್ ಕುತಂತ್ರಿ ಹೆಣ್ಣು ಈ ರೀತಿ ಹೇಳಿರುವುದು ನಿಜಕ್ಕೂ ಹಾಸ್ಯಾಸ್ಪದ. ಒಂದೇ ಒಂದು ಕಿತ್ತೊಗಿರೊ ಧಾರಾವಾಹಿ ಮಾಡಿದ ಮಾತ್ರಕ್ಕೆ ಅದೇ ದೊಡ್ಡ ಸಾಧನೆಯೆಂದು ಸೂಪರ್ ಸ್ಟಾರ್ ರೀತಿಯಲ್ಲಿ ವರ್ತಿಸೋ ಈ ಡ್ರಾಮಾ ನಟಿಗೆ ಸೋಷಿಯಲ್ ಮೀಡಿಯಾಗಳಲ್ಲಿ ವೀಕ್ಷಕರು ತರಾಟೆಗೆ ತೆಗೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top