fbpx
ಮನೋರಂಜನೆ

ಸೆಕ್ಸ್ ದಂಧೆಯಲ್ಲಿ ಸಾಧು ಕೋಕಿಲಾ ಶಾಮೀಲು?

ಇದು ಎಂಥವರೂ ಒಂದರೆ ಕ್ಷಣ ಗಾಬರಿ ಬೀಳುವಂಥಾ ಶಾಕಿಂಗ್ ನ್ಯೂಸ್. ಬಹುಶಃ ಮೈಸೂರಿನ ದಿಕ್ಕಿನಿಂದ ಕೇಳಿ ಬಂದಿರೋ ಅಮಾಯಕ ಹೆಣ್ಣುಮಗಳೊಬ್ಬಳ ಆರ್ತನಾದ ಕೇವಲ ಮಸಾಜ್ ಸೆಂಟರ್ ಒಂದರ ಸೆಕ್ಸ್ ದಂಧೆಯ ಸುತ್ತಾ ಗಿರಕಿ ಹೊಡೆದಿದ್ದರೆ ಅದು ಅಲ್ಲಿಯೇ ಅಂತರ್ಧಾನ ಹೊಂದಿ ಹೋಗುತ್ತಿತ್ತೇನೋ. ಆದರೆ ಬ್ಯೂಟಿಷಿಯನ್ ಕೆಲಸ ಮಾಡಲು ಹೋಗಿ ಕಾಮ ಕೂಪಕ್ಕೆ ಬಿದ್ದ ಆ ಹೆಣ್ಣುಮಗಳು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದವರ ಹೆಸರು ಹೇಳಿದ್ದಾಳಲ್ಲ? ಅದರಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಕಮೇಡಿಯನ್ ಕಂ ಸಂಗೀತ ನಿರ್ದೇಶಕ ಸಾಧು ಕೋಕಿಲಾ ಮತ್ತು ರಂಗಭೂಮಿ, ಚಲನಚಿತ್ರ ನಟ ಮಂಡ್ಯ ರಮೇಶ್ ಹೆಸರುಗಳೂ ಸೇರಿಕೊಂಡಿವೆ!

 

 

ಹೆಸರಿಗಷ್ಟೇ ಮಸಾಜು!

ಮೈಸೂರಿನ ಬೋಗಾದಿ ಸರ್ಕಲ್ಲಿನಲ್ಲಿ ಮಸಾಜ್ ಪಾರ್ಲರ್ ಎಂಬ ಬೋರ್ಡು ಹಾಕಿಕೊಂಡಿರೋ ಅಡ್ಡೆಯಿಂದ ಅದು ಹೇಗೋ ತಪ್ಪಿಸಿಕೊಂಡು ಹೊರ ಬಂದಿರುವಾಕೆ ಪಾಂಡವಪುರ ಮೂಲದ ಹುಡುಗಿ. ಚಿಕ್ಕ ಪ್ರಾಯದಲ್ಲೇ ಮದುವೆಯಾಗಿ ಗಂಡನ ಕಾಟ ತಡೆಯಲಾರದೆ ಅದೂ ಇದು ಕೆಲಸ ಮಾಡಿಕೊಂಡಿದ್ದ ಆಕೆ ಕಳೆದ ತಿಂಗಳು ಈ ಕಾಮ ಕೂಪಕ್ಕೆ ಬಂದು ಬಿದ್ದಿದ್ದಳಂತೆ. ಅದು ಹೇಗೋ ಇತ್ತೀಚೆಗೆ ಗೆಳತಿಯ ಸಹಾಯದಿಂದ ಅಲ್ಲಿಂದ ತಪ್ಪಿಸಿಕೊಂಡಿದ್ದ ಆಕೆ ತನಗಾದ ಭೀಕರ ದೌರ್ಜನ್ಯಗಳ ಬಗ್ಗೆ ಮೈಸೂರಿನ ಖ್ಯಾತ ಸಮಾಜಸೇವಾ ಸಂಸ್ಥೆಯಾದ ಒಡನಾಡಿಗೆ ದೂರು ನೀಡಿದ್ದಳು. ಆ ದೂರಿನಲ್ಲಿ ಆಕೆ ದಾಖಲಿಸಿರೋ ವಿಚಾರಗಳು ಮೈಸೂರಿನಲ್ಲಿ ಪ್ರತಿಷ್ಠಿತರ ಸೋಗಿನಲ್ಲಿರೋ ರಾಜೇಶ್ ಮತ್ತು ಇಂದ್ರಾ ದಂಪತಿಗಳ ಸೆಕ್ಸ್ ದಂಧೆಯ ಜೊತೆಗೇ ಸಾಧು ಕೋಕಿಲಾ ಮತ್ತು ಮಂಡ್ಯಾ ರಮೇಶ್ ಅವರುಗಳ ಅಸಲಿ ಮುಖವನ್ನೂ ಅನಾವರಣಗೊಳಿಸಿದೆ.

 

 

ಇಂದ್ರಾ ದಂಧೆ!

ಗಂಡನ ಮನೆಯ ಕ್ವಾಟಲೆ ತಾಳಲಾರದೆ ಅಜ್ಜಿಯೊಂದಿಗೆ ಬದುಕುತ್ತಾ ಬ್ಯೂಟಿಷಿಯನ್ ವಿಭಾಗದಲ್ಲಿ ಒಂದಷ್ಟು ಪಳಗಿಕೊಂಡಿದ್ದಾಕೆ ಈ ನೊಂದ ಹುಡುಗಿ. ಆದರೆ ಆಸರೆಗೆ ಅಂತಿದ್ದ ಅಜ್ಜಿಯೂ ಮರಣ ಹೊಂದಿದ ಬಳಿಕ ನಿರಾಶ್ರಿತೆಯಾಗಿದ್ದ ಈಕೆಯನ್ನು ಹೇಗೋ ನಂಬರು ಪಡೆದು ಸಂಪರ್ಕಿಸಿದಾಕೆ ಮೈಸೂರಿನ ದಂಧಾ ಕೇಂದ್ರದ ಒಡತಿ ಇಂದ್ರಾ. ತನ್ನ ಮಸಾಜ್ ಸೆಂಟರಲ್ಲಿ ಬ್ಯೂಟಿಷಿಯನ್ ಕೆಲಸದ ಆಸೆ ತೋರಿಸಿದ ಇಂದ್ರಾ ಕಳೆದ ತಿಂಗಳ ೫ನೇ ತಾರೀಕಿನಂದು ಆಕೆಯನ್ನು ಮೈಸೂರಿಗೆ ಕರೆಸಿಕೊಂಡಿದ್ದಳು. ಆವತ್ತು ಮೈಸೂರ್ ಬಸ್ ಸ್ಟಾಪಿಂದ ಆಕೆಯನ್ನು ಕರೆದುಕೊಂಡು ಹೋಗಿ ಬೋಗಾದಿ ಸರ್ಕಲ್ಲಿನ ದಂಧೆಯ ಕೇಂದ್ರಕ್ಕೆ ಕರೆದುಕೊಂಡು ಹೋದವನು ಇಂದ್ರಾಳ ಗಂಡ ರಾಜೇಶ.

ಕಾಮ ಕೂಪ!

ಈ ಹುಡುಗಿಯೇ ಹೇಳಿಕೊಂಡಿರೋ ಪ್ರಕಾರ ಅಲ್ಲಿಗೆ ಹೋದ ಕ್ಷಣದಿಂದ ನರಕ ದರ್ಶನವಾಗಿದೆ. ರಾಜೇಶ್ ಮತ್ತೆ ಇಂದ್ರಾ ಈ ಹುಡುಗಿಯನ್ನು ಯಾರ್‍ಯಾರೋ ಗಂಡಸರ ದೇಹಕ್ಕೆ ಮಸಾಜು ಮಾಡಲು ಬಿಟ್ಟಿದ್ದರು. ಅವರು ಲೈಂಗಿಕ ವಿಕೃತಿ ಶುರುವಿಟ್ಟಾಗ ಗಾಬರಿಯಾಗಿ ಇಂದ್ರಾ ಬಳಿ ಹೇಳಿದರೂ ಅವರಿಗೆ ಸಹಕರಿಸುವಂತೆ ಒತ್ತಾಯ ಮಾಡುತ್ತಿದ್ದಳು. ಹೀಗೆ ಅದೆಷ್ಟೋ ಗಂಡಸರು ಮಸಾಜ್ ನೆಪದಲ್ಲಿ ಈ ಹುಡುಗಿಯನ್ನು ಬಳಸಿಕೊಂಡಿದ್ದರಂತೆ. ಇಂಥಾ ಸವಿವರ ಮಾಹಿತಿಯನ್ನು ಒಡನಾಡಿ ಸಂಸ್ಥೆಗೆ ಬರೆದ ಪತ್ರದಲ್ಲಿ ತಿಳಿಸಿರೋ ಈ ಹುಡುಗಿ ಚಿತ್ರ ನಟರಾದ ಸಾಧು ಕೋಕಿಲಾ ಮತ್ತು ಮಂಡ್ಯಾ ರಮೇಶ್ ಕೂಡಾ ತನ್ನಿಂದ ಮಸಾಜ್ ಸೇವೆ(?) ಮಾಡಿಸಿಕೊಂಡಿದ್ದಾರೆ ಅನ್ನೋ ಮೂಲಕ ಭಯಾನಕ ಬಾಂಬು ಸಿಡಿಸಿದ್ದಾಳೆ. ಜೊತೆಗೆ ಆ ಕೇಂದ್ರದಲ್ಲಿ ಸ್ಪಾ ನಡೆಯುತ್ತಿರಲಿಲ್ಲ ಬದಲಾಗಿ ವೇಶ್ಯಾ ದಂಧೆ ನಡೆಯುತ್ತಿತ್ತೆಂದು ಒತ್ತಿ ಹೇಳಿದ್ದಾಳೆ!

ಈ ಬಗ್ಗೆ ದೂರು ಬಂದಾಗ ಒಡನಾಡಿ ಸಂಸ್ಥೆ ಸರಸ್ವತೀ ಪುರಂ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದಾಯ ಪೊಲೀಸರೂ ಕೂಡಾ ಈ ಪ್ರಕರಣವನ್ನು ಮುಚ್ಚಿ ಹಾಕಲು ನೋಡಿದ್ದರೆಂಬ ಆರೋಪಗಳಿವೆ. ಈ ವಿಚಾರದಲ್ಲಿ ಇಲ್ಲಿನ ಎಎಸ್‌ಐ ಧನಪಾಲ್ ಕೂಡಾ ಅನುಚಿತವಾಗಿ ನಡೆದುಕೊಂಡ ಆರೋಪ ಹೊತ್ತಿದ್ದಾರೆ. ಆದರೆ ಕಡೆಗೂ ಈ ಪ್ರಕರಣ ಬಲಗೊಂಡಿದೆ. ಇದೀಗ ಆ ಹುಡುಗಿ ಮ್ಯಾಜಿಸ್ಟ್ರೇಟರ್ ಮುಂದೆ ಎಲ್ಲ ವಿಚಾರ ಹೇಳಲಿದ್ದಾಳಂತೆ.

 

 

ಬೇಲಿ ಹಾರೋ ಸಾಧು!

ಸ್ಪಾಗಳ ಹೆಸರಲ್ಲಿ ಇಂಥಾ ದಂಧೆ ನಡೆಯೋದು ಮತ್ತು ಅಮಾಯಕ ಹುಡುಗೀರು ಅದಕ್ಕೆ ಬಲಿಯಾಗೋದು ನಡೆಯುತ್ತಲೇ ಬಂದಿದೆ. ಆದರೆ ಜನ ಪ್ರೀತಿ ಗಳಿಸಿಕೊಂಡಿರೋ ಸಾಧು ಕೋಕಿಲಾ ಮತ್ತು ಮಂಡ್ಯಾ ರಮೇಶ್ ಹೆಸರು ಈ ಪ್ರಕರಣದಲ್ಲಿ ಕೇಳಿ ಬಂದಿರೋದು ನಿಜಕ್ಕೂ ಶಾಕಿಂಗ್ ವಿಚಾರ. ಸಾಧು ಕೋಕಿಲಾರ ಬೇಲಿ ಹಾರೋ ಖಯಾಲಿ ಚಿತ್ರರಂಗದ ಮಟ್ಟಿಗೆ ಅವರ ಪ್ರತಿಭೆಯಷ್ಟೇ ಫೇಮಸ್ಸು. ಆದರೆ ಮುಂದೆ ಬಂದರೆ ಹಾಯದ ಹಿಂದೆ ಬಂದರೆ ಒದೆಯದ ಪುಣ್ಯಕೋಟಿಯಂಥಾ ಇಮೇಜಿನ ಮಂಡ್ಯಾ ರಮೇಶ್ ವಿಚಾರದಲ್ಲಿ ಮಾತ್ರ ಈ ಸುದ್ದಿ ಭಾರೀ ಸಂಚಲನವೆಬ್ಬಿಸಿರೋದು ಖಚಿತ.
ಒಂದು ಮೂಲದ ಪ್ರಕಾರ ಇಂದ್ರಾ ಮತ್ತು ರಾಜೇಶ್ ದಂಪತಿ ಈ ಸ್ಪಾ ಹೆಸರಿನ ಅಡ್ಡೆ ತೆರೆದಾಗ ಮಂಡ್ಯ ರಮೇಶ್ ಮತ್ತು ಸಾಧು ಕೋಕಿಲಾರಲ್ಲಿ ಒಬ್ಬರು ಟೇಪು ಕಟ್ ಮಾಡಿ ಉದ್ಘಾಟನೆ ಮಾಡಿದ್ದರು. ಆ ನಿಟ್ಟಿನಲ್ಲಿ ನೋಡ ಹೋದರೆ ಈ ದಂಧೆಯ ದಂಪತಿಗೂ ಇವರಿಗೂ ಕಾಲಾಂತರಗಳಿಂದ ಸಂಪರ್ಕ ಇದ್ದಂತಿದೆ. ಈ ಅಡ್ಡೆಗೆ ಕಿರುತೆರೆ ಮತ್ತು ಚಿತ್ರ ರಂಗದ ಕೆಲ ಚೂಲಿನ ಮಂದಿ ಬಂದು ಅಂಗಾಂಗಕ್ಕೆ ಮಸಾಜು ಮಾಡಿಸಿಕೊಳ್ಳುತ್ತಾರಂತೆ. ಅದು ಸಾಧು ಮತ್ತು ರಮೇಶ್ ಅವರುಗಳ ಗ್ರಹಚಾರವೋ ಗೊತ್ತಿಲ್ಲ, ಅವರಿಬ್ಬರೂ ಚಿರಪರಿಚಿತರಾದ್ದರಿಂದ ಈ ಹುಡುಗಿ ಅವರಿಬ್ಬರನ್ನು ಗುರುತಿಟ್ಟುಕೊಂಡಿದ್ದಾಳೆ!

 

 

ಸಾಧು-ರಮೇಶ್ ಮೇಲೆ ಕೇಸು ಬೀಳಲಿದೆಯಾ?

ಬೋಗಾದಿ ಸರ್ಕಲ್ಲಿನ ಆ ಸ್ಪಾದಲ್ಲಿ ಸೆಕ್ಸ್ ದಂಧೆಯೇ ನಡೆಯುತ್ತಿದೆ ಅಂತ ನಿಖರವಾಗಿ ಹೇಳಿರೋ ಆ ಹುಡುಗಿ ಹೆಸರು ಹೇಳಿದ್ದರಿಂದ ಸಾಧು ಮತ್ತು ರಮೇಶ್ ವಿರುದ್ಧವೂ ಕೇಸು ಜಡಿದುಕೊಳ್ಳೋ ಎಲ್ಲಾ ಲಕ್ಷಣಗಳೂ ಇದ್ದಾವೆ. ಇವರಿಬ್ಬರ ಬುಡಕ್ಕೆ ಸೆಕ್ಷನ್ ೩೭೬ ಅಡಿಯಲ್ಲಿ ಕೇಸು ನಾಟಿಕೊಂಡರೂ ಅಚ್ಚರಿಯೇನಿಲ್ಲ. ಆದರೆ ತುಂಬಾ ಜನ ಆರಾಧಿಸೋ ಈ ನಟರಿಬ್ಬರನ್ನು ಇಂಥಾ ಕೊಳಕು ವಿಚಾರವೊಂದರಲ್ಲಿ ಆರೋಪಿಗಳಾಗಿ ನೋಡಬೇಕಾಗಿ ಬಂದಿರೋದು ಕನ್ನಡಿಗರ ದೌರ್ಭಾಗ್ಯ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top