fbpx
ಕಿರುತೆರೆ

ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು..?

ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು..?

 

 

ಈಗಾಗಲೇ ಒಂಭತ್ತು ವಾರಗಳನ್ನು ಪೂರೈಸಿಕೊಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದ 5 ನೇ ಆವೃತ್ತಿ ಮನೆಗೆ ಎಂಟ್ರಿ ಕೊಟ್ಟಿದ್ದ 17 ಜನರ ಪೈಕಿ 7 ಜನ ಮನೆಯಿಂದ ಹೋಗಿದ್ದಾರೆ.. ಸುಮಾರಾಜಕುಮಾರ್, ಮೇಘ, ದಯಾಳ್, ತೇಜಸ್ವಿನಿ, ಆಶಿತಾ, ಜಗನ್ ಮತ್ತು ಸಿಹಿ ಕಹಿ ಚಂದ್ರು ಎಲಿಮಿನೇಟ್ ಆಗಿದ್ದಾರೆ. ಅಂತೆಯೇ ಈ ವಾರ ಬಿಗ್ ಬಾಸ್ ಮನೆಯಿಂದ ಹೊರವಾಗಲು ಬರೋಬ್ಬರಿ ಆರು ಮಂದಿ ನಾಮಿನೇಟ್ ಆಗಿದ್ದಾರೆ.. ಮುಂದೆ ಓದಿ

 

 

ಈ ವಾರ ಮನೆಯಿಂದ ಹೊರಹೋಗಲು ಸದಸ್ಯರ ಆಯ್ಕೆಯ ಅನುಸಾರ ಸಮೀರಾಚಾರ್ಯ, ನಿವೇದಿತಾ, ಜಯಶ್ರೀನಿವಾಸನ್, ಅನುಪಮಾ,ದಿವಾಕರ್ ಮತ್ತು ಲಾಸ್ಯ ನಾಮಿನೇಟ್ ಆಗಿದ್ದಾರೆ.ನಾಮಿನೇಟ್ ಆಗಿರುವ ಈ ಆರು ಜನರ ಪೈಕಿ ಯಾರಾದರೂ ಒಬ್ಬರು ಇಂದು ಬಿಗ್‌ಬಾಸ್‌ ಮನೆಯ ತಮ್ಮ ಪ್ರಯಾಣ ಮುಗಿಸಬೇಕಾಗುತ್ತೆ.

 

 

ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಯಾರು ಬಿಗ್‌ಬಾಸ್ ನಿಂದ ಎಲಿಮಿನೇಟ್ ಆಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಾದ್ರೆ ಇಂದಿನ ‘ವಾರದ ಕಥೆ ಕಿಚ್ಚನ ಜತೆ’ ಎಪಿಸೋಡನ್ನು ತಪ್ಪದೇ ನೋಡಿ..ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಅನ್ನೋ ಕುತೂಹಲಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಈ ಪೈಕಿ ಯಾರು ಮನೆಯಿಂದ ಹೋಗಬೇಕು ಯಾರು ಸೇಫ್ ಆಗಬೇಕು ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top