ಉಪಯುಕ್ತ ಮಾಹಿತಿ

ದೆಹಲಿ ವಾಯುಮಾಲಿನ್ಯದ ಹಿನ್ನೆಲೆ ಮೇಲೊಂದು ನೋಟ

ದೆಹಲಿ ವಾಯುಮಾಲಿನ್ಯದ ಹಿನ್ನೆಲೆ ಮೇಲೊಂದು ನೋಟ

ಇತ್ತೀಚೆಗಂತೂ ದೆಹಲಿ ವಾಯುಮಾಲಿನ್ಯ ಸಮಸ್ಯೆಯಿಂದ ಸಾಕಷ್ಟು ನರಳುತ್ತಿದೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದರ ಜೊತೆಯಲ್ಲಿ ದಿನೇ ದಿನೇ ಅನಾರೋಗ್ಯದ ನೆರಳು ಎಲ್ಲರನ್ನೂ ಆವರಿಸಿಕೊಳ್ಳುತ್ತಿದೆ. ದೇಶದ ಇನ್ನಿತರ ಪ್ರತಿಷ್ಟಿತ ನಗರಗಳಂತೆ ದೆಹಲಿ ಇದ್ದರೂ ಏಕೆ ಇಲ್ಲಿ ಮಾತ್ರ ವಾಯುಮಾಲಿನ್ಯದ ಪ್ರಮಾಣ ಅತೀ ಹೆಚ್ಚು ಎನ್ನುವುದರ ಮೇಲೊಂದು ನೋಟ ಇಲ್ಲಿದೆ. ಓದಿ…

ಮಿತಿ ಮೀರಿದ ಮಾರುತಿ ಕಾರುಗಳ ಸಂಖ್ಯೆ

 

ಹೌದು… ದೆಹಲಿಯಲ್ಲಿ ವಾಹನ ಸಂಚಾರ ದಟ್ಟಣೆಯ ಸಮಸ್ಯೆ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಇದು ಸಾಗಿಬಂದಿದೆ. ಕಡಿಮೆ ಬೆಲೆಗೆ ಕಾರು ಖರೀದಿ ಸಾಧ್ಯವಾದುದರ ಪರಿಣಾಮ ಪ್ರತಿ ಮನೆಯಲ್ಲೂ ಕಡಿಮೆ ಬೆಲೆ ಮಾರುತಿ ಕಾರುಗಳನ್ನು ಹೊಂದಿರುವುದು ಹಾಗೂ ಕಡಿಮೆ ಬೆಲೆಯ ಡೀಸೆಲ್ ಬಳಕೆಯಿಂದ ಅದರ ನಿರ್ವಹಣೆ ಸಾಧ್ಯವಾಗಿರುವುದು ವಾಯುಮಾಲಿನ್ಯ ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗಿದೆ.

 

 

ಸರಿಯಾಗಿ ವಾಯುಮಾಲಿನ್ಯ ನಿಯಂತ್ರಿಸದ, ಎರಡು ಮತ್ತು ಮಾರು ಸ್ಟ್ರೋಕ್ ತಂತ್ರಜ್ಞಾನದ ವಾಹನಗಳ ಸಂಖ್ಯೆಯೂ ಅಧಿಕವಾಗಿರುವುದರಿಂದ ದೆಹಲಿ ಸಾಕಷ್ಟು ತೊಂದರೆಗೀಡಾಗಿದೆ. ಹಾಗಾಗಿ ಇನ್ನು ಮುಂದೆ ಕಟ್ಟುನಿಟ್ಟಾಗಿ ನಾಲ್ಕು ಸ್ಟ್ರೋಕ್ ತಂತ್ರಜ್ಞಾನದ ವಾಹನಗಳ ಬಳಕೆಯನ್ನು ಜಾರಿಗೆ ತರಲಾಗಿದೆ. ಸಾರ್ವಜನಿಕ ಸಾರಿಗೆಗಳನ್ನು ಬಳಸದೇ ಮನೆಗೊಬ್ಬರು ಒಂದರಂತೆ ಪ್ರತ್ಯೇಕ ವಾಹನ ಬಳಕೆಯಿಂದ ಈಗಾಗಲೇ ಸೊರಗಿರುವ ದೆಹಲಿ, ಪಾರ್ಕಿಂಗ್ ಶುಲ್ಕವನ್ನು ದುಪ್ಪಟ್ಟು ಮಾಡಿಯೂ ಆಗಿದೆ. ಹಾಗಾದರೂ ಸಾರ್ವಜನಿಕ ಸಾರಿಗೆಯನ್ನು ಹೆಚ್ಚೆಚ್ಚು ಬಳಕೆ ಮಾಡಲಿ ಎಂದು ಈ ನೀತಿ ಜಾರಿಗೆ ತಂದಿದ್ದರೂ ಅದರಲ್ಲಿ ಅಂತಹ ಬದಲಾವಣೆ ಏನೂ ಆದಂತಿಲ್ಲ ಎಂಬುದೇ ನೋವಿನ ಸಂಗತಿ.

 

ವಾಯುಮಾಲಿನ್ಯ ಸಮಸ್ಯೆಯಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಆಗದೆ ಇರದು. ತೀವ್ರತರ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಜೀವಸಂಕುಲವನ್ನು ಬಲಿಪಡೆಯದೇ ಬಿಡದು. ಹಾಗೆ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಯೂ ಬಾಧಿಸದೆ ಇರದು ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಹಾಗಾಗಿ ಸರ್ಕಾರದ ಯೋಚನೆ ಹಾಗೂ ಯೋಜನೆಗಳಿಗೆ ಸಾರ್ವಜನಿಕರು ಸಹಕಾರ ನೀಡದ ಹೊರತು ಯಾವ ಬದಲಾವಣೆಯೂ ಸಾಧ್ಯವಿಲ್ಲ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top