fbpx
ಕಿರುತೆರೆ

ಬಿಗ್’ಬಾಸ್ ಮನೆಯಲ್ಲಿ ತನ್ನ ಆಸೆಯನ್ನ ಈಡೇರಿಸಿಕೊಂಡ ರಿಯಾಜ್.

ಬಿಗ್ ಬಾಸ್ ಮನೆಯಲ್ಲಿ ತನ್ನ ಆಸೆಯನ್ನ ಈಡೇರಿಸಿಕೊಂಡ ರಿಯಾಜ್.

 

 

ಬಿಗ್ ಬಾಸ್ ಸೀಸನ್ 5 ಕಾರ್ಯಕ್ರಮಕ್ಕೆ ಕಾಮನ್ ಮ್ಯಾನ್ ಕೋಟಾದಲ್ಲಿ ಎಂಟ್ರಿಕೊಟ್ಟಿದ್ದ ರಿಯಾಜ್ ಭಾಷ ಬಿಗ್ ಬಾಸ್ ಮನೆಯಲ್ಲಿ ತಮಗಿದ್ದ ಬಯಕೆಯನ್ನು ಈಡೇರಿಸಿಕೊಂಡಿದ್ದಾರೆ. ಮೊದಲನೇ ವಾರದಿಂದಲೂ ಟಾಸ್ಕ್ ನಲ್ಲಿ ಉತ್ತಮವಾಗಿ ಪ್ರದರ್ಶನ ನೀಡುತ್ತಾ ಬಂದಿರುವ ರಿಯಾಜ್ ಒಮ್ಮೆಯಾದರೂ ಬೆಸ್ಟ್ ಪರ್ಫಾರ್ಮರ್ ಆಫ್ ದಿ ವೀಕ್ ಅನ್ನು ಒಮ್ಮೆಯಾದರೂ ಪಡೆದುಕೊಳ್ಳಬೇಕು ಎಂದು ಪರಿತಪಿಸುತ್ತಿದ್ದರು.

 

 

ಬೆಸ್ಟ್ ಪರ್ಫಾರ್ಮರ್ ಆಫ್ ದಿ ವೀಕ್ ಪಡ್ಕೋಬೇಕು ಎಂಬ ಅವರ ಆಸೆಯನ್ನು ಈಡೇರಿಸಿಕೊಂಡಿರುವ ರಿಯಾಜ್ ಭಾಯ್ ಪುರುಷ ತಂಡದ ಸದಸ್ಯರು ರಿಯಾಜ್ ಅವರನ್ನು ಬೆಸ್ಟ್ ಪರ್ ಫಾರ್ಮರ್ ಆಗಿ ಆಯ್ಕೆ ಮಾಡಿದ್ದಾರೆ.. ಈ ವಾರ ಬಿಗ್ ಬಾಸ್ ನೀಡಿದ ಎಲ್ಲಾ ಟಾಸ್ಕ್’ಗಳಲ್ಲೂ ರಿಯಾಜ್ ಅವರು ಉತ್ತಮ ನೀಡಿದ್ದರು ಆ ಕಾರಣಕ್ಕೆ ಎಲ್ಲರೂ ಒಮ್ಮತದಿಂದ ಅವರನ್ನು ಬೆಸ್ಟ್ ಪರ್ಫಾರ್ಮರ್ ಎಂದು ಘೋಷಿಸಿದರು.

 

 

ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ತೋರಿ ಬೆಸ್ಟ್ ಪರ್ಫಾರ್ಮರ್ ಆಫ್ ದಿ ವೀಕ್ ಪಡೆದುಕ್ಕೊಂಡ ಸದಸ್ಯರಿಗೆ ಅವರ ಮನೆಯಿಂದ ವಿಶೇಷ ಆಹಾರ ಸಿಗಲಿದೆ. ಆ ಕಾರಣಕ್ಕಾಗಿ ತಮ್ಮ ಪತ್ನಿಯ ಕೈರುಚಿಯನ್ನು ಸವಿಯಬೇಕು ಎಂಬ ಆಸೆಯಿಂದ ರಿಯಾಜ್ ಅವರು ಬೆಸ್ಟ್ ಪರ್ಫಾರ್ಮರ್ ಪಡೆದುಕೊಳ್ಳಬೇಕು ಎಂದು ಪದೇ ಪದೇ ಹೇಳಿಕೊಳ್ಳುತ್ತಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top