fbpx
ಕಿರುತೆರೆ

ಈ ಬಾರಿಯ ಬಿಗ್’ಬಾಸ್ 100 ದಿನ ಅಲ್ಲ..ಕಾರ್ಯಕ್ರಮ ಎಷ್ಟು ದಿನ ವಿಸ್ತರಣೆ ಗೊತ್ತಾ.?

ಈ ಬಾರಿಯ ಬಿಗ್’ಬಾಸ್ 100 ದಿನ ಅಲ್ಲ..ಕಾರ್ಯಕ್ರಮ ಎಷ್ಟು ದಿನ ವಿಸ್ತರಣೆ ಗೊತ್ತಾ.?

 

 

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ಹತ್ತು ವರಗಳನ್ನು ಮುಗಿಸಿ ಹನ್ನೊಂದನೇ ವಾರಕ್ಕೆ ಕಾಲಿಟ್ಟಿದೆ. ಮನೆಗೆ ಎಂಟ್ರಿ ಕೊಟ್ಟಿದ್ದ 19 (2 ವೈಲ್ಡ್ ಕಾರ್ಡ್) ಜನರ ಪೈಕಿ ಈಗಾಗಲೇ ಒಂಭತ್ತು ಜನ ಹೊರಬಂದಿದ್ದು ಇನ್ನು 10 ಜನ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಮನೆಯಲ್ಲಿ ಉಳಿದುಕೊಂಡಿಯುವ ಸ್ಪರ್ಧಿಗಳ ಸಂಖ್ಯೆ ಜಾಸ್ತಿ ಇರುವ ಕಾರಣ 98 ದಿನಕ್ಕೆ ಮುಗಿಯಬೇಕಿದ್ದ ಕಾರ್ಯಕ್ರಮ ವಿಸ್ತರಣೆಯಾಗಿದೆ.

 

 

ಹೀಗಂತ ಸ್ವತಃ ಕಾರ್ಯಕ್ರಮದ ನಿರೂಪಕನಾಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೇ ನೆನ್ನೆಯ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ತಿಳಿಸಿದ್ದಾರೆ. ಎಂದಿನಂತೆ ಪಂಚಾಯುತಿಯನ್ನು ಮುಗಿಸಿ ಮಾತುಕತೆ ನಡೆಸಿ ಸ್ವಲ್ಪ ಹರಟೆಹೊಡೆದು ಎಲಿಮಿನೇಷನ್ ಪ್ರಕ್ರಿಯೆ ನಡೆಸಿದ ನಂತರ ಚನ್ನಾಗಿ ಆದಿ ಎಂದು ಹೇಳಿದ ಸುದೀಪ್ ಕಾರ್ಯಕ್ರಮದ ಅವಧಿ ವಿಸ್ತರಣೆಯಾಗಿದೆ ಎಂದು ತಿಳಿಸಿದರು.

 

 

ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಹೋಗಿದ್ದ ಲಾಸ್ಯ ನಾಗ್ ಎಲಿಮಿನೇಟ್ ಮಾಡಿದ ಸುದೀಪ್ “ಈ ಬಾರಿಯ ಬಿಗ್ ಬಾಸ್ ನೂರು ದಿನಗಳ ಆಟವಲ್ಲ 106 ದಿನಗಳ ಆಟ” ಎಂದು ಉಳಿದ ಸ್ಪರ್ಧಿಗಳಿಗೆ ಹೇಳಿದರು. ಅಲ್ಲಿಗೆ 98 ದಿನಕ್ಕೆ ಮುಗಿಯಬೇಕಿದ್ದ ಬಿಗ್ ಬಾಸ್ ಒಂದು ವಾರಗಳ ಕಾಲ ವಿಸ್ತರಣೆಯಾಗಿದೆ. ಕಳೆದ ಬಾರಿಯೂ ಕೂಡ ಕಾರ್ಯಕ್ರಮ ಎರಡು ವಾರಗಳಷ್ಟು ವಿಸ್ತರಣೆಮಾಡಲಾಗಿ 114 ದಿನಗಳ ಕಾಲ ಕಾರ್ಯಕ್ರಮ ನಡೆದಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top