fbpx
ಕಿರುತೆರೆ

ಬಿಗ್’ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಿಲ್ಡಪ್ ಸ್ಟಾರ್ ಪ್ರಥಮ್..!

ಬಿಗ್’ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಿಲ್ಡಪ್ ಸ್ಟಾರ್ ಪ್ರಥಮ್..!

 

 

ತಾನು ಮಾಡುವ ಚೇಷ್ಟೆ, ಗಿಮಿಕ್ ಮತ್ತು ಅವಕ್ಕೆ ಕೊಡುವ ಬಿಲ್ಡಪ್ ಗಳಿಗೆ ಫೇಮಸ್ ಆಗಿರುವ ಸ್ವಯಂ ಘೋಷಿತ ಒಳ್ಳೆ ಹುಡುಗ ಪ್ರಥಮ್ ಅಥಿತಿಯಾಗಿ ಬಿಗ್ ಬಾಸ್ ಮನೆಯನ್ನು ಸೇರಿದ್ದಾರಂತೆ. ಈಗಂತ ಮೂಲಗಳಿಂದ ತಿಳಿದುಬಂದಿದ್ದು ಈತನಿರುವಷ್ಟು ದಿನಗಳು ರಸಭೂರಿತ ಮನೋರಂಜನೆ ಸಿಗಬಹುದು ಎಂದು ಪ್ರೇಕ್ಷಕ ಅಪೇಕ್ಷಿಸಿದ್ದಾನೆ.

ಕಳೆದ ಬಾರಿ ಪ್ರಥಮ್ ನ ಚೇಷ್ಟೆಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದ ವೀಕ್ಷಕರು ಈ ಭಾರಿ ಅಂತಹ ಯಾವುದೇ ವಿಚಿತ್ರ ಪ್ರಾಣಿಗಳು ಇಲ್ಲದರಿಂದ ಒಂದು ವಾರ ಅಥಿತಿಯಾಗಿ ಬಿಗ್ ಬಾಸ್ ಮನೆಗೆ ಬರಲಿ ಎಂದು ವೇಕ್ಷಕರು ಅಪೇಕ್ಷಿಸುತ್ತಿದ್ದರು. ಜಾತಕ ಪಕ್ಷಿಯ ರೀತಿ ಕಾಯುತ್ತಿದ್ದ ಪ್ರೇಕ್ಷಕರಿಗೆ ಈಗ ಆ ಘಳಿಗೆ ಕೂಡಿಬಂದಿದ್ದು ನಾಳೆಯಿಂದ ಬಿಗ್ ಬಾಸ್ ಮನೆಯಲ್ಲಿ ಪ್ರಥಮ್ ನ ಚೀರಾಟ ಜೋರಾಗಿರಲಿದೆ. ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವ ನಾಟಕ, ಓವರ್ ಆಕ್ಟಿಂಗ್ ಕಾಲಿಂದ ಸ್ವಲ್ಪ ಮಟ್ಟಿಗೆ ಕಳೆಗುಂದಿದ್ದ ಕಾರ್ಯಕ್ರಮ ನಾಳೆಯಿಂದ ನೋಡುವವರಿಗೆ ಕಿಕ್ ಕೊಡಲಿದೆ ಎಂದರೆ ತಂಪಾಗುವುದಿಲ್ಲ.

 

 

ಎರಡು ವಾರಗಳ ಮಟ್ಟಿಗೆ ಅತಿಥಿಯಾಗಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ. ಕಳೆದ ಬಾರಿಯ ಬಿಗ್ ಬಾಸ್ ವಿಜೇತನಾಗಿದ್ದ ವಿಚಿತ್ರ ಮನುಷ್ಯ ಪ್ರಥಮ್ ಈ ಎರಡು ವಾರಗಳಲ್ಲಿ ಯಾವೆಲ್ಲಾ ರೀತಿ ಪ್ರೇಕ್ಷಕನಿಗೆ ಕೂಳೆ ಕೊಡುತ್ತಾನೋ ಕಾದು ನೋಡಬೇಕಾಗಿದೆ. ಕಳೆದ ಸೀಸನ್ ನಲ್ಲಿ ಪಾಲ್ಕೊಂಡಿದ್ದ ಶಾಲಿನಿ,ಕೀರ್ತಿ,ಶೀತಲ್ ಮತ್ತು ನಿರಂಜನ್ ಒಂದು ದಿನಗಳ ಮಟ್ಟಿಗೆ ಅಥಿತಿಯಾಗಿ ಈ ಭಾರಿಯ ಬಿಗ್ ಬಾಸ್ ಹೋಗಿದ್ದರು. ಎರಡನೇ ಸೀಸನ್ ನ ವಿನ್ನರ್ ಆಗಿದ್ದ ಅಕುಲ್ ಬಾಲಾಜಿ ಒಂದು ವಾರ ಬಿಗ್ ಬಾಸ್ ಮನೆಯಲ್ಲಿ ಅಥಿತಿಯಾಗಿ ಇದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top