fbpx
ಕಿರುತೆರೆ

” ನೀವು ಕೇಳಿದ್ದು ಸತ್ತವರ ಮನೇಲಿ ಐಸ್‌ಕ್ರೀಂ ಕೇಳಿದ ಹಾಗಿತ್ತು” ಹೀಗಂತ ಕೃಷಿಗೆ ಸುದೀಪ್ ಹೇಳಿದ್ಯಾಕೆ ಗೊತ್ತಾ?

” ನೀವು ಕೇಳಿದ್ದು ಸತ್ತವರ ಮನೇಲಿ ಐಸ್‌ಕ್ರೀಂ ಕೇಳಿದ ಹಾಗಿತ್ತು” ಹೀಗಂತ ಕೃಷಿಗೆ ಸುದೀಪ್ ಹೇಳಿದ್ಯಾಕೆ ಗೊತ್ತಾ?

 

 

ಶನಿವಾರದ ವಾರದ ಕಥೆ ಕಿಚ್ಚ ಜೊತೆ ಸಂಚಿಕೆಯಲ್ಲಿ ನಿರೂಪಕ ಸುದೀಪ್ ಸ್ಪರ್ಧಿ ಕೃಷಿ ತಾಪಂಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ಮುಖ್ಯ ನಿಯಮವನ್ನು ತನ್ನ ಸಹಸ್ಪರ್ಧಿಯ ಮೇಲೆ ಕೈ ಮಾಡಿ ಮನೆಯಿಂದ ಕಿಕ್ ಔಟ್ ಮಾಡಿಸಿಕೊಂಡಿದ್ದ ಸಂಯುಕ್ತ ವಿಚಾರದಲ್ಲಿ ಕೃಷಿ ಸುದೀಪ್ ಬಳಿ ಬುದ್ದಿ ಮಾತನ್ನು ಹೇಳಿಸಿಕೊಂಡಿದ್ದಾರೆ.

 

 

ಸಂಯುಕ್ತಾ ಮನೆಯಿಂದ ಹೊರಹೋಗಬೇಕು ಎಂದು ಹೇಳಿದಾಗ ದುಃಖದಿಂದಲೇ ಹೋರಡುತಿದ್ದ ವೇಳೆ ಅಲ್ಲೇ ಇದ್ದ ಕೃಷಿ ತಾಪಂಡ ಸಂಯುಕ್ತ ಅವರ ಹತ್ತಿರ ಇದ್ದ ‘ಶೂ’ವನ್ನು ಕೊಡುವಂತೆ ಕೇಳಿಕೊಂಡರು. ಸಂಯುಕ್ತ ದುಃಖವಾಗಿದ್ದ ಈ ಸಂದರ್ಭದಲ್ಲಿ ಕೃಷಿ ಸಂಯುಕ್ತಾ ಮುಂದಿಟ್ಟ ಬೇಡಿಕೆ ವಿಚಿತ್ರವೆನಿಸಿತ್ತು. ಇದನ್ನು ಮೊನ್ನೆಯ ಸಂಚಿಕೆಯಲ್ಲಿ ಸುದೀಪ್ ಪ್ರಶ್ನಿಸಿದ್ದಾರೆ.

 

 

“ತುಂಬಾ ಕಳೆದುಕೊಂಡು ಹೋಗುತ್ತಿದ್ದೇನೆ ಅಂತ ಸಂಯುಕ್ತ ಹೇಳುತ್ತಿರುವಾಗ, ನಿನ್ನ ಹತ್ತಿರ ಇರೋ ಶೂ ಕೊಟ್ಟು ಹೋಗು ಅಂತ ಕೇಳ್ತೀರಲ್ಲ ಇದು ಸೂಕ್ಷ್ಮತೆ ಇಲ್ವೇ ನಿಮಗೆ ಕೃಷಿ? ಎಂದು ಕೇಳಿದಾಗ ಕೃಷಿ ಏನನ್ನೋ ಹೇಳಲು ಯತ್ನಿಸಿದರು ಆಗ ಕೃಷಿಯನ್ನು ತಡೆದ ಸುದೀಪ್ “ಇದಕ್ಕೆ ವಿವರಣೆ ಕೊಡೋಕೆ ಹೋಗಿ ಚಿಕ್ಕವರಾಗಬೇಡಿ, ನೀವು ಆ ದಿನ ಕೇಳಿದ್ದು ಸತ್ತವರ ಮನೆಗೆ ಹೋಗಿ ಐಸ್ ಕ್ರೀಮ್ ಕೇಳಿದ ಹಾಗಿತ್ತು” ಎಂದು ಹೇಳುತ್ತಲೇ ಕೃಷಿ ತಲೆ ತಗ್ಗಿಸಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top