fbpx
ಮನೋರಂಜನೆ

ನಟ ಚೇತನ್ ರೈತರ ಪರ ಹೋರಾಟಕ್ಕಿಳಿದಿರುವುದು ಪಬ್ಲಿಸಿಟಿ ಗಿಮ್ಮಿಕ್ ಎಂದ ಜಗ್ಗೇಶ್.

ನಟ ಚೇತನ್ ರೈತರ ಪರ ಹೋರಾಟಕ್ಕಿಳಿದಿರುವುದು ಪಬ್ಲಿಸಿಟಿ ಗಿಮ್ಮಿಕ್ ಎಂದ ಜಗ್ಗೇಶ್.

 

 

 

ಮಲ್ಲೇಶ್ವರಂ ನ ಬಿಜೆಪಿ ಕಚೇರಿ ಎದುರು ಧರಣಿಯಲ್ಲಿ ಕೂತಿರುವ ಮಹದಾಯಿ ಹೋರಾಟಕ್ಕೆ ಬೆಂಬಲ ಸೂಚಿಸಿ ತಾವೂ ಕೂಡ ಹೋರಾಟದಲ್ಲಿ ಪಾಲ್ಗೊಂಡು ಮಾತಾಡಿದ ಚೇತನ್ ಎಲ್ಲ ರಾಜಕೀಯ ಪಕ್ಷಗಳಿಗೆ ಅಧಿಕಾರ ಬೇಕು ಆದರೆ ಜನರ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿದೆ ಕೆಲವೇ ನಿಮಿಷಗಳಲ್ಲಿ ಬಗೆಹರಿಸಬಹುದಾದ ವಿಷಯವನ್ನು ಸುಮ್ಮನೆ ಎಳೆಯುತ್ತಿದ್ದಾರೆ. ಪತ್ರ ಪಾಲಿಟಿಕ್ಸ್ ಬೇಡ ಆಕ್ಷನ್ ಪಾಲಿಟಿಕ್ಸ್ ಬೇಕು’ – ಮೂರು ಪಕ್ಷಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹದಾಯಿ ವಿಷಯವನ್ನು ಬಳಸುತ್ತಿವೆ ಎಂದು ನಟ ಚೇತನ್ ಗಂಭೀರ ಆರೋಪ ಮಾಡಿದ್ದಾರೆ.

 

 

ಬೆಂಗಳೂರಿನಲ್ಲಿ ಹೋರಾಟ ಶುರುವಾಗಿ ನಾಲ್ಕೈದು ದಿನಗಳೇ ಕಳೆದರೂ ಇನ್ನೂ ರೈತರ ಪ್ರತಿಭಟನೆಗೆ ಕೈಜೋಡಿಸದ ಚಿತ್ರರಂಗದವರನ್ನು ತರಾಟೆಗೆ ತೆಗೆದುಕೊಂಡ ಚೇತನ್ “ಚಿತ್ರರಂಗದ ಕಲಾವಿದರು,ಹಿರಿಯರು ರೈತರ ಹೋರಾಟಕ್ಕೆ ಕೈಜೋಡಿಸಿ ಬೆಂಬಲ ಕೊಡಬೇಕು, ಹೋರಾಟ ಶುರುವಾಗಿ ನಾಲ್ಕೈದು ದಿನಗಳೇ ಕಳೆದಿದ್ದರೂ ಚಿತ್ರರಂಗದಿಂದ ಹೋರಾಟಕ್ಕೆ ಸರಿಯಾದ ಬೆಂಬಲ ದೊರೆತಿಲ್ಲ. ಕೆಲವು ವರ್ಷಗಳ ಹಿಂದೆ ಉತ್ತರ ಕರ್ನಾಟಕದಲ್ಲಿ ನಡೆದಿದ್ದ ಮಹದಾಯಿ ಹೋರಾಟಕ್ಕೆ ಚಿತ್ರರಂಗ ಬೆಂಬಲ ನೀಡಿ ಬಂದಿತ್ತು. ಅದು ಒಳ್ಳೆಯ ಕೆಲಸ , ಆದರೆ ಹೋರಾಟ ಎಂದರೆ ಒಂದು ದಿನ ಹೋಗಿ ಕೈ ಅಲ್ಲಾಡಿಸಿ ಬರುವುದೆಲ್ಲಾ, ಸಮಸ್ಯೆಗೆ ಪರಿಹಾರ ಸಿಗುವವರೆಗೂ ಹೋರಾಟ ಮಾಡಬೇಕು ಆಗ ಮಾತ್ರ ಹೋರಾಟಕ್ಕೆ ಅರ್ಥ ಬರುತ್ತದೆ ” ಎಂದು ನಟ ಚೇತನ್ ರೈತರಿಗೆ ಬೆಂಬಲ ಕೊಡದ ಕೆಲ ಚಿತ್ರರಂಗದವರ ವಿರುದ್ಧ ಗರಂ ಆದರು.

 

 

ಚೇತನ್ ಅವರ ಈ ಹೇಳಿಕೆಯಿಂದ ಇಲ್ಲಿಯವರೆಗೂ ರೈತರ ಕಡೆ ಮೂಸಿಯೂ ನೋಡದ ಬಿಜೆಪಿ ಮುಖಂಡ ಜಗ್ಗೇಶ್ ಟ್ವಿಟ್ಟರ್ ನಲ್ಲಿ ಚೇತನ್ ವಿರುದ್ಧ ಹರಿಹಾಯ್ದಿದ್ದಾರೆ. “ತಾನು ಬೆಳೆಯಲು ತನ್ನ ಪ್ರತಿಭೆಯನ್ನು ಬಳಸಿಕೊಳ್ಳಬೇಕು ಈ ರೀತಿಯ ಕೆಟ್ಟ ಮಾರ್ಗವನ್ನು ಬಳಸಿಕೊಳ್ಳಬಾರದು, ತಾನು ಫೇಮಸ್ ಆಗೋಕೆ ನೀವು ಮೆಚ್ಚುವ ಕೆಲಸ ಮಾಡುವುದಕ್ಕಿಂತ ದೇವರು ಮೆಚ್ಚುವಂತ ಕೆಲಸ ಮಾಡಬೇಕು. ಈತನ ಪ್ರತಿ ನಡೆಯ ಹಿಂದಿರುವ ಉದ್ದೇಶ ಈಗ ಪ್ರೇಕ್ಷಕನಿಗೆ ಅರಿವಾಗಬೇಕಿದೆ” ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡು ಚೇತನ್ ಅವರು ರೈತರ ಹೋರಾಟದಲ್ಲಿ ಪಬ್ಲಿಸಿಟಿಗೋಸ್ಕರ ಪಾಲ್ಗೊಂಡಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ

 

 

ಜಗ್ಗೇಶ್ ಅವರ ಈ ಟ್ವೀಟ್’ಗೆ ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ರೈತರ ಹೋರಾಟಕ್ಕೆ ಕೈಜೋಡಿಸಿದ ಯುವ ನಟನಿಗೆ ಇರುವಷ್ಟು ಕಾಳಜಿ ಹಿರಿಯ ನಟ ಎಂದು ಕರೆಸಿಕೊಳ್ಳುವ ಜಗ್ಗೇಶ್ ಅವರಿಗೆ ಇಲ್ಲದಿರುವುದು ನಿಜಕ್ಕೂ ನೋವಿನ ಸಂಗತಿ. ಮನೆಯಲ್ಲಿಯೇ ಕೂತು ಹೋರಾಟದಲ್ಲಿ ಭಾಗಿಯಾಗಿದ್ದ ಚೇತನ್ ಅವರ ಬಗ್ಗೆ ಕೊಂಕು ಮಾತನಾಡುವ ಜಗೇಶ್ ಅವರು ಹೋರಾಟ ನಡೆಯುತ್ತಿರುವ ಏರಿಯಾದಲ್ಲಿಯೇ(ಮಲ್ಲೇಶ್ವರಂ) ಇದ್ದರೂ ಒಮ್ಮೆಯೂ ಪ್ರತಿಭಟನಾ ಸ್ಥಳವನ್ನು ಇಣುಕಿಯೂ ನೋಡಿಲ್ಲ ಯಾಕೆ? ನಾಡಿನ ರೈತರ ಕಷ್ಟಗಳಿಗಿಂತ ಇವರಿಗೆ ಪಕ್ಷವೇ ಮುಖ್ಯವಾಯಿತೇ? ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

 

 

ಚೇತನ್ ಅವರು ರೈತರ ಹೋರಾಟದಲ್ಲಿ ಪಾಲ್ಗೊಂಡಿರುವುದು ‘ತಾನು ಬೆಳೆಯಲು ಮಾಡುತ್ತಿರುವ ಪಬ್ಲಿಸಿಟಿ ಗಿಮಿಕ್’ ಎಂದು ಜಗ್ಗೇಶ್ ಹೇಳಿರುವುದು ಸರಿಯೇ? ಅಥವಾ ನಿಜವಾಗಿಯೂ ಚೇತನ್ ಕೆಟ್ಟಮಾರ್ಗವನ್ನು ಹಿಡಿದ್ದಾರೆ ಎಂದು ನ್ಯೂನಿಮಗೆ ಅನಿಸುತ್ತದೆಯೇ? ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top