ತಿಂಡಿ ತೀರ್ಥ

ಈಗ ಚಿಕನ್ ಪಾಪ್ ಕಾರ್ನ್ ತಿನ್ಬೇಕಾದ್ರೆ ದೊಡ್ಡ ದೊಡ್ಡ ಹೋಟೆಲ್ ಹುಡ್ಕೊಂಡು ಹೋಗ್ಬೇಕಾದ ಅವಶ್ಯಕತೆ ಇಲ್ಲ , ಮನೇಲೆ ಮಾಡ್ಕೊಂಡು ತಿನ್ನಿ

 

ಚಿಕನ್ ಪಾಪ್ ಕಾರ್ನ್ :

 

ಬೇಕಾಗುವ ಪದಾರ್ಥ :

ಚೆನ್ನಾಗಿ ಕತ್ತರಿಸಿಕೊಂಡ ಬೋನ್ ಲೆಸ್ ಚಿಕನ್ 500 ಗ್ರಾಂ
ಮೊಟ್ಟೆ 1
ಉಪ್ಪು ರುಚಿಗೆ ಬೇಕಾದಷ್ಟು
ಕಪ್ಪು ಮೆಣಸಿನ ಪುಡಿ ಅರ್ಧ ಚಮಚ
ಸೋಯಾ ಸಾಸ್ -1 ಚಮಚ
ವಿನೆಗರ್ 1 ಚಮಚ
ಕೆಂಪು ಮೆಣಸಿನ ಕಾಯಿ ಪುಡಿ 1 ಚಮಚ
ಕಾರ್ನ್ ಫ್ಲೋರ್ ಒಂದು ವರೆ ಚಮಚ
ಒಂದು ವರೆ ಚಮಚ ಕೆಂಪು ಮೆಣಸಿನ ಪುಡಿ
ಅರ್ಧ ಕಪ್ ಬ್ರೆಡ್ ಕ್ರಮ್ಸ್
ಅರ್ಧ ಕಪ್ ಮೈದಾ

 

ಮಾಡುವ ವಿಧಾನ :

 

ಒಂದು ಬಟ್ಟಲಿನಲ್ಲಿ ಕತ್ತರಿಸಿಕೊಂಡ ಬೋನ್ ಲೆಸ್ ಚಿಕನ್ ಗೆ ಒಂದು ಮೊಟ್ಟೆ, ಮೆಣಸಿನ ಪುಡಿ,ಕೆಂಪು ಮೆಣಸಿನ ಕಾಯಿ ಪುಡಿ,ಕಾರ್ನ್ ಫ್ಲೋರ್,ಸೋಯಾ ಸಾಸ್,ಕಾರ್ನ್ ಫ್ಲೋರ್ ಮತ್ತು ರುಚಿಗೆ ಬೇಕಾದ ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ .

ನಂತರ ಇನ್ನೊಂದು ಬಟಲಿನಲ್ಲಿ ಅರ್ಧ ಕಪ್ ಮೈದಾ ,ಅರ್ಧ ಕಪ್ ಬ್ರೆಡ್ ಕ್ರಮ್ಸ್,ಒಂದು ವರೆ ಚಮಚ ಕೆಂಪು ಮೆಣಸಿನ ಪುಡಿ ಮತ್ತು ರುಚಿಗೆ ಬೇಕಾದ ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ

ಇದರಲ್ಲಿ ಆಗಲೇ ಮಾಡಿಟ್ಟುಕೊಂಡ ಚಿಕನ್ ಮಿಶ್ರಣವನ್ನು ಉರುಳಿಸಿ ಚೆನ್ನಾಗಿ ಕೋಟ್ ಆದ ಮೇಲೆ ಬಿಸಿಯಾದ ಎಣ್ಣೆಯಲ್ಲಿ ಕರಿಯಬೇಕು .

ಬಹಳ ಸುಲಭ ಮತ್ತು ಅತಿ ಬೇಗ ಮಾಡಬಹುದಾದ ಚಿಕನ್ ಪಾಪ್ ಕಾರ್ನ್ ಮಾಡಿಕೊಂಡು ತಿನ್ನಿ,ಇದು ಟೊಮೊಟೊ ಸಾಸ್ ಜೊತೆ ತಿನ್ನಲು ಮಜವಾಗಿರುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top