ಮಾಹಿತಿ

ಇನ್ಮುಂದೆ ಫೇಸ್ಬುಕ್ ಅಕೌಂಟ್’ಗಳಿಗೂ ಆಧಾರ್ ಕಡ್ಡಾಯ!

ಇನ್ಮುಂದೆ ಫೇಸ್ಬುಕ್ ಅಕೌಂಟ್’ಗಳಿಗೂ ಆಧಾರ್ ಕಡ್ಡಾಯ!

 

 

ಇತ್ತೀಚಿಕೆ ಬ್ಯಾಂಕ್ ಖಾತೆ, ರೇಷನ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಪ್ರಮುಖ ದಾಖಲೆಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವೆಂದು ಸರ್ಕಾರ ಘೋಷಿಸಿತ್ತು ಅದರಂತೆ ನಾಗರೀಕರೆಲ್ಲಾ ಸಂಬಂಧಪಟ್ಟ ದಾಖಲೆಗಳಿಗೆ ತಮ್ಮ ಆಧಾರ್ ಅನ್ನು ಲಿಂಕ್ ಮಾಡುವುದರಲ್ಲಿ ತಲ್ಲೀನರಾಗಿ ಹೋಗಿದ್ದರು. ಈಗ ಆಧಾರ್ ಕಾರ್ಡ್ ಲಿಂಕ್ ಮಾಡುವ ತಲೆಬಿಸಿ ಸೋಷಿಯಲ್ ಮೀಡಿಯಾಗೂ ತಟ್ಟುತ್ತಿದೆ.

 

 

ಸೋಷಿಯಲ್ ಮೀಡಿಯಾಗಳ ರಾಜ ಎಂದೇ ಹೆಸರುವಾಸಿಯಾಗಿರುವ ಫೇಸ್​ಬುಕ್​ನಲ್ಲಿ ನಕಲಿ ಖಾತೆಗಳ ಹಾವಳಿ ಹೆಚ್ಚಿರುವುದನ್ನು ತಡೆಯಲು ಫೇಸ್​ಬುಕ್​ ಕಂಪನಿ ಈ ಕ್ರಮಕ್ಕೆ ಮುಂದಾಗಿದ್ದು ಇನ್ನುಮುಂದೆ ಹೊಸದಾಗಿ ತೆರೆಯಲ್ಪಡುವ ಅಕೌಂಟ್ ಗಳ ಬಳಕೆದಾರರು ತಮ್ಮ ಹೆಸರುಗಳನ್ನೂ ನೀಡುವಾಗ ಆಧಾರ್ ಕಾರ್ಡ್ ನಲ್ಲಿರುವ ಹಾಗಿಯೇ ನೀಡುವಂತೆ ಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತಿದೆ.

 

ಈಗಾಗಲೇ ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರನ್ನು ನಮೂಸಲು ಫೇಸ್ಬುಕ್ ತಿಳಿಸುತ್ತಿದ್ದು ” ನಿಮ್ಮ ಸ್ನೇಹಿತರು ನಿಮ್ಮನ್ನು ಸುಲಭವಾಗಿ ಗುರುತಿಸಲು ಸಹಾಯವಾಗುವ ಸಲುವಾಗಿ ನಿಮ್ಮ ಹೆಸರನ್ನು ಆಧಾರ್​ ಕಾರ್ಡ್​ನಲ್ಲಿರುವಂತೆ ನಮೂದಿಸಿ ಎಂದು ಸೂಚನೆಗಳಲ್ಲಿ ತಿಳಿಸುತ್ತಿದೆ.” ಸದ್ಯ ಆಧಾರ್ ನಲ್ಲಿರುವಂತೆ ಹೆಸರನ್ನು ನಮೂಧಿಸುವಂತೆ ಹೊಸ ಬಳಕೆದಾರರಿಗೆ ಸೂಚನೆ ನೀಡುತ್ತಿರುವ ಫೇಸ್ಬುಕ್ ಕಂಪನಿ ಒಂದು ವೇಳೆ ಈಗಿರುವ ಎಲ್ಲಾ ಬಳಕೆದಾರರು ತಮ್ಮ ಖಾತೆಯೊಂದಿಗೆ ಆಧಾರ್​ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಿದರೆ ಫೇಸ್​ಬುಕ್​ ಬಳಕೆದಾರರು ಫೇಸ್ಬುಕ್ ಅನ್ನು ಉಪಯೋಗಿಸಲೇ ಬೇಕು ಅನ್ನೋದಾದರೆ ತಮ್ಮ ತಮ್ಮ ಆಧಾರ್ ಕಾರ್ಡನ್ನು ಲಿಂಕ್ ಮಾಡಲೇಬೇಕಾಗುತ್ತದೆ.

 

 

ಜಗತ್ತಿನಾದ್ಯಂತ 200 ಕೋಟಿ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ ಅತಿಹೆಚ್ಚು ಬಳಕೆದಾರರನ್ನು ಭಾರತದಲ್ಲಿ ಹೊಂದಿದೆ. ಅಕೌಂಟ್ ಗಳಿಗೆ ಆಧಾರ್ ಲಿಂಕ್ ಮಾಡೋದ್ರಿಂದ ಬಳಕೆದಾರರ ಮಾಹಿತಿ ಸೋರಿಕೆಗೆ ಕಾರಣವಾಗುವುದರಿಂದ ಫೇಸ್ಬುಕ್ ಕಂಪನಿಯು ತನ್ನ ಬಳಕೆದಾರರಿಗೆ ಆಧಾರ್ ಅನ್ನು ಕಡ್ಡಾಯವಾಗಿ ಲಿಂಕ್ ಮಾಡಲೇಬೇಕು ಎಂದು ಹೇಳುವುದು ದೂರದ ಮಾತು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top