fbpx
ಸಮಾಚಾರ

ನನ್ನ ಮುಂದೆ …ಬಾಲ ಆಡಿಸ್ಕೊಂಡು ಬಿದ್ದಿರಲಿ ಅನ್ನೋ ದೌಲತ್ತಿನ ‘ತೆವಲುದಾರ’ರಿಗೆಂದೇ ಬಂದಿದೆ ಈ ದಿಂಬು !

ನನ್ನ ಮುಂದೆ …ಬಾಲ ಆಡಿಸ್ಕೊಂಡು ಬಿದ್ದಿರಲಿ  ಅನ್ನೋ ದೌಲತ್ತಿನ  ‘ತೆವಲುದಾರ’ರಿಗೆಂದೇ ಬಂದಿದೆ ಈ ದಿಂಬು !

ಬಾಲವೊಂದಿದೆ ಅಷ್ಟೇ!

 

 

‘ನನ್ನ ಮುಂದೆ …ಬಾಲ ಆಡಿಸ್ಕೊಂಡು ಬಿದ್ದಿರಲಿ’ ಎಂದೇ ಧಿಮಾಕಿನ ಶ್ರೀಮಂತರು ಹಲಬುತ್ತಾರೆ. ರೊಕ್ಕ ಕೊಟ್ಟು ಇಟ್ಕೊಂಡಿರೋ ಜೀತದ ಆಳುಗಳೇ ಹಾಗೆ ಮಾಡುವುದಿಲ್ಲ. ಅಷ್ಟೆಲ್ಲಾ ಏಕೆ ನಾಯಿನೂ ಇಂತಹವರ ತೆವಲಿಗೆ ಸ್ಪಂದಿಸುವುದಿಲ್ಲ. ಅಂತಿರುವಾಗ ಯಾರು ತಾನೆ ಬಾಲ ಆಡಿಸಿಕೊಂಡು ಬಿದ್ದಿರುತ್ತಾರೆ ಅಲ್ವಾ?

ಹಾಗಂತ ದೌಲತ್ತಿನ ಮಂದಿ ತಮ್ಮ ತೆವಲು ಬಿಟ್ಟಿಲ್ಲ. ಇಂತಹ ‘ತೆವಲುದಾರ’ರಿಗೆಂದೇ ಬಂದಿದೆ. ಬಾಲ ಆಡಿಸಿಕೊಂಡಿರುವ ದಿಂಬು!

 

 

ಈ ದಿಂಬಿಗೆ ಕೂಬೊ ಎಂಬ ಹೆಸರಿದೆ. ಕೊಬ್ಬುಳ್ಳ ಮಂದಿಗೆ ಹೇಳಿ ಮಾಡಿಸಿದ್ದಿರಬೇಕು. ಇದರಲ್ಲಿ ಪುಟ್ಟ ಸಾಫ್ಟ್‍ವೇರ್, ಪುಟ್ಟ ಬ್ಯಾಟರಿ, ಹೆಚ್ಚು ಸದ್ದು ಮಾಡದ ಮೋಟಾರ್ ಎಲ್ಲವೂ ಇದೆ. ಉಳಿದಂತೆ ಸಾಫ್ಟ್ ಕಾಟನ್, ಉಲನ್, ಹಾಗೂ ಸ್ಟೆಚಲಾನ್‍ಗಳಿಂದ ಇದನ್ನು ರೂಪಿಸಲಾಗಿದೆ. ಚಾರ್ಜರ್ ಮೂಲಕ 4-5 ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಸುಮಾರು 5-6 ಗಂಟೆ ಬಾಲ ಆಡಿಸಿಕೊಂಡು ಬಿದ್ದಿರುತ್ತದೆ! ಆ ನಂತರ ಸುಸ್ತಾಗಿ ಸುಮ್ಮನಾಗುತ್ತದೆ. ಯುಎಸ್‍ಬಿ ಕೇಬಲ್ ಮೂಲಕ ಚಾರ್ಜ್ ಮಾಡಬಹುದು. ಮನೆಗೆ ಯಾರಾದರೂ ‘ಅಲ್ಪರು’ ಬಂದರೆ ಅವರೆದರು ಇಂತಹ ಬಾಲ ಆಡಿಸುವ ದಿಂಬುಗಳಿದ್ದಲ್ಲಿ ಮಾಲೀಕನ ಶ್ರೀಮಂತಿಕೆಗೆ ಬೆಲೆ ಬಂದೀತು!ಅಲ್ಲದೆ ಬಾಲ ಇರುವ ಪ್ರಾಣಿಗಳನ್ನು ಮುದ್ದುಮಾಡಿ ಅಭ್ಯಾಸವುಳ್ಳವರಿಗೆ ಇದು ಉತ್ತಮ ಆಟಿಕೆಯಾಗಲಿದೆ.

 

 

ಅಮೆರಿಕಿಗಳ ಅಪೇಕ್ಷೆಗೆ ಜಪಾನೀಯರು ಈ ದಿಂಬು ಅವಿಷ್ಕರಿಸಿದ್ದಾರಂತೆ. ಮುಂದಿನ ಬೇಸಿಗೆಗೆ ಈ ದಿಂಬುಗಳು ಬಿಕರಿಗೆ ಲಭ್ಯ. ಬೆಲೆ 100$ ಮಾತ್ರ.

ಈ ದಿಂಬನ್ನು ಸಂಶೋಧಿಸಿದ ಕಲಾವಿದ?

‘ಬಾಲ’ಕಲಾವಿದ!

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top