ವಿಶೇಷ

ಹೊಸ ವರ್ಷದಲ್ಲಿ ಹುಟ್ಟುವ ಪ್ರಥಮ ಹೆಣ್ಣು ಮಗುವಿಗೆ ಬಿಬಿಎಂಪಿ ನೀಡುತ್ತಿವೆ ಭರ್ಜರಿ ಉಡುಗೊರೆ

ಹೊಸ ವರ್ಷದಲ್ಲಿ ಹುಟ್ಟುವ ಪ್ರಥಮ ಹೆಣ್ಣು ಮಗುವಿಗೆ ಬಿಬಿಎಂಪಿ ನೀಡುತ್ತಿವೆ ಭರ್ಜರಿ ಉಡುಗೊರೆ

 

ಹೆಣ್ಣು ಮನೆಯ ಲಕ್ಷ್ಮಿ ಅಂತಾರೆ ಇದು ಅಪ್ಪಟ ಸತ್ಯ, ಬಿಬಿಎಂಪಿ ಹೆಣ್ಣು ಭ್ರೂಣ ಹತ್ಯೆ ತಡೆಯಲು ವಿವಿಧ ಯೋಜನೆ ಮಾಡುತ್ತ ಬಂದಿದೆ. ಹಾಗೆ ಈಗ ಮತ್ತೊಂದು ಯೋಜನೆ ಜಾರಿಗೆ ತಂದಿದೆ. ಅದು ಏನು ಅಂತೀರಾ ಮುಂದೆ.

 

 

ಈಗಿನ ಕಾಲದಲ್ಲಿ ಹೆಣ್ಣು ಮಗು ಅಂದರೆ ನಿರ್ಲಕ್ಷ್ಯ ಮಾಡುತ್ತಾರೆ. ಈಗಿನ ಹೆಣ್ಣು ಪುರುಷರ ಸರಿ ಸಮಾನರಾಗಿ ಎಲ್ಲ ಸೇವೆಯಲ್ಲೂ ನಿರತಾಗಿದ್ದರೆ. ಪೊಲೀಸ್ ಇಲಾಖೆ, ದೇಶದ ಉತ್ತನ ಹುದ್ದೆಗಳು, ಸೇನೆಯಲ್ಲೂ ಸಹ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಹೆಣ್ಣು ಮಕ್ಕಳ ಏಳ್ಗೆಗಾಗಿ  ಈ ಯೋಜನೆ ಜಾರಿಗೆ ತರಲಾಗಿದೆ.

ಬೆಂಗಳೂರು ಪಾಲಿಕೆ ಆಸ್ಪತ್ರೆಯಲ್ಲಿ ಹೊಸ ವರ್ಷ ಹುಟ್ಟುವ ಪ್ರಥಮ ಹೆಣ್ಣು ಮಗುವಿಗೆ ಅದೃಷ್ಟ ಒಲಿಯಲಿದೆ. ಹೊಸ ವರ್ಷದ ಮಧ್ಯರಾತ್ರಿ 12 ಗಂಟೆಗೆ ಹುಟ್ಟುವ ಮೊದಲ ಮಗುವಿಗೆ ಅಂದರೆ 2018ನೇ ವರ್ಷದ ಮೊದಲ ಹೆಣ್ಣು ಮಗುವಿಗೆ ಬಿಬಿಎಂಪಿ ಮೇಯರ್ 5 ಲಕ್ಷ ರೂ. ಮೊತ್ತದ ಹಣವನ್ನು ಉಡುಗೊರೆ ಕೊಡುವುದಾಗಿ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.

 

 

ಮಗುವಿನ ಹೆಸರಲ್ಲಿ ಮತ್ತು ಬಿಬಿಎಂಪಿ ಆಯುಕ್ತರ ಹೆಸರಿನಲ್ಲಿ ಜಾಯಿಂಟ್ ಅಕೌಂಟ್ ಮಾಡಿಸಿ, ಆ ಖಾತೆಗೆ ಹಣವನ್ನು ಜಮೆ ಮಾಡಲಾಗುತ್ತದೆ. ಆ ಮಗುವಿಗೆ 18 ವರ್ಷವಾದ ನಂತರ ಮಗುವಿನ ಉನ್ನತ ಶಿಕ್ಷಣಕ್ಕೆ ಹಣ ಬಳಕೆ ಮಾಡಿಕೊಳ್ಳಬಹುದು ಎಂದು ಮೇಯರ್ ಸಂಪತ್ ರಾಜ್ ತಿಳಿಸಿದ್ದಾರೆ.

 

 

ಬಹುಮಾನ ಸಿಗುತ್ತೆ ಅಂತ ಆತುರದಲ್ಲಿ ಸಿಜರಿನ್ ಮಾಡುತ್ತಾರೆ ಎಂಬ ಕಾರಣದಿಂದ, ಸಹಜ ಹೆರಿಗೆ ಮೂಲಕ ಹುಟ್ಟುವ ಮಗುವಿಗೆ ಮಾತ್ರ ಈ ಸದಾವಕಾಶ ಲಭಿಸಲಿದೆ. ಸಾಮಾಜಿಕ ಸಮತೋಲನದ ಹಾದಿ ತಪ್ಪಿಸುವ ಹೆಣ್ಣು ಭ್ರೂಣ ಹತ್ಯೆ, ಶಿಶು ಹತ್ಯೆ ಅಂತಹ ಪ್ರಕರಣಗಳು ನಡೆಯುತ್ತಿವೆ ಇದನ್ನು ತಡೆಯಲು ಬಿಬಿಎಂಪಿ ಇಂತಹ ಯೋಜನೆ ಜಾರಿಗೆ ತಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top