ಇತರೆ

ಸಕ್ಕತ್ತಾಗಿ ತೀರ್ಥಹಾಕಿದ್ದ! ಮದವೇರಿ, ಮರಕ್ಕೆ ಡಿಕ್ಕಿ ಹೊಡೆದ , ಆಗ ಶುರುವಾಯ್ತು ಬುಲೆಟ್‍ಟೆಂಪಲ್  !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸಕ್ಕತ್ತಾಗಿ ತೀರ್ಥಹಾಕಿದ್ದ! ಮದವೇರಿ, ಮರಕ್ಕೆ ಡಿಕ್ಕಿ ಹೊಡೆದ , ಆಗ ಶುರುವಾಯ್ತು ಬುಲೆಟ್‍ಟೆಂಪಲ್  !

ಬುಲೆಟ್ ಮಂದಿರ್, ರಾಜಸ್ತಾನದ ಜೋದ್‍ಪುರ ಸಮೀಪ ಬುಲೆಟ್‍ಟೆಂಪಲ್ ಇದೆ..!

ಇಲ್ಲಿ ಬೈಕೇ ದೇವರು. ಅದೇ ಮೂಲ ದೇವರು. ಇದೇ ಉತ್ಸವ ಮೂರ್ತಿ ಎಂದು ಭಾವಿಸಬೇಡಿ. ಇಲ್ಲಿ ಉತ್ಸವ ಇಲ್ಲ. ಅದೆಲ್ಲಕ್ಕಿಂತಲೂ ಅಚ್ಚರಿ ಎಂದರೆ ಮದ್ಯವೇ ತೀರ್ಥ!

 

 

ಇಲ್ಲಿ ಪೂಜಾರಿಯೂ ಇದ್ದಾನೆ. ಬೈಕಿಗೆ ಆರತಿ, ಪೂಜೆ ಮಾಡುತ್ತಾನೆ. ಗಂಧದ ಕಡ್ಡಿ ಹಚ್ಚುತ್ತಾನೆ. ಅದೇನೋ ಮಂತ್ರವನ್ನೂ ಹೇಳುತ್ತಾನೆ. ಬುಲೆಟ್‍ಗೆ ಅಡ್ಡಬೀಳಲು ಸಾಕಷ್ಟು ಸಂಖ್ಯೆಯ ಭಕ್ತರೂ ಬರುತ್ತಾರೆ.

ಕುಚೋದ್ಯವಲ್ಲ – ವಾಸ್ತವ. ರಾಜಸ್ತಾನದ ಜೋದ್‍ಪುರ ಸಮೀಪ ಬುಲೆಟ್‍ಟೆಂಪಲ್ ಇದೆ.

 

 

ಶ್ರೀಮಂತನ ಪುತ್ರನೊಬ್ಬ 1998ರಲ್ಲಿ ಬೈಕ್‍ನಲ್ಲಿ ಬರುವಾಗ ಮರಕ್ಕೆ ಡಿಕ್ಕಿ ಹೊಡೆದು ಅಸುನೀಗಿದ.

ಅದ್ಯಾಕೆ ಡಿಕ್ಕಿ ಹೊಡೆದ?

ಸಕ್ಕತ್ತಾಗಿ ತೀರ್ಥಹಾಕಿದ್ದ! ಅವನ ಜ್ಞಾಪಕಾರ್ಥವಾಗಿ ಈ ಬುಲೆಟ್ ಮಂದಿರ್ ನಿರ್ಮಾಣವಾಗಿದೆ. ಫುಲ್ 350 ಸಿಸಿಯ ಬುಲೆಟ್ ಗಾಡಿ ಪೂಜಿಸಿಕೊಂಡು ನಿಂತಿದೆ. ಆರಂಭದಲ್ಲಿ ಇದು ಶ್ರದ್ಧಾ ಭಕ್ತಿಯ ಕೇಂದ್ರವಾಗಿತ್ತು. ಜ್ಞಾನಿಗಳಿಗೆ ಮೌಢ್ಯದ ಕೇಂದ್ರ ಎನಿಸಿತ್ತು ಅಷ್ಟೇ… ಆದರೆ ಬರ ಬರುತ್ತಾ ಭಕ್ತಿಯ ನೆಪದಲ್ಲಿ ಬೀರ್ ಮಾರಾಟದ ದಂಧೆ ನಡೆಯುತ್ತಿದೆ. ಅದಾದ ಮೇಲೆ ಇದಲ್ವಾ ಎನ್ನುವಂತೆ ಬೀರ್, ವೈನ್, ರಮ್, ಜಿನ್ ಎಲ್ಲಾ ತೀರ್ಥಗಳ ಭರ್ಜರಿ ವ್ಯವಹಾರ ಇಲ್ಲಿ ನಡೆಯುತ್ತಿದೆ.

 

 

ಮದವೇರಿ, ಮರಕ್ಕೆ ಡಿಕ್ಕಿ ಹೊಡೆದ. ಅದೇ ಮಾನಿನಿಯೊಂದಿಗೆ ಗೊಟಕ್ ಎಂದಿದ್ದರೆ ಶ್ರೀಮಂತನಾದ ಅಪ್ಪ ಇಲ್ಲೊಂದು ‘ಮಾಂಸದ ಅಡ್ಡೆಯನ್ನೇ ತೆರೆಯುತ್ತಿದ್ದನೋ ಏನೋ…?!

ಶ್ರೀಮಂತರ ಮಕ್ಕಳು ಸತ್ತರೆ ಹೊಸ ಸಂಸ್ಕೃತಿ/ಪದ್ದತಿಯೇ ಸೃಷ್ಟಿಯಾಗುತ್ತದೆ. ಬಡವರು ಸತ್ತರೆ ಅನಾದಿಯೊಬ್ಬನ ಸಾವಾಗುತ್ತಿತ್ತು. ಸುದ್ದಿಯೂ ಆಗುತ್ತಿರಲಿಲ್ಲ. ಮದ್ಯ ಮಾರಾಟದ ಅಡ್ಡಯೂ ಇಲ್ಲಿರುತ್ತಿರಲಿಲ್ಲ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top