fbpx
cinema

ನಾಲ್ಕು ಭಾಷೆಯ ಕಲಾವಿದರು, ತಂತ್ರಜ್ಞರು ಸೇರಿದಂತೆ 150 ಜನ ಸೇರಿ ಫ್ರಾನ್ಸ್ ನಲ್ಲಿ ಶೂಟಿಂಗ್ ಮಾಡಿದ್ದು ಚಿತ್ರರಂಗದ ಇತಿಹಾಸದಲ್ಲಿ ಮೊದಲು, 80ರಷ್ಟು ಚಿತ್ರೀಕರಣ ಮುಗಿಸಿದ ‘ಬಟರ್‍ಫ್ಲೈ’

ನಾಲ್ಕು ಭಾಷೆಯ ಕಲಾವಿದರು, ತಂತ್ರಜ್ಞರು  ಸೇರಿದಂತೆ 150 ಜನ ಸೇರಿ ಫ್ರಾನ್ಸ್ ನಲ್ಲಿ ಶೂಟಿಂಗ್

ಮಾಡಿದ್ದು  ಚಿತ್ರರಂಗದ ಇತಿಹಾಸದಲ್ಲಿ ಮೊದಲು, 80ರಷ್ಟು ಚಿತ್ರೀಕರಣ ಮುಗಿಸಿದ ‘ಬಟರ್‍ಫ್ಲೈ’

 

 

ಶೇಕಡ 80ರಷ್ಟು ಚಿತ್ರೀಕರಣ ಮುಗಿಸಿದ ಬಟರ್‍ಫ್ಲೈ    ಬಾಲಿವುಡ್‍ನಲ್ಲಿ ಹಿಟ್ ಆಗಿ ರಾಷ್ಟ್ರಪ್ರಶಸ್ತಿ ಗಳಿಸಿದ ಕ್ವೀನ್ ಚಿತ್ರವು  ನಾಲ್ಕು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ನಿರ್ಮಾಪಕರು ಒಬ್ಬರಾಗಿದ್ದು, ಏಕಕಾಲಕ್ಕೆ  ಫ್ರಾನ್ಸ್ ದೇಶದಲ್ಲಿ  ಎಲ್ಲಾ ಭಾಷೆಯ ಚಿತ್ರೀಕರಣ ನಡೆಸಿದ್ದು ವಿಶೇಷವಾಗಿದೆ.  42 ದಿನಗಳ ಕಾಲ ದೂರದ  ಸ್ಥಳದಲ್ಲಿ  ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಳ್ಳಲು ತಂಡವು ಮಾದ್ಯಮದವರನ್ನು ಭೇಟಿ ಮಾಡಿತು. ಕನ್ನಡ-ತಮಿಳು ಭಾಷೆಗೆ ನಿರ್ದೇಶನ ಮಾಡುತ್ತಿರುವ ರಮೇಶ್‍ಅರವಿಂದ್  ಎಂದಿನಂತೆ ಖುಷಿಯಿಂದ ಮಾತುಗಳನ್ನು ಹಂಚಿಕೊಂಡ ಪರಿ ಹೀಗಿತ್ತು:. ಅಷ್ಟು  ದಿವಸದಲ್ಲಿ ಸುಸ್ವಾಗತ, ವಂದನೆಗಳು ಇವುಗಳನ್ನು ಫ್ರಂಚ್ ಭಾಷೆಯಲ್ಲಿ ಹೇಗೆ ಹೇಳಬೇಕೆಂದು ಕಲಿತುಕೊಂಡಿದ್ದು ಸಾಧನೆ. ನಾಲ್ಕು ಭಾಷೆಯ ಕಲಾವಿದರು, ತಂತ್ರಜ್ಘರು  ಸೇರಿದಂತೆ 150 ಜನರನ್ನು ಕರೆದುಕೊಂಡು ಹೋಗಿದ್ದು ಚಿತ್ರರಂಗದ ಇತಿಹಾಸದಲ್ಲಿ ಮೊದಲಯನೆದು ಎನ್ನಬಹುದು. ಕನ್ನಡದಲ್ಲಿ ಪಾರುಲ್‍ಯಾದವ್, ತಮಿಳಿಗೆ ಕಾಜಲ್‍ಅಗರ್‍ವಾಲ್, ತಲುಗು ತಮನ್ನಭಾಟಿಯಾ, ಮಲಯಾಳಂನಲ್ಲಿ  ಮಂಜುಮನೋಹರ್ ನಟಿಸುತ್ತಿದ್ದಾರೆ. ಮೈನಸ್ ಐದು ಉಷ್ಣಾಂಶದಲ್ಲಿ ಆಕೆ ನಟಿಸಿದ್ದು  ನೋಡಿದಾಗ ಅವರ ತಾದಾತ್ಮ ಗೊತ್ತಾಯಿತು ಸತ್ಯಹೆಗಡೆ ಛಾಯಗ್ರಹಣ ಕೆಲಸ ನೋಡಿದಾಗ ನಿಜಕ್ಕೂ ಅಚ್ಚರಿ ಉಂಟು ಮಾಡಿತು. ಗೋಕರ್ಣ, ಫ್ರಾನ್ಸ್ ಕಡೆಗಳಲ್ಲಿ ಚಿತ್ರೀಕರಣ ಮುಗಿಸಲಾಗಿ, ಮೂರು ವಾರಗಳ ಚಿತ್ರೀಕರಣ ಬಾಕಿ ಇದೆ. ಮೇ 11ರಂದು ಬರುವ ಯೋಚನೆ ಇದೆ.

 

 

ಪಾರ್ವತಿ ಹೆಸರಿನಲ್ಲಿ ಗೋಕರ್ಣದಿಂದ ವಿದೇಶಕ್ಕೆ ಗಂಡನೊಂದಿಗೆ ಸೇರಿಕೊಳ್ಳಲು ಅಲ್ಲಿಗೆ ಹೋದಾಗ ಅಲ್ಲಿನ ವಾತವರಣದಿಂದ ಏನೆಲ್ಲಾ ಅನಾಹುತಗಳು ಆಗುತ್ತವೆ, ಅವೆಲ್ಲಾವನ್ನು ಎದುರಿಸಿ ಹೇಗೆ ಹೊರಗೆ ಬರುತ್ತೇನೆಂದು ಹೇಳಲಾಗಿದೆ. ಹೆಣ್ಣು ಸಬಲಳು ಎಂಬುದನ್ನು ಚೆನ್ನಾಗಿ ತೋಸಿದ್ದಾರೆ. ಪೂರ್ಣ ಪ್ರಮಾಣದ ನಾಯಕಿ-ನಾಯಕ ಎರಡನ್ನು ನಿಭಾಯಿಸಿರುವುದಾಗಿ ಖುಷಿ ಹಂಚಿಕೊಂಡರು  ಪಾರುಲ್‍ಯಾದವ್.

 

 

ವಿದೇಶದಲ್ಲಿ ಚಿತ್ರೀಕರಣ ನಡೆಸಿದ್ದು ನನ್ನ ಕ್ಯಾರಿಯಲ್ಲೆ ಮರೆಯಲು ಸಾಧ್ಯವಿಲ್ಲ. ರಮೇಶ್ ಅವರನ್ನು   ಚಿತ್ರರಂಗವು ತ್ಯಾಗರಾಜ ಎನ್ನುತ್ತಾರೆ. ಸೆಟ್‍ನಲ್ಲಿ  ನಾಕಂಡಂತೆ ಅವರು ಸಹನಮೂರ್ತಿ ಅಂತ ಕರೆಯಬಹುದು  ಎಂದು ಹೇಳಿಕೊಂಡಿದ್ದು ಛಾಯಗ್ರಾಹಕ ಸತ್ಯಾಹೆಗಡೆ. ಪಾರುಲ್‍ರನ್ನು  ನೋಡಿಕೊಂಡು ಸಂಭಾಷಣೆ ಬರೆಯಲಾಗಿದೆ ಅಂತ ಮಮತಾಸಾಗರ್ ಹೇಳಿದರು. ನಿರ್ಮಾಪಕ ಮನುಕುಮಾರ್ ಚಿತ್ರ ಚೆನ್ನಾಗಿ ಮೂಡಿಬರುತ್ತಿದೆ ಎಂದಷ್ಟೇ ಹೇಳಿದರು. ಹಿಂದಿಗೆ ಸಂಗೀತ ಸಂಯೋಜಿಸಿದ್ದ ಅಮಿತ್‍ತ್ರಿವೇದಿರವರು ಜಯಂತ್‍ಕಾಯ್ಕಣಿ ರಚನೆಯ ಆರು ಹಾಡುಗಳಿಗೆ  ಹೊಸ ರಾಗಗಳನ್ನು  ಒದಗಿಸುತ್ತಿದ್ದಾರಂತೆ. ಇದಕ್ಕೂ ಮುನ್ನ ಫ್ರಾನ್ಸ್ ದೇಶದಲ್ಲಿ ಚಿತ್ರೀಕರಣದ ಮೇಕಿಂಗ್‍ನ್ನು  ತೋರಿಸಲಾಯಿತು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top