ತಿಂಡಿ ತೀರ್ಥ

ಚಪಾತಿ ಮತ್ತು ಅನ್ನದ ಜೊತೆ ನಂಚಿಕೊಂಡು ತಿನ್ನೋಕೆ ಸಕ್ಕತ್ತಾಗಿರುತ್ತೆ ಚಿಕನ್ ಉಪ್ಪಿನಕಾಯಿ !

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಚಿಕನ್ ಉಪ್ಪಿನಕಾಯಿ:

 

ಬೇಕಾಗುವ ಪದಾರ್ಥ :

ಚಿಕನ್ ಅರ್ಧ ಕೆಜಿ

ಎಣ್ಣೆ

ಅರಿಶಿಣ 1 ಚಮಚ

ಉಪ್ಪು ರುಚಿಗೆ ಬೇಕಾದಷ್ಟು

ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ

ಕೆಂಪು ಮೆಣಸಿನ ಪುಡಿ 1 ಚಮಚ

ಧನಿಯಾ ಪುಡಿ 1 ಚಮಚ

ಕೊತಂಬರಿ ಸೊಪ್ಪು

ಕರಿಬೇವು

ಗರಂ ಮಸಾಲಾ ಪುಡಿ 1 ಚಮಚ

ಬೆಳ್ಳುಳ್ಳಿ  ಎಸಳು 4

ಜೀರಿಗೆ 1 ಚಮಚ

ಸಾಸಿವೆ

 


 

ಮಾಡುವ ವಿಧಾನ:

ಮೊದಲಿಗೆ ಚೆನ್ನಾಗಿ ಚಿಕನ್ ತೊಳೆದುಕೊಂಡು ಅದಕ್ಕೆ ಸ್ವಲ್ಪ ಅರಿಶಿನ ಮತ್ತು ಉಪ್ಪನ್ನು ಹಾಕಿ ಅದು ಕಂದು ಬಣ್ಣ ಬರುವವರಿಗೆ ಚೆನ್ನಾಗಿ ಬಿಸಿ ಎಣ್ಣೆಯಲ್ಲಿ ಕರಿದು ಪಕ್ಕದಲ್ಲಿ ಇಟ್ಟುಕೊಳ್ಳಿ

 

ನಂತರ ಅದೇ  ಬಾಣಲೆಯಲ್ಲಿ ಇರುವಂತ  ಎಣ್ಣೆಯನ್ನು ಬಿಸಿಮಾಡಿಕೊಂಡು ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ,ಕೆಂಪು ಮೆಣಸಿನ ಪುಡಿ,ಧನಿಯಾ ಪುಡಿ ,ಗರಂ ಮಸಾಲಾ ಪುಡಿ ಮತ್ತು ಉಪ್ಪನ್ನು ಹಾಕಿ ,ನಂತರ ಇದನ್ನು  ಕರಿದುಕೊಂಡ ಚಿಕನ್ ಜೊತೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

 

ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ,ಬೆಳ್ಳುಳ್ಳಿ  ಎಸಳು,ಜೀರಿಗೆ,ಸಾಸಿವೆ ,ಕೊತ್ತಂಬರಿ ಸೊಪ್ಪು  ಮತ್ತು ಕರಿಬೇವಿನಿಂದ ಚೆನ್ನಾಗಿ ಒಗ್ಗರಣಿ ಮಾಡಿಕೊಂಡು ,ಈ ಒಗ್ಗರಣಿಯನ್ನು ಕರಿದುಕೊಂಡ ಚಿಕನ್ ಜೊತೆ ಸೇರಿಸಿ .

 

ಬಹಳ ಸುಲಭವಾಗಿ ಮಾಡುವಂತ ಚಿಕನ್ ತಿಂಡಿ ಇದು  ,ಇದನ್ನು ಚಪಾತಿ ಮತ್ತು ಅನ್ನದ ಜೊತೆ ತಿನ್ನಲು ಚೆನ್ನಾಗಿರುತ್ತೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top