fbpx
ಮನೋರಂಜನೆ

ದರ್ಶನ್ ಐವತ್ತೊಂದನೇ ಚಿತ್ರ ಯಾವಾಗ ಶುರು?

ದರ್ಶನ್ ಐವತ್ತೊಂದನೇ ಚಿತ್ರ ಯಾವಾಗ ಶುರು?

 

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರೋವಾಗಲೇ ಅವರ ಮುಂದಿನ ಚಿತ್ರ ಯಾವುದೆಂಬ ಬಗ್ಗೆ ಸದಾ ಒಂದು ಕುತೂಹಲ ಇದ್ದೇ ಇರುತ್ತದೆ. ಇದೀಗ ದರ್ಶನ್ ಕುರುಕ್ಷೇತ್ರ ಚಿತ್ರದಲ್ಲಿ ಮುಳುಗಿ ಹೋಗಿದ್ದಾರೆ. ಅದಾದ ನಂತರ ಶುರುವಾಗಲಿರೋ ಅವರ ಚಿತ್ರ ಯಾವುದೆಂಬುದರ ಬಗ್ಗೆ ಪಕ್ಕಾ ಉತ್ತರವೂ ಸಿಕ್ಕಿದೆ!
ದರ್ಶನ್ ಅವರ ಐವತ್ತೊಂದನೇ ಚಿತ್ರ ಖ್ಯಾತ ನಿರ್ದೇಶಕ ಬಿ ಸುರೇಶ್ ಅವರ ಮೀಡಿಯಾ ಹೌಸ್ ಸಂಸ್ಥೆಯಲ್ಲಿ ತಯಾರಾಗಲಿದೆ. ಪಿ. ಕುಮಾರ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದೆ.

 

ಅಷ್ಟಕ್ಕೂ ಕುರುಕ್ಷೇತ್ರ ಚಿತ್ರ ನವೆಂಬರ್ ತಿಂಗಳಲ್ಲಿಯೇ ಮುಕ್ತಾಯವಾಗೋದಾಗಿ ಮೊದಲು ಪ್ಲ್ಯಾನ್ ಆಗಿತ್ತು. ಆದರೆ ಬಿಗ್‌ಬಜೆಟ್ ಚಿತ್ರವಾದ್ದರಿಂದ ಕೊಂಚ ತಡವಾಗಿದೆ. ಸದ್ಯ ಕುರುಕ್ಷೇತ್ರಕ್ಕಾಗಿ ದರ್ಶನ್ ಗಡ್ ಮೀಸೆ ತೆಗೆದಿರೋದರಿಂದ ಮತ್ತದು ಚಿಗುರಲು ಇಪ್ಪತ್ತು ದಿನವಾದರೂ ಬೇಕಾಗಿರೋದರಿಂದ ಕುರುಕ್ಷೇತ್ರ ಕಂಪ್ಲೀಟಾಗಿ ಇಪ್ಪತ್ತು ದಿನವಾದ ಮೇಲೆ ಹೊಸಾ ಚಿತ್ರ ಆರಂಭವಾಗಲಿದೆಯಂತೆ. ಅಂತೂ ಬಿ. ಸುರೇಶ್ ಮತ್ತು ದರ್ಶನ್ ಕಾಂಬಿನೇಷನ್ನಿನ ಈ ಚಿತ್ರ ಹೊಸಾ ವರ್ಷದಾರಂಭದಲ್ಲೇ ಶುರುವಾಗಲಿರೋದು ಸತ್ಯ!
ಇದು ಹೊಸಾ ವಿಚಾರವಾದರೆ ಇದಕ್ಕಿಂತಲೂ ಅಚ್ಚರಿಯ ವಿಚಾರ ಮತ್ತೊಂದಿದೆ. ಈ ಚಿತ್ರಕ್ಕೆ ಕಥೆ ಬರೆದಿರೋದು ಸಂಗೀತ ನಿರ್ದೇಶನ ವಿ ಹರಿಕೃಷ್ಣ ಅವರು ಅನ್ನೋ ಸುದ್ದಿ ಕೇಳಿಬರುತ್ತಿದೆ.

 

 

ಸಂಗೀತ ನಿರ್ದೇಶನ ಮಾಡಿಕೊಂಡು ಮತ್ಯಾವುದರತ್ತಲೂ ತಿರುಗಿ ನೋಡೋವಷ್ಟು ಪುರಸೊತ್ತಿಲ್ಲದ ಹರಿಕೃಷ್ಣ ಕಥೆ ಬರೆದರಾ ಅಂತ ಅಂತೊಂದು ಅಚ್ಚರಿ ಕಾಡೋದು ಸಹಜವೇ. ಆದರೆ ಹರಿಕೃಷ್ಣ ಅವರನ್ನು ಹತ್ತಿರದಿಂದ ಬಲ್ಲವರಿಗೆ ಈ ವಿಚಾರ ಅಂಥಾದ್ದೇನೂ ಆಶ್ಚರ್ಯ ಹುಟ್ಟಿಸೋದಿಲ್ಲ. ಅದಕ್ಕೆ ಕಾರಣ ಅವರಿಗಿರೋ ವಿಪರೀತ ಓದಿನ ಹುಚ್ಚು!

 

ಹರಿಕೃಷ್ಣ ಕೊಂಚ ಬಿಡುವು ಸಿಕ್ಕರೂ ಪುಸ್ತಕಗಳನ್ನು ಓದೋದರಲ್ಲಿ ತಲ್ಲೀನರಾಗುತ್ತಾರಂತೆ. ಅವರೆಲ್ಲೇ ಹೋದರೂ ಇತರೇ ವಸ್ತುಗಳ ಜೊತೆ ಪುಸ್ತಕ ಇದ್ದೇ ಇರುತ್ತದೆ. ಅವರ ಕಚೇರಿ ಮತ್ತು ಮನೆಯ ತುಂಬಾ ಪುಸ್ತಕದ ಭಂಡಾರವೇ ತುಂಬಿಕೊಂಡಿದೆಯಂತೆ. ಹೀಗೆ ಬಹು ಕಾಲದಿಂದ ಸಾಹಿತ್ಯದ ಸಾಂಗತ್ಯ ಹೊಂದಿರೋ ಹರಿಕೃಷ್ಣ ಅವರಿಗೆ ಸಾಹಿತ್ಯದಲ್ಲಿ ಹಿಡಿತವಿದೆ. ಸಂಗೀತ ನಿರ್ದೇಶನದ ಜೊತೆಗೆ ಚಿತ್ರವೊಂದರ ಇತರೇ ವಿಚಾರಗಳ ಬಗೆಗೂ ತಿಳಿದುಕೊಳ್ಳೋ ಮನಸಿನ ಹರಿಕೃಷ್ಣ ದರ್ಶನ್ ಅವರ ಐವತ್ತೊಂದನೇ ಚಿತ್ರಕ್ಕೆ ಕಥೆ ಬರೆದಿರೋದು ಪಕ್ಕಾ ಎಂದೇ ಒಂದು ಮೂಲ ಹೇಳುತ್ತಿದೆ. ಇನ್ನು ಕೆಲವರು ಪಿ.ಕುಮಾರ್ ಬರೆದುಕೊಂಡುಬಂದಿದ್ದ ಕಥೆಗೆ ಹರಿಕೃಷ್ಣ ಒಂದಷ್ಟು ಇನ್ ಪುಟ್ಸ್ ನೀಡಿದ್ದಾರೆ ಎನ್ನುತ್ತಿದ್ದಾರೆ.

 

 

ಅಷ್ಟಕ್ಕೂ ಅವರು ಹಾಡಿಗೆ ಸಂಗೀತ ಸಂಯೊಜನೆ ಮಾಡುವಾಗ ಪಲ್ಲವಿಯ ಸಾಲುಗಳನ್ನು ಅವರೇ ಬರೆದಿರುತ್ತಾರಂತೆ. ಅನೇಕ ಬಾರಿ ಹಾಡು ಬರೆಯುವವರು ಬೇರೆಸಾಲುಗಳನ್ನಷ್ಟೇ ಮುಂದುವರೆಸುತ್ತಾರೆ. ಹೀಗೆ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರೂ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿರೋ, ಆ ಬಗ್ಗೆ ವಿಪರೀತ ಓದಿಕೊಂಡಿರೋ ಹರಿಕೃಷ್ಣ ಅವರಿಂದ ಖಂಡಿತವಾಗಿಯೂ ಗಟ್ಟಿ ಕಥೆಯೊಂದನ್ನು ನಿರೀಕ್ಷಿಸ ಬಹುದು. ಯಾಕೆಂದರೆ ಈವತ್ತಿಗೆ ಚಿತ್ರರಂಗದಲ್ಲಿರೋ ಒಂದಷ್ಟು ಮಂದಿಗೆ ಸಾಹಿತ್ಯದ ಗಂಧ ಗಾಳಿಯಿಲ್ಲ. ಕನ್ನಡದಲ್ಲಿ ಕಥೆಗಳಿಲ್ಲ ಎಂಬ ಭ್ರಮೆಯನ್ನೇ ನಂಬಿಕೊಂಡು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಬೇರೆ ಭಾಷೆಗಳ ಚಿತ್ರಗಳನ್ನು ನೋಡಿ ಭಟ್ಟಿ ಇಳಿಸೋದೇ ಕಥಾ ಪಾಂಡಿತ್ಯ, ಕಸುಬುದಾರಿಕೆ ಎಂಬಂತಾಗಿದೆ. ಆದರೆ ಶ್ರೇಷ್ಠ ಎಂಬಂಥಾ ಚಿತ್ರಗಳ ಕಥೆ ಹುಟ್ಟಿದ್ದು ಆಯಾ ಭಾಷೆಗಳ ಸಾಹಿತ್ಯ ಶ್ರೀಮಂತಿಕೆಯಿಂದ ಎಂಬ ಸತ್ಯದ ಅರಿವು ಅಂಥವರಿಗಿಲ್ಲ.
ಇಂಥಾ ವಾತಾವರಣದಲ್ಲಿ ಸಾಹಿತ್ಯದೊಂದಿಗೆ ಒಡನಾಟವಿಟ್ಟುಕೊಂಡಿರೋ ಹರಿಕೃಷ್ಣ ಅವರ ಕಥೆಯ ಬಗ್ಗೆ ಒಂದಷ್ಟು ನಿರೀಕ್ಷೆಗಳನ್ನಿಟ್ಟುಕೊಳ್ಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top