ವಿಶೇಷ

ಎಲೆ ಹೆಣ್ಣೇ’ ಎಂದರೆ ಈಕೆಗೆ ಕೋಪಬಾರದು… ಏಕೆಂದರೆ ಈಕೆ ಧರಿಸಿರುವುದು ಎಲೆಗಳನ್ನೇ!

ಎಲೆ ಹೆಣ್ಣೇ’ ಎಂದರೆ ಈಕೆಗೆ ಕೋಪಬಾರದು… ಏಕೆಂದರೆ ಈಕೆ ಧರಿಸಿರುವುದು ಎಲೆಗಳನ್ನೇ!

ಹಾಗಾದರೆ ಇವಳು ‘ಆದಿ ಮಾನವಳಾ?’

 

 

ಅಲ್ಲ. ಪತ್ರೆಗಳ ಪೆಣ್ಣು…

ಯಾಕೆ ಇವಳಿಗೆ ಬಟ್ಟೆ ಗತಿಯಿಲ್ಲವಾ?

 

 

ಇದೆ ರೀ…! ಆದರೆ ಶೋಕಿ ಬಿಡಬೇಕಲ್ಲಾ… ತನ್ನ ಸ್ಟೈಲ್‍ಗಾಗಿ ಈಕೆ ಎಲೆ ಧರಿಸಿಕೊಂಡು ಅಡ್ಡಾಡಿದ್ದಾಳೆ. ಅಂದಹಾಗೆ ಈ ಎಲೆ ಡ್ರೆಸ್ ಸುಖಾ ಸುಮ್ಮನೆ ಆಗಿದ್ದರೂ ಇವಳೊಂದಿಗೆ ಇನ್ನೂ ನಾಲ್ವರು ಕೂಡಿ 6 ತಿಂಗಳಲ್ಲಿ ಎಲೆ ಆಯ್ದು, ಜೋಪಾನ ಮಾಡಿ, ಗೌನು ಹೆಣೆದಿದ್ದಾರೆ. ಪೂರಾ ಹಳದಿ ಎಲೆಗಳೇ ಇಲ್ಲಿ ಕಂಡಾವು.

 

 

ಹಸಿರೆಲೆಗಿಂತಲೂ ಹಣ್ಣಾದ ಹಳದಿ ಏಕೆ ಎಂದು ಕೇಳಿದರೆ ‘ಹಸಿರು ಎಲೆಗಳು ನನ್ನಂತೆ ಬಣ್ಣ ಬದಲಿಸುತ್ತವೆ!’ ಬಣ್ಣ ಕಳೆದುಕೊಂಡಿರುವ ಹಳದಿ ಎಲೆಗಳೇ ಶ್ರೇಷ್ಠ ಎನ್ನುತ್ತಾಳೆ.

‘ಯಲ್ಲೋ… ಯಲ್ಲೋ… ಡರ್ಟಿ ಫೆಲೋ…’ ಎಂದರೆ ಏನುಗತಿ? ‘ನಾನು ಫೆಲೋ ಅಲ್ಲ.. ಫೆಮಿನಾ’ ಎನ್ನುತ್ತಾಳೆ ಈ ಮಿಟಕುಲಾಡಿ.

 

 

ಅಂದಹಾಗೆ ಈ ಡ್ರಸ್ ಧರಿಸಿ ಅಡ್ಡಾಡುವುದೇ ಆನಂದ ಎನ್ನುತ್ತಾಳೆ. ಅಡ್ಡಾಡುವಾಗ ಮೇಕೆ ಇವಳ ಗೌನಿಗೆ ಬಾಯಿ ಹಾಕಿದರೆ ಪರಮಾನಂದ ಎನ್ನುತ್ತಾರೆ ಪಡ್ಡೆಗಳು!

ಚೀನಾದ ಹೀಫಿ ವಿಶ್ವವಿದ್ಯಾಲಯದಲ್ಲಿ ಅಂತಹ ಸೀನೇ ಇಲ್ಲವೆನ್ನುತ್ತಾಳೆ ‘ಎಲೆ ಹೆಣ್ಣು’

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top