fbpx
ಕಿರುತೆರೆ

ಬಿಗ್’ಬಾಸ್ ಮನೆಗೆ ಓಟು ಕೇಳಲು ಬಂದ್ರು ರಾಜಕೀಯ ಪುಡಾರಿಗಳು!!

ಬಿಗ್’ಬಾಸ್ ಮನೆಗೆ ಓಟು ಕೇಳಲು ಬಂದ್ರು ರಾಜಕೀಯ ಪುಡಾರಿಗಳು!!

 

 

ಹತ್ತು ವರಗಳನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್ ಬಾಸ್ ಸೀಸನ್ 5 ದಿನೇ ದಿನೇ ರಂಗೇರುತ್ತಿದೆ. ಈಗ ಬಿಗ್ ಬಾಸ್ ಮನೆಯೊಳಗೇ ರಾಜಕಾರಣಿಗಳು ಅಧಿಕಾರದ ಚುಕ್ಕಾಣಿ ಇಡಿಯಲು ಮತಯಾಚನೆ ಮಾಡುತ್ತಿದ್ದಾರೆ. ಹೌದು ಸ್ಪರ್ಧಿಗಳಿಗೆ ಪ್ರಜಾಪ್ರಭುತ್ವದ ಮಹತ್ವ ತಿಳಿಸಲು ‘ಪ್ರಜಾರಾಜ್ಯ’ ಟಾಸ್ಕ್ ನೀಡಲಾಗಿದೆ.

 

 

ಇದರಂತೆ ಮನೆಯ ಸದಸ್ಯರನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದು ದಿವಾಕರ್ ನೇತೃತ್ವದ ಯುವಪಕ್ಷದಲ್ಲಿ ಚಂದನ್‌‌, ನಿವೇದಿತಾ, ರಿಯಾಜ್ ಇದ್ದರೆ, ಶ್ರುತಿ ನೇತೃತ್ವದ ಶಾಂತಿಕ್ರಾಂತಿ ಪಕ್ಷದಲ್ಲಿ ಜೆಕೆ, ಅನುಪಮಾ, ಹಾಗೂ ಕೃಷಿ ಇದ್ದರು. ಎರಡು ಪಕ್ಷದವರು ತಮ್ಮ ತಮ್ಮ ಚುನಾವಣಾ ಪ್ರಣಾಳಿಕೆಗಳನ್ನು ಸಿದ್ಧಪಡಿಸಿಕೊಂಡು ಪ್ರಚಾರವನ್ನು ನಡೆಸಬೇಕಿತ್ತು. ಇವರು ಮಾಡಿದ ಚಟುವಟಿಕೆಗಳನ್ನು ಜಯ ಶ್ರೀನಿವಾಸನ್ ಮತ್ತು ಸವೀರಾಚಾರ್ಯ ಸೀಕ್ರೆಟ್ ರೂಮಿನಲ್ಲಿ ಕೂತು ನೋಡುತ್ತಾ ಮಜಾ ತೆಗೆದುಕೊಳ್ಳುತ್ತಿದ್ದರು.

 

 

 

ಎರಡೂ ಪಕ್ಷಗಳಿಗೆ ಪಕ್ಷದ ನಿಧಿ(ದುಡ್ಡು)ಯಾಗಿ ಚುನಾವಣೆಗೆ ಖರ್ಚು ಮಾಡಲು ಎರಡೂ ಪಕ್ಷದವರಿಗೆ ತಲಾ 5 ಲಕ್ಷ ಕೊಟ್ಟಿರುವ ‘ಬಿಗ್ ಬಾಸ್’ ಬಹುಮತಕ್ಕೆ ಕನಿಷ್ಠ 5 ಸದಸ್ಯರ ಬೆಂಬಲ ಇರಬೇಕೆಂದು ತಿಳಿಸಿದ್ದಾರೆ. ಆದರೆ ಎರಡೂ ತಂಡಗಳಲ್ಲೂ ಕೇವಲ ನಾಲ್ವರು ಸದಸ್ಯರು ಇರೋದ್ರಿಂದ ಮತ್ತೊಂದು ಪಕ್ಷದ ಒಬ್ಬರು ಸದಸ್ಯರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳಲು ಪ್ರಯತ್ನಿಸಬೇಕು.. ಯಾವ ಪಕ್ಷ ಬಹುಮತ ಪಡೆಯಲಿದೆ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ಕಾದು ನೋಡಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top