fbpx
ಮನೋರಂಜನೆ

ಹೊಂಬಣ್ಣ ಚಿತ್ರದ ನಾಯಕನಿಂದ ಯುವತಿಯ ಮೇಲೆ ಅತ್ಯಾಚಾರ? ಪರಾರಿಯಾದ ನಟ: ಯುವತಿ ಕಂಗಾಲು

ಹೊಂಬಣ್ಣ ಚಿತ್ರದ ನಾಯಕನಿಂದ ಯುವತಿಯ ಮೇಲೆ ಅತ್ಯಾಚಾರ?ಪರಾರಿಯಾದ ನಟ: ಯುವತಿ ಕಂಗಾಲು

 

 

ಅವಕಾಶಕೊಡುವುದಾಗಿ ಹೇಳಿಕೊಂಡು ನಟಿಯರಿಗೆ ಲೈಂಗಿಕ ಕಿರುಕುಳ ಕೊಡುವ ಅನೇಕ ಪ್ರಕರಣಗಳು ಇತ್ತೀಚಿಗೆ ಆಚೆ ಬರುತ್ತಿವೆ. ಈಗ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು ಆದರೆ ಇದು ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದು ಇನ್ನೂ ಗೊತ್ತಾಗಬೇಕಿದೆ. ಹೌದು ಕನ್ನಡ ಚಿತ್ರರಂಗದ ಯುವ ನಟನ ಮೇಲೆ ಈ ರೀತಿ ಆರೋಪವನ್ನ ಯುವತಿಯೊಬ್ಬಳು ಮಾಡಿದ್ದಾಳೆ.

 

 

‘ಹೊಂಬಣ್ಣ’ ಚಿತ್ರದ ನಾಯಕ ಸುಬ್ರಹ್ಮಣ್ಯ ವಿರುದ್ಧ ಆರೋಪ ಕೇಳಿಬಂದಿದ್ದು, ಕೂಲ್ ಡ್ರಿಂಕ್ಸ್ ನಲ್ಲಿ ಮತ್ತು ಬರೋ ಔಷಧ ಬೆರೆಸಿ ಅತ್ಯಾಚಾರ ಎಸಗಿದ್ದಾನೆ ಸಂತ್ರಸ್ತ ಯುವತಿ ಬಸವನಗುಡಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಯುವತಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಏರುತ್ತಿದ್ದಂತೆ ಬೆಂಗಳೂರಿನಿಂದ ಪರಾರಿಯಾಗಿರುವ ಆರೋಪಿ ಸುಬ್ರಮಣ್ಯ ಕಣ್ಮರೆಯಾಗಿದ್ದಾನೆ.

 

 

“2 ವರ್ಷಗಳಿಂದ ಸುಬ್ರಮಣ್ಯನ ಪರಿಚಯವಿದೆ, ಆತ ನನ್ನ ಕುಟುಂಬದವರ ಜೊತೆ ಮಾತನಾಡಿ ನನ್ನನ್ನು ಮದುವೆಯಾಗುವುದಾಗಿ ಹೇಳಿದ್ದ.. ಈ ವಿಷಯ ಆತನ ಕುಟುಂಬಕ್ಕೂ ಗೊತ್ತಿತ್ತು. ನನ್ನ ಸಿನಿಮಾ(ಹೊಂಬಣ್ಣ) ಇದೇ ಜುಲೈ 7 ರಂದು ರಿಲೀಸ್ ಆಗುತ್ತೆ ಆ ನಂತರ ನನ್ನ ಮದುವೆಯಾಗುತ್ತೇನೆ ಎಂದು ಹೇಳಿದ್ದ. ಆದರೆ ಸಿನಿಮಾ ಬಿಡುಗಡೆಯಾದ ಮೇಲೆ ನಮ್ಮ ಮನೆಯ ಗೃಹಪ್ರವೇಶ ಮೊದಲು ಆಗಲಿ ಆನಂತರ ಆಮೇಲೆ ಮದುವೆಯಾಗೋಣ ಎಂದು ಹೇಳಿ ಮದುವೆಯನ್ನು ಪದೇ ಪದೇ ಮುಂದೂಡುತ್ತಿದ್ದ”

“ನವೆಂಬರ್ 1ನೆ ತಾರೀಕಿನಂದು ನಮ್ಮ ಅಕ್ಕನ ಮನೆಯಲ್ಲಿ ಪಾರ್ಟಿ ಇದೇ ಎಂದು ಸುಳ್ಳು ಹೇಳಿ ಅವನ ರೂಮಿಗೆ ಕರೆದುಕೊಂಡು ಹೋದ ಸುಬ್ರಮಣ್ಯ ನನಗೆ ಕುಡಿಯಲು ಜ್ಯುಸ್ ಕೊಟ್ಟಿದ್ದ ಆನಂತರ ನನಗೆ ಪ್ರಜ್ಞೆ ತಪ್ಪಿತು, ಮತ್ತೆ ಪ್ರಜೆನೆ ಬಂದಾಗ ನನ್ನ ಮೈಮೇಲೆ ಬಟ್ಟೆ ಇರಲಿಲ್ಲ. ಆತ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ ಎಂದು ಗೊತ್ತಾಯಿತು. ಇದನ್ನು ಪ್ರಶ್ನಿಸಿದ್ದಕ್ಕೆ ನಾವಿಬ್ರು ಮದುವೆ ಆಗೋರು ಅಲ್ವಾ ಏನಾಗಲ್ಲ ಬಿಡು ಎಂದು ಹೇಳಿದ್ದ.”

 

 

 

” ಈಗ ನನ್ನನ್ನು ಮಾಡುವೆ ಮಾಡಿಕೊ ಎಂದು ಕೇಳಿದರೆ, ನನಗೆ ನೀನು ಬೇಡ, 20 ಲಕ್ಷ ಬಂಡವಾಳ ಹಾಕಿ ಸಿನಿಮಾ ತೆಗೆಯುವಂತಹ ಹುಡುಗಿ ಬೇಕು ನೀವು ಬಡವರು ನಿನ್ನಿಂದ ಅದು ಆಗಲ್ಲ ಎಂದು ಹೇಳಿದ್ದಾನೆ. ಇದು ಮಾತ್ರವಲ್ಲದೆ ನನಗೆ ಪರಿಚಯವಿರುವ ಬಂದರೆ ಅವರ ಜೊತೆ ಸ್ವಲ್ಪ ಕೋ ಆಪರೇಟ್ ಮಾಡು ಎಂದೂ ಕೂಡ ಹೇಳಿದ್ದ. ಇದಕ್ಕೆ ನಾನು ಒಪ್ಪದಿದ್ದಾಗ ನನ್ನ ಮೇಲೆ ಇಲ್ಲ ಸಲ್ಲದ ಆರೋಪವನ್ನು ಮಾಡಿ ನನ್ನ ಮತ್ತು ನನ್ನ ಕುಟುಂಬದ ಮಾನಹಾನಿ ಮಾಡಿದ್ದಾನೆ. ಮತ್ತೊಮ್ಮೆ ಮದುವೆ ಮಾಡಿಕೊ ಎಂದು ಕೇಳಿದರೆ ಸಾಯಿಸಿಬಿಡುತ್ತೇನೆ ಎಂದು ಹೆದರಿಸಿದ್ದಾನೆ ” ಎಂದು ತನ್ನ ಧೂರಿನಲ್ಲಿ ಸಂತ್ರಸ್ತ ಯುವತಿ ತಿಳಿಸಿದ್ದಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top